Sunday, September 8, 2024

Latest Posts

ಇಂಥ ವಿಷಯಗಳನ್ನು ಯಾರಲ್ಲಿಯೂ ಶೇರ್ ಮಾಡಿಕೊಳ್ಳಬೇಡಿ.. ಭಾಗ 2

- Advertisement -

ಕಳೆದ ಭಾಗದಲ್ಲಿ ನಾವು ಯಾವ ವಿಷಯವನ್ನು ಸ್ನೇಹಿತರು, ಸಂಬಂಧಿಕರು ಅಥವಾ ಯಾರಲ್ಲಿಯೂ ಹೇಳಿಕೊಳ್ಳಬಾರದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 4 ಮಾತಿನ ಬಗ್ಗೆ ಮಾಹಿತಿ ನೀಡಿದ್ದೇವು. ಇನ್ನುಳಿದ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಸಿಕ್ರೇಟ್:  ಅವನು ನಂಗೆ ತುಂಬಾ ಬೆಸ್ಟ್ ಫ್ರೆಂಡ್, ಅವಳು ನನ್ನ ತಂಗಿ ಇದ್ದ ಹಾಗೆ ಅನ್ನೋ ಭಾವನೆಯನ್ನಿರಿಸಿಕೊಂಡು ನೀವು ನಿಮ್ಮ ಪರ್ಸನಲ್ ಲೈಫ್‌ನಲ್ಲಿ ನಡೆಯುವ ಸಂಗತಿ, ಅಥವಾ ನಿಮಗಿರುವ ಬ್ಯಾಡ್ ಹ್ಯಾಬಿಟ್, ಅಥವಾ ಇನ್ನಿತರೆ ಸಿಕ್ರೇಟ್‌ಗಳನ್ನ ಅವರ ಬಳಿ ಹೇಳಿದ್ರಿ ಅಂತಿಟ್ಟುಕೊಳ್ಳಿ. ಸಮಯ ಬಂದಾಗ ಅವರು, ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡಬಹುದು. ನೋಡು ನೀನು ಈ ಕೆಲಸವನ್ನು ಮಾಡದಿದ್ದಲ್ಲಿ, ನಾನು ನಿನ್ನ ಆ ಸಿಕ್ರೇಟ್ ಎಲ್ಲರಿಗೂ ಹೇಳಿಬಿಡ್ತೇನೆ ಅಂತಾ.

ಅಥವಾ ನೀವು ಯಾರಿಗೂ ಹೇಳಬೇಡ ಅಂತಾ ಹೇಳಿರುವ ಸಿಕ್ರೇಟನ್ನೇ ಅವರು ಇನ್ನೊಬ್ಬರ ಬಳಿ ಹೇಳಬಹುದು. ಆಗ ನೀವು ಮತ್ತೆ ಅವರ ಮೇಲೆಂದೂ ನಂಬಿಕೆ ಇರಿಸುವುದಿಲ್ಲ. ನೀವು ಕೂಡ ಇನ್ನೊಬ್ಬರ ಸಿಕ್ರೇಟನ್ನ ಮತ್ತೊಬ್ಬರ ಬಳಿ ಹೇಳಬೇಡಿ. ಯಾಕಂದ್ರೆ ಇದು ಕೂಡ ತಪ್ಪೇ.

ಒಳ್ಳೆಯ ಕಾರ್ಯಗಳು: ನೀವು ಜೀವನದಲ್ಲಿ ತುಂಬಾ ಉತ್ತಮ ಕಾರ್ಯಗಳನ್ನು ಮಾಡಿರುತ್ತೀರಿ. ಹಾಗೆ ಮಾಡಿದ ಕೆಲಸಗಳ ಬಗ್ಗೆ ಇನ್ನೊಬ್ಬರ ಬಳಿ ವಿವರಣೆ ನೀಡಬೇಡಿ. ಬದಲಾಗಿ ನೀವು ಮಾಡಿದ ಉತ್ತಮ ಕೆಲಸದ ವಿಷಯ ನಿಮ್ಮ ಬಳಿಯೇ ಇರಲಿ. ಅಥವಾ ನೀವು ಯಾರಿಗಾದರೂ ಕೆಲಸ ಕೊಡಿಸಿರುತ್ತೀರಿ. ಮನೆ ಕಟ್ಟಲು ಸಾಲ ಕೊಟ್ಟಿರುತ್ತೀರಿ. ಹೀಗೆ ಕಷ್ಟಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಿರುತ್ತೀರಿ. ಆದರೆ ಅವರು ಎದುರಿಗೆ ಸಿಕ್ಕಾಗ, ಅಥವಾ ಬೇರೆಯವರ ಬಳಿ ಮಾತನಾಡುವಾಗ, ನಾನು ಅವನಿಗೆ ಸಹಾಯ ಮಾಡಿದ್ದೆ, ಅದಕ್ಕೆ ಅವನೀಗ ಹೀಗಿದ್ದಾನೆ ಅಂತಾ ಹೇಳಿದ್ರೆ, ನಿಮ್ಮ ಬಗೆಗೆ ಎದುರಿಗಿದ್ದವರಿಗೆ ಇದ್ದ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ಹೀಗೆ ಹೆಲ್ಪ್ ಮಾಡಿದ ವಿಷಯವನ್ನು ಯಾರಲ್ಲಿಯೂ ಹೇಳಬೇಡಿ.

ನಿಮ್ಮ ಬಲಹೀನತೆ: ಯಾರ ಬಳಿಯೂ ನಿಮ್ಮ ಬಲಹೀನತೆ ಏನು..? ನಿಮಗೆ ಯಾವ ವಿಷಯದ ಬಗ್ಗೆ ಹೆದರಿಕೆ ಇದೆ ಎಂದು ಯಾರಲ್ಲಿಯೂ ಹೇಳಬೇಡಿ. ಅದು ನಿಮ್ಮ ಪತಿ ಅಥವಾ ಪತ್ನಿ, ಅಥವಾ ಸ್ನೇಹಿತರು, ಸಂಭಂಧಿಕರು ಹೀಗೆ ಯಾರೇ ಆದರೂ, ಅವರ ಬಳಿ ನಿಮ್ಮ ಬಲಹೀನತೆ ಮತ್ತು ಹೆದರಿಕೆ ಬಗ್ಗೆ ಮಾತನಾಡಬೇಡಿ. ಹಾಗೇನಾದರೂ ನೀವು ಈ ಬಗ್ಗೆ ಹೇಳಿಕೊಂಡರೆ, ಅವರು ನಿಮ್ಮ ಹಿಂದಿನಿಂದ ಮಾತನಾಡಿಕೊಂಡು ನಗುತ್ತಾರೆ. ನಿಮ್ಮ ಬಗ್ಗೆ ತಮಾಷೆ ಮಾಡುತ್ತಾರೆ. ಈ ಮೂಲಕ ನಿಮ್ಮ ಅವಮಾನ ಮಾಡುತ್ತಾರೆ.

- Advertisement -

Latest Posts

Don't Miss