ಈ ಹಿಂದೆ ನಾವು ಯಾವ 7 ವಿಷಯವನ್ನು ಯಾರಲ್ಲಿಯೂ ಹೇಳಬಾರದು ಅನ್ನೋ ಬಗ್ಗೆ 3 ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ.
ನಾಲ್ಕನೇಯ ಮಾತು ನೀವು ನಿಮ್ಮ ಬಳಿ ಯಾವ ಕಾಸ್ಟ್ಲಿ ವಸ್ತುಗಳಿದೆ. ನೀವು ಯಾವುದರ ಮಾಲೀಕರಿದ್ದೀರಿ ಅನ್ನೋ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನೀವು ಒಂದು ಅಂಗಡಿ ಮಾಲೀಕರೋ, ಅಥವಾ ಕಂಪೆನಿ ಮಾಲೀಕರೋ ಆಗಿರಬಹುದು. ಆದ್ರೆ ಯಾರಾದರೂ ಸಿಕ್ಕಾಗ ಅದರ ಬಗ್ಗೆ ನೀವು ಕೊಚ್ಚಿಕೊಳ್ಳಬೇಡಿ. ಅಲ್ಲದೇ ನನ್ನ ಬಳಿ ಬಂಗಲೆ, ಕಾರು, ಚಿನ್ನಾಭರಣವಿದೆ ಎಂದು ಯಾರಲ್ಲಿಯೂ ಕೊಚ್ಚಿಕೊಳ್ಳಬೇಡಿ.
ಮಕರ ಸಂಕ್ರಾಂತಿಯಂದು ಇಲ್ಲಿ ಸ್ನಾನ ಮಾಡಿದರೆ ಏಳು ಜನ್ಮಗಳ ಪಾಪಗಳು ದೂರವಾಗುತ್ತದೆ..!
ಯಾಕಂದ್ರೆ ಕೊಚ್ಚಿಕೊಳ್ಳೋಕ್ಕೆ ನಿಮಗೆ ಸಖತ್ ಖುಷಿಯಾಗಬಹುದು. ಆದ್ರೆ ಆ ಮಾತುಗಳು ಎದುರಿಗಿರುವವರ ಅಹಂಗೆ ಧಕ್ಕೆಯುಂಟು ಮಾಡುತ್ತದೆ. ಅವರು ನಿಮ್ಮೆದುರಿಗೆ ಏನೂ ಹೇಳದಿರಬಹುದು. ಆದರೆ, ನಿಮ್ಮನ್ನು ದ್ವೇಷಿಸಲು ಶುರು ಮಾಡಬಹುದು. ಹಾಗಾಗಿ ನಿಮ್ಮ ಬಳಿ ಏನಿದೆಯೋ, ಅದನ್ನ ನೀವೇ ಅನುಭವಿಸಿ ಹೊರತು, ಬೇರೆಯವರ ಬಳಿ ಕೊಚ್ಚಿಕೊಳ್ಳಬೇಡಿ.
ಐದನೇಯ ಮಾತು ನೀವು ಯಾರಿಗಾದರೂ ಸಹಾಯ ಮಾಡಿದ್ದರೆ, ದಾನ ಮಾಡಿದರೆ ಅದನ್ನು ಯಾರ ಬಳಿಯೂ ಹೇಳಬೇಡಿ. ಯಾಕಂದ್ರೆ ಈ ಸಮಾಜದಲ್ಲಿ ಹಲವರಿಗೆ ಸಹಾಯದ ಅವಶ್ಯಕತೆ ಇರುತ್ತದೆ. ಹಾಗಾಗಿ ನಿಮ್ಮ ಕೈಲಾದಷ್ಟು ಸಹಾಯ ಮಾಡುವ ಮನಸ್ಸು ನಿಮ್ಮದಾಗಿರಲಿ. ಆದ್ರೆ ನೀವು ಜಗತ್ತಿಗೆ ನೀವೇಷ್ಟು ಶ್ರೀಮಂತರು ಅಂತಾ ತೋರಿಸಲು ಸಹಾಯ ಮಾಡುತ್ತಿದ್ದಲ್ಲಿ, ಅಂಥ ಸಹಾಯ ಮಾಡಿ ಯಾವುದೇ ಪ್ರಯೋಜನವಿಲ್ಲ.
ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 1
ಆರನೇಯ ಮಾತು ನೀವು ಏನಾದರೂ ಸಾಧನೆ ಮಾಡಿದರೆ, ಆ ಸಾಧನೆಯ ಹಿಂದೆ ನೀವೆಷ್ಟು ಕಷ್ಟಪಟ್ಟಿದ್ದೀರಿ ಎಂದು ಯಾರಲ್ಲಿಯೂ ಹೇಳಬೇಡಿ. ಯಾಕಂದ್ರೆ ಕೆಲವರು ನಿಮ್ಮಸಾಧನೆ ಕಂಡು ಖುಷಿ ಪಟ್ಟಿರುತ್ತಾರೆ. ನಿಮ್ಮ ಬಗ್ಗೆ ಗೌರವ ಹೆಚ್ಚಿರುತ್ತದೆ. ಆದ್ರೆ ನೀವು ಕಷ್ಟಪಟ್ಟ ಸ್ಟೋರಿಯನ್ನ ಪದೇ ಪದೇ ಹೇಳುತ್ತಿದ್ರೆ, ಆ ಗೌರವ ಪ್ರೀತಿ ಖುಷಿ ಎಲ್ಲವೂ ಕಡಿಮೆಯಾಗುತ್ತದೆ.
ಏಳನೇಯ ಮತ್ತು ಕೊನೆಯ ಮಾತು, ನೀವು ನಿಮಗೆ ಬರುವ ಆದಾಯದ ಬಗ್ಗೆ ಯಾವತ್ತೂ ಯಾರಿಗೂ ಹೇಳಬಾರದು. ನಿಮ್ಮ ಸ್ಯಾಲರಿ ಎಷ್ಟು, ಅಥವಾ ನಿಮ್ಮ ವ್ಯಾಪಾರದಲ್ಲಿ ನಿಮಗೆಷ್ಟು ಲಾಭ ಬರುತ್ತದೆ ಅಂತಾ ಯಾರಲ್ಲಿಯೂ ಹೇಳಬಾರದು. ಹಾಗೆ ಹೇಳಿದ್ದಲ್ಲಿ, ಜನ ನಿಮ್ಮ ಜೀವನದ ಬಗ್ಗೆ ಅಂದಾಜು ಮಾಡುವುದನ್ನು ಪ್ರಾರಂಭಿಸುತ್ತಾರೆ. ನಿಮ್ಮ ಬಳಿ ಸಾಲ ಕೇಳುವವರ ಸಂಖ್ಯೆಯೂ ಹೆಚ್ಚಾಗಬಹುದು. ಹಾಗಾಗಿ ಯಾರಲ್ಲಿಯೂ ನಿಮ್ಮ ಆದಾಯದ ಬಗ್ಗೆ ಹೇಳಬೇಡಿ.