Health Tips: ಎಲ್ಲ ಅನಾರೋಗ್ಯ ಸಮಸ್ಯೆಗಳಿಗೂ ಕಾರಣ, ನಮ್ಮ ಹೊಟ್ಟೆ. ನಾವು ಉತ್ತಮ ಆಹಾರ ಸೇವಿಸಿದಾಗ, ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ. ಅದೇ ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ, ಹೊಟ್ಟೆಯ ಆರೋಗ್ಯ ಹದಗೆಡುತ್ತದೆ. ಆದರೆ ನಾವು ಹೊಟ್ಟೆಯಲ್ಲಾಗುವ ಎಲ್ಲ ತಳಮಳವನ್ನು ಗ್ಯಾಸ್‌ಸ್ಟ್ರಿಕ್ ಸಮಸ್ಯೆ ಎನ್ನುವಂತಿಲ್ಲ. ಹೊಟ್ಟೆ ಕ್ಯಾನ್ಸರ್ ಬಂದಾಗಲೂ, ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರಾದ ಡಾ. ಶಿವಕುಮಾರ್ ಉಪ್ಪಳ ಈ ಬಗ್ಗೆ ವಿವರಿಸಿದ್ದು, ಹೊಟ್ಟೆ ಕ್ಯಾನ್ಸರ್ ಇದ್ದಾಗಲೂ, ಅದನ್ನು ನೀವು ಗ್ಯಾಸ್ ಸಮಸ್ಯೆ ಅಂತಾ ಭಾವಿಸಬೇಡಿ ಅಂತಾರೆ. ತುಂಬಾ ಗ್ಯಾಸ್‌ಟ್ರಿಕ್ ಸಮಸ್ಯೆಯಾದಾಗ, ಹಲವರು ಆ ಬಗ್ಗೆ ನಿರ್ಲಕ್ಷಿಸಿ, ತಾವೇ ಮನೆಮದ್ದು ತೆಗೆದುಕೊಳ್ಳುತ್ತಾರೆ. ಅದಕ್ಕೊಂದು ಪರ್ಮನೆಂಟ್ ಸೊಲ್ಯೂಶನ್ ನೋಡುವುದಿಲ್ಲ. ಅಲ್ಲದೇ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವ ಸುದ್ದಿಗೇ ಹೋಗುವುದಿಲ್ಲ.
ಇಂಥ ಸಮಯದಲ್ಲೇ ಹೊಟ್ಟೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಹೊಟ್ಟೆ ಕ್ಯಾನ್ಸರ್ ಬಂದಾಗ, ಸರಿಯಾಗಿ ಊಟ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಸ್ವಲ್ಪ ಊಟ ಮಾಡಿದರೂ, ಹೊಟ್ಟೆ ತುಂಬಿದ ಹಾಗಾಗುತ್ತದೆ. ಸರಿಯಾಗಿ ಹಸಿವಾಗುವುದಿಲ್ಲ. ಹಾಗಾಗಿ ಇಂಥ ಲಕ್ಷಣಗಳು ಕಂಡುಬಂದಲ್ಲಿ, ವೈದ್ಯರ ಬಳಿ ಈ ಬಗ್ಗೆ ಪರೀಕ್ಷಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..