Friday, April 4, 2025

Latest Posts

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಇದನ್ನ ಸೇವಿಸಿ..

- Advertisement -

ರಾತ್ರಿ ನಿದ್ದೆ ಮಾಡುವುದು ಕೂಡ ಇಂದಿನ ಕಾಲದವರಿಗೆ ಒಂದು ಟಫ್ ಟಾಸ್ಕ್ ಅಂತಾನೇ ಹೇಳಬಹುದು. ಆಫೀಸಿನಲ್ಲಿ ಬಾಸ್ ಕಾಟ, ಮನೆಯಲ್ಲಿ ಪತಿ ಅಥವಾ ಪತ್ನಿ ಕಾಟ, ಮಕ್ಕಳ ಕಿರಿಕಿರಿ ಹೀಗೆ ಹತ್ತಾರು ಟೆನ್ಶನ್ ಇರುವವರಿಗೆ, ರಾತ್ರಿ ನಿದ್ದೆ ಬರೋದು ಎಷ್ಟು ಕಷ್ಟ ಅನ್ನೋದು, ಅದನ್ನ ಅನುಭವಿಸಿದವರಿಗೇ ಗೊತ್ತು. ಇನ್ನು ಕೆಲವರಿಗೆ ಟೆನ್ಶನ್ ಇಲ್ಲದಿದ್ದರೂ, ಮೈ ದಣಿಯದಿದ್ದಲ್ಲಿ, ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಅಂಥವರಿಗಾಗಿ ನಾವಿಂದು ಕೆಲ ರೆಸಿಪಿ ತಂದಿದ್ದೇವೆ. ಇದನ್ನು ನೀವು ಕುಡಿದು ಮಲಗಿದರೆ, ನಿಮಗೆ ಗಾಢವಾದ ನಿದ್ರೆ ಬರುತ್ತದೆ. ಹಾಗಂತ ನೀವು ಪ್ರತಿದಿನ ಇದನ್ನ ಕುಡಿದು ಮಲಗಬೇಡಿ. ಒಂದು ದಿನ ಬಿಟ್ಟು ಒಂದು ದಿನ ಲಿಮಿಟಿನಲ್ಲಿ ಕುಡಿಯಿರಿ. ಹಾಗಾದ್ರೆ ಅದ್ಯಾವ ರೆಸಿಪಿ ಅಂತಾ ತಿಳಿಯೋಣ ಬನ್ನಿ..

ನಾವಿಂದು ಹೇಳುತ್ತಿರುವ ರೆಸಿಪಿ ಗಸಗಸೆ ಹಾಲು. ಗಸಗಸೆ ತಿಂದರೆ, ಅದು ಮತ್ತಿನಂತೆ ಕೆಲಸ ಮಾಡುತ್ತದೆ. ಹಾಗಾಗಿಯೇ ಕೆಲವರು ಚಿಕ್ಕ ಮಕ್ಕಳಿಗೆ ಗಸಗಸೆ ಹಾಲು ಕುಡಿಸಿ, ನಿದ್ದೆ ಮಾಡಿಸುತ್ತಾರೆ. ಗಸಗಸೆ ಪಾಯಸ ತಿಂದರೆ ಒಳ್ಳೆಯ ನಿದ್ದೆ ಬರುತ್ತದೆ. ಹಾಗಾಗಿ ಒಂದಿನ ಬಿಟ್ಟು ಒಂದಿನ ರಾತ್ರಿ ಮಲಗುವ ಸಮಯದಲ್ಲಿ ನೀವು ಗಸಗಸೆ ಹಾಲು ಕುಡಿಯಬಹುದು. ಆದರೆ ಅದು ಲಿಮಿಟಿನಲ್ಲಿರಲಿ.

ಮೊದಲು ಗಸಗಸೆ ಪುಡಿಯನ್ನ ಚೆನ್ನಾಗಿ ಹುರಿದು, ಪುಡಿ ಮಾಡಿ. ರಾತ್ರಿ ಮಲಗುವಾಗ, ಎರಡು ಸ್ಪೂನ್ ಹಾಲಿಗೆ ಹಾಕಿ, ಕುದಿಸಿ, ನಂತರ ಚಿಟಿಕೆ ಜಾಯಿಕಾಯಿ ಪುಡಿ ಹಾಕಿ, ಬೆಲ್ಲ ಸೇರಿಸಿ, ಬಿಸಿ ಬಿಸಿ ಹಾಲನ್ನ ಕುಡಿಯಿರಿ. ಅಥವಾ ಗಸಗಸೆ ಪಾಯಸ ಮಾಡಿ ಕುಡಿದರೂ ಉತ್ತಮ.

ಅಥವಾ ರಾತ್ರಿ ಮಲಗುವಾಗ ಹಾಲಿಗೆ, ಕೊಂಚ ಅರಿಶಿನ, ಕಲ್ಲುಸಕ್ಕರೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಜೀರಿಗೆ, ಶುಂಠಿ, ಇವಿಷ್ಟನ್ನು ಜಜ್ಜಿ ಹಾಕಿ, ಚೆನ್ನಾಗಿ ಕುದಿಸಿ, ಕುಡಿಯಿರಿ. ಇದರಿಂದಲೂ ಉತ್ತಮ ನಿದ್ದೆ ಬರುತ್ತದೆ. ಅಲ್ಲದೇ ಇದನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

ದಾಳಿಂಬೆ ಸಿಪ್ಪೆಯಲ್ಲಿದೆ ಆರೋಗ್ಯ, ಸೌಂದರ್ಯ ವೃದ್ಧಿಸುವ ಗುಣ..

ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಯಾಕೆ ಮಾಡಬೇಕು..?

- Advertisement -

Latest Posts

Don't Miss