ಹಾಲನ್ನ ಯಾವಾಗಲೂ ಸರಿಯಾಗಿ ಕಾಯಿಸಿಯೇ ಕುಡಿಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಸಿ ಹಾಲು ಆರೋಗ್ಯಕ್ಕೆ ಉತ್ತಮವಲ್ಲ ಅಂತಾ. ಆದ್ರೆ ಕೆಲವರು ಹಾಲನ್ನ ಹಸಿಯಾಗಿಯೇ ಕುಡಿಯುತ್ತಾರೆ. ಹಾಗಾದ್ರೆ ಹಸಿ ಹಾಲನ್ನ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ, ನಷ್ಟವೋ ಅಂತಾ ತಿಳಿಯೋಣ ಬನ್ನಿ..
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?
ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಇದರಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ, ಸೇರಿ ಹಲವು ಪೋಷಕಾಂಶಗಳಿದೆ. ಮೂಳೆ ಗಟ್ಟಿಯಾಗಲು, ಕೂದಲು ಸಧೃಡವಾಗಲು ಹಾಲಿನ ಸೇವನೆ ಸಹಾಯಕವಾಗುತ್ತದೆ. ಹಸುವಿನ ಹಾಲು ಕುಡಿಯುವಾಗ, ಕಾಯಿಸಿಯೇ ಕುಡಿಯಬೇಕು. ಯಾಕಂದ್ರೆ ನೀವು ಹಸುವಿನ ಹಾಲು ಕಾಯಿಸಿ ಕುಡಿದಾಗಲೇ, ಅದು ಸರಿಯಾಗಿ ಜೀರ್ಣ ಆಗೋದು.
ಹಸಿ ಹಾಲು ಆರೋಗ್ಯಕರವೇ ಆಗಿದೆ. ಆದ್ರೆ ಅದನ್ನು ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಜೀರ್ಣಕ್ರಿಯೆ ಸಮಸ್ಯೆ ಇದ್ದವರು, ಗರ್ಭಿಣಿಯರು, ಪುಟ್ಟ ಮಕ್ಕಳಿಗೆ ಹಸಿ ಹಾಲನ್ನ ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಹಾಗಾಗಿ ಅಂಥವರು ಹಸಿ ಹಾಲನ್ನ ಕುಡಿಯಬಾರದು. ಹಾಗಾಗಿ ಕಾಯಿಸಿದ ಹಾಲು, ಹಸಿ ಹಾಲಿಗಿಂತ ಎಷ್ಟೋ ಪಟ್ಟು ಉತ್ತಮ ಅಂತಾ ಹೇಳಲಾಗಿದೆ.
ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (OIL PULLING) ಏನು ಲಾಭ..?
ವಾತ, ಪಿತ್ತ, ಕಫ ದೋಷಗಳನ್ನು ನಿವಾರಿಸಲು ಹಾಲು ಸಹಕಾರಿಯಾಗಿದೆ. ನೀವು ರಾತ್ರಿ ಮಲಗುವಾಗ ಹಾಲು ಕುಡಿದು ಮಲಗಿದ್ರೆ ಉತ್ತಮ., ಹೀಗೆ ಹಾಲು ಕುಡಿಯುವಾಗ ಅದರಲ್ಲಿ ಚಿಟಿಕೆ ಅರಿಶಿನ, ಪೆಪ್ಪರ್ ಪುಡಿ ಮತ್ತು ಕೊಂಚ ಕಲ್ಲುಸಕ್ಕರೆ ಹಾಕಿ, ಕುಡಿಯಿರಿ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಒಳ್ಳೆ ನಿದ್ರೆ ಬರಲು ಕೂಡ ಇದು ಸಹಕಾರಿಯಾಗಿದೆ. ಇನ್ನು ಚಿಕ್ಕ ಮಕ್ಕಳಿಗೆ ಬೆಳಿಗ್ಗೆ ಹಾಲು ಕುಡಿಯಲು ಕೊಡಬೇಕು. ಅವರಿಗೆ ಜೀರ್ಣಿಸಿಕೊಳ್ಳುವ ಶಕ್ತಿ ಇದ್ದರೆ, ಎರಡು ಹೊತ್ತು ಕೂಡ ಹಾಲು ಕುಡಿಯಲು ಕೊಡಬಹುದು.

