Friday, September 20, 2024

Latest Posts

ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..

- Advertisement -

ಎಲ್ಲ ಅಪ್ಪ ಅಮ್ಮಂದಿರಿಗೂ ತಮ್ಮ ಮಕ್ಕಳು ಚುರುಕಾಗಿರಬೇಕು, ಆರೋಗ್ಯಕರವಾಗಿರಬೇಕು ಅಂತಾ ಆಸೆ ಇರುತ್ತದೆ. ಆದ್ರೆ ಮಕ್ಕಳು ಸರಿಯಾಗಿ ಆಹಾರವನ್ನೇ ಸೇವಿಸದಿದ್ದರೆ, ಎಲ್ಲಿಂದ ಆರೋಗ್ಯಕರವಾಗಿರಬೇಕು..? ಹಾಗಾಗಿ ನೀವು ಅವರಿಗೆ ಆರೋಗ್ಯದ ಜೊತೆ ರುಚಿಕರವಾದ ತಿಂಡಿಯನ್ನು ಮಾಡಿಕೊಡಬೇಕು. ಇಂದು ನಾವು ಡ್ರೈಫ್ರೂಟ್ಸ್ ಲಡ್ಡು ಹೇಗೆ ತಯಾರಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಬೇಕಾಗುವ ಸಾಮಗ್ರಿ : ಒಂದು ದೊಡ್ಡ ಬೌಲ್ ಸಪರೇಟ್ ಆಗಿ ಹುರಿದುಕೊಂಡ ಗೋಡಂಬಿ- ಬಾದಾಮ್- ಪಿಸ್ತಾ- ಅಖ್ರೋಟ್- ಶೇಂಗಾ- ಕುಂಬಳಕಾಯಿ ಬೀಜ- ಕಲ್ಲಂಗಡಿ ಬೀಜದ ಮಿಶ್ರಣ. ನಾಲ್ಕು ಹಸಿ ಖರ್ಜೂರ, ನಾಲ್ಕು ಅಂಜೂರ, ಒಂದು ಸ್ಪೂನ್ ಕಪ್ಪು ದ್ರಾಕ್ಷಿ, ಒಂದು ಸ್ಪೂನ್ ಬಿಳಿ ದ್ರಾಕ್ಷಿ, ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ರಾಗಿ ಹಿಟ್ಟು, ರುಚಿಗೆ ತಕ್ಕಷ್ಟು ಬೆಲ್ಲ, ನಾಲ್ಕು ಸ್ಪೂನ್ ತುಪ್ಪ.

ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..

ಮಾಡುವ ವಿಧಾನ : ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಹುರಿದಿಟ್ಟುಕೊಂಡ ಡ್ರೈಫ್ರೂಟ್ಸನ್ನು ಸೇರಿಸಿ, ಪುಡಿ ಮಾಡಿ. ಒಂದು ಬೌಲ್‌ನಲ್ಲಿ ತೆಗೆದಿಡಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು, ಅದಕ್ಕೆ ಎರಡು ಸ್ಪೂನ್ ತುಪ್ಪ ಹಾಕಿ, ಘಮ ಬರುವವರೆಗೂ ಗೋಧಿ ಹುರಿಯಿರಿ. ಇದನ್ನು ಡ್ರೈಫ್ರೂಟ್ಸ್ ಪೌಡರ್ ಇರುವ ಬೌಲ್‌ಗೆ ಸೇರಿಸಿ. ಈಗ ಅದೇ ಪ್ಯಾನ್‌ಗೆ ಇನ್ನೆರಡು ಸ್ಪೂನ್ ತುಪ್ಪ ಹಾಕಿ, ಅದಕ್ಕೆ ರಾಗಿ ಹಿಟ್ಟು ಹಾಕಿ, ಘಮ ಬರುವವರೆಗೂ ಹುರಿಯಿರಿ. ಇದನ್ನೂ ಕೂಡ ಪುಡಿಗೆ ಸೇರಿಸಿ.

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಈಗ ಮಿಕ್ಸಿ ಜಾರ್‌ಗೆ ದ್ರಾಕ್ಷಿ, ಅಂಜೂರ, ಮತ್ತು ಖರ್ಜೂರ್ ಹಾಕಿ ರುಬ್ಬಿ, ಈ ಪೇಸ್ಟ್‌ಗೆ ರಾಗಿ, ಗೋಧಿ, ಡ್ರೈಫ್ರೂಟ್ಸ್‌ ಪುಡಿ ಹಾಕಿ ಮತ್ತೆ ರುಬ್ಬಿ. ಈಗ ಲಡ್ಡು ಮಾಡಲು ಬೇಕಾಗುವ ಪುಡಿ ರೆಡಿ. ಈಗ ಪ್ಯಾನ್ ಇರಿಸಿ, ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ಬೆಲ್ಲವನ್ನುಸೇರಿಸಿ ಮಂದ ಉರಿಯಲ್ಲಿ ಬೆಲ್ಲದ ಪಾಕ ತಯಾರಿಸಿ, ಹೆಚ್ಚು ಸಿಹಿ ಹಾಕಬೇಡಿ. ಯಾಕಂದ್ರೆ ಇದರಲ್ಲಿ ದ್ರಾಕ್ಷಿ, ಅಂಜೂರ ಮತ್ತು ಖರ್ಜೂರವಿದೆ.

ಸೊಳ್ಳೆಗಳಿಂದ ಮುಕ್ತಿ ಹೊಂದಬೇಕಾದಲ್ಲಿ ಈ ಮೂರು ಟ್ರಿಕ್ಸ್ ಬಳಸಿ..

ಈಗ ಈ ಪಾಕಕ್ಕೆ ಗ್ರೈಂಡ್ ಮಾಡಿದ ಮಿಶ್ರಣ ಸೇರಿಸಿ, ಗ್ಯಾಸ್ ಆಫ್ ಮಾಡಿ. ಕೊಂಚ ತಣ್ಣಗಾದ ಮೇಲೆ ಚಿಕ್ಕ ಚಿಕ್ಕ ಲಾಡು ತಯಾರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಒಂದು ಲಾಡುವನ್ನ ನಿಮ್ಮ ಮಗುವಿಗೆ ಕೊಡಿ. ಇದಾದ ಬಳಿಕ ಉಗುರು ಬೆಚ್ಚಗಿನ ಹಾಲು ಕೊಡಿ. ಒಂದೆರಡು ತಾಸು ಬಿಟ್ಟು ತಿಂಡಿ ಕೊಡಿ. ಆದ್ರೆ ನೆನಪಿರಲಿ ದಿನಕ್ಕೆ ಒಂದು ಲಾಡು ಮಾತ್ರ ಕೊಡಿ. ಹೆಚ್ಚು ಕೊಟ್ಟರೆ, ಮಲ ವಿಸರ್ಜನೆಗೆ ತೊಂದರೆಯಾಗುತ್ತದೆ.

- Advertisement -

Latest Posts

Don't Miss