Wednesday, October 15, 2025

Latest Posts

ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ರೆಸಿಪಿ

- Advertisement -

ನೀವು ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿರ್ತೀರಿ ಅಥವಾ ಹೊಟೇಲ್‌ಗೆ ಹೋಗಿ, ಕುಡಿದಿರ್ತೀರಿ. ಆದರೆ ನೀವು ರುಚಿಕರವಾದ ಡ್ರೈಫ್ರೂಟ್ಸ್ ಮಿಲ್ಕ್‌ ಶೇಕ್ ರೆಸಿಪಿಯನ್ನ ಅಪರೂಪಕ್ಕೆ ಟ್ರೈ ಮಾಡಿರಬಹುದು. ಅದೇ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕನ್ನ ನೀವು ಮನೆಯಲ್ಲೇ ಹೇಗೆ ತಯಾರಿಸಬಹುದು..? ಅದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನಾವಿಂದು ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: 4 ಬಾದಾಮಿ, 6 ಕಾಜು, 8 ಪಿಸ್ತಾ, ಚಿಟಿಕೆ ಏಲಕ್ಕಿ ಪುಡಿ, 3 ಖರ್ಜೂರ, 2 ಅಂಜೂರ, 10 ಒಣದ್ರಾಕ್ಷಿ, ಒಂದು ಗ್ಲಾಸ್ ಕಾಯಿಸಿ, ತಣಿಸಿದ ಹಾಲು. ಕೊಂಚ ವೆನಿಲ್ಲಾ ಎಸೆನ್ಸ್.

ಮಾಡುವ ವಿಧಾನ: ಜ್ಯೂಸರ್ ಜಾರ್‌ಗೆ, ಬಾದಾಮಿ, ಗೋಡಂಬಿ, ಪಿಸ್ತಾ, ಏಲಕ್ಕಿ ಪುಡಿ ಹಾಕಿ, ಪುಡಿ ಮಾಡಿಕೊಳ್ಳಿ. ಈಗ ಇದಕ್ಕೆ ಖರ್ಜೂರ, ಅಂಜೂರ, ಒಣದ್ರಾಕ್ಷಿ, ಕಾಲು ಕಪ್‌ ಹಾಲು ಹಾಕಿ ಮತ್ತೆ ಪೇಸ್ಟ್ ತಯಾರಿಸಿ. ಈಗ ಇದಕ್ಕೆ ಒಂದು ಗ್ಲಾಸ್ ಹಾಲು, ಎರಡು ಐಸ್‌ಕ್ಯೂಬ್ಸ್ ಹಾಕಿ, ಗ್ರೈಂಡ್ ಮಾಡಿ. ಈಗ ಮಿಲ್ಕ್ ಶೇಕ್ ರೆಡಿ. ಇದಕ್ಕೆ ವೆನಿಲ್ಲಾ ಎಸೆನ್ಸ್, ಒಂದಿಷ್ಟು ತರಿತರಿಯಾಗಿ ಪುಡಿ ಮಾಡಿಕೊಂಡ ಡ್ರೈಫ್ರೂಟ್ಸ್ ಸೇರಿಸಿದರೆ, ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ರೆಡಿ.

ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?

ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

- Advertisement -

Latest Posts

Don't Miss