Spiritual: ನೀವು ಹಲವರನ್ನು ಗಮನಿಸಿ, ಅವರ ನಿಧನದ ವೇಳೆ ಅವರು ಕೆಲ ವಿಷಯಗಳನ್ನು ಹೇಳಬೇಕು ಎಂದುಕೊಳ್ಳುತ್ತಾರೆ. ಆದರೆ ಕೊನೆಗೆ ಮಾತು ಬಾರದೇ, ಹೇಳುವ ಮಾತನ್ನು ತಮ್ಮಲ್ಲೇ ಇರಿಸಿಕೊಂಡು ಪ್ರಾಣ ಬಿಡುತ್ತಾರೆ. ಹೀಗೆ ಮರಣದ ವೇಳೆ ಮಾತು ಬಾರದಂತಾಗಲು ಕೂಡ ಗರುಡ ಪುರಾಣದಲ್ಲಿ ಕಾರಣವಿದೆ. ಹಾಗಾದ್ರೆ ಆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಹುಟ್ಟಿದ ಪ್ರತೀ ಜೀವಿ ಒಂದಲ್ಲ ಒಂದು ದಿನ ಸಾಯಲೇಬೇಕು ಎನ್ನುವ ವಿಷಯ ಎಲ್ಲರಿಗೂ ಗೊತ್ತು. ಆದರೂ ಕೂಡ ಯಾರೂ ಮರಣವನ್ನು ಬಯಸುವುದಿಲ್ಲ. ತಾನು ಅದನ್ನು ಪಡೆದುಕೊಳ್ಳಬೇಕು, ಅಲ್ಲಿ ಹೋಗಬೇಕು, ಇಂಥ ಆಹಾರಗಳನ್ನು ಒಮ್ಮೆಯಾದರೂ ಸೇವಿಸಬೇಕು. ಹೀಗೆ ಹತ್ತು ಹಲವು ಆಸೆಗಳನ್ನು ಸಾಯುವವರೆಗೂ ಇಟ್ಟುಕೊಂಡಿರುತ್ತಾನೆ. ಕೊನೆಗೆ ಎಲ್ಲ ಮಾತುಗಳನ್ನು, ಆಸೆಗಳನ್ನು ತನ್ನಲೇ ಉಳಿಸಿಕೊಂಡು, ಕೊನೆಯುಸಿರೆಳೆಯುತ್ತಾನೆ.
ಸಾವು ಸಮೀಪ ಬಂದಾಗ, ಸಂಬಂಧದ ಬೆಲೆ ಗೊತ್ತಾಗುತ್ತದೆಯಂತೆ. ಯಾಕಂದ್ರೆ ನಾವು ಜೀವನವಿಡೀ, ದ್ವೇಷ, ಅಸೂಯೆ, ಕೋಪದಲ್ಲೇ ಕಾಲ ಕಳೆದಿರುತ್ತೇವೆ. ಕೊನೆಗೆ ಬಿಟ್ಟು ಹೋಗುವ ಸಂದರ್ಭ ತುಂಬಾ ಸಮೀಪವಾದಾಗ, ತಾನು ಹಾಗೆ ಮಾಡಬಾರದಿತ್ತು ಎಂಬ ಪಾಪಪ್ರಜ್ಞೆ ನಮ್ಮನ್ನು ಕಾಡುತ್ತದೆ. ಆಗ ಸಂಬಂಧದ ಬೆಲೆ ಅರ್ಥವಾಗುತ್ತದೆ. ಆಗ ಮನುಷ್ಯ ತನ್ನ ಜೀವನವನ್ನು, ತಾನು ಬದುಕಿದ ರೀತಿಯನ್ನು ಒಮ್ಮೆ ನೆನೆಯುತ್ತಾನೆ. ಬಳಿಕ ಪ್ರಾಣ ಬಿಡುತ್ತಾನೆ.
ಪ್ರಾಣ ಬಿಡುವ ವೇಳೆ ಅವರಿಗೆ ತಮ್ಮನ್ನು ಎಳೆದುಕೊಂಡು ಹೋಗಲು ಯಮಕಿಂಕರರು ಬರುವುದು ಕಾಣುತ್ತದೆ. ಅವರ ಭಯಂಕರ ವೇಷವನ್ನು ಕಂಡು ಮನುಷ್ಯನ ಮಾತು ನಿಲ್ಲುತ್ತದೆ ಎಂದು ಹೇಳಲಾಗಿದೆ. ಯಮಕಿಂಕರರು ಬಂದು, ಮನುಷ್ಯನನ್ನನು ಯಮಲೋಕಕ್ಕೆ ಕರೆದುಕೊಂಡು ಹೋಗುವಾಗ, ಅವನಿಗೆ ಎಲ್ಲಿಲ್ಲದ ಹಿಂಸೆಯಾಗುತ್ತದೆ. ಆ ಹಿಂಸೆಗೆ ಮನುಷ್ಯ ಮಾತು ಮರೆಯುತ್ತಾನೆ ಎಂದು ಗರುಡಪುರಾಣದಲ್ಲಿ ಹೇಳಲಾಗಿದೆ..
ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..
ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..
ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..