Friday, November 22, 2024

Latest Posts

ಮಹಾದೇವ ಯಾರ ತಪ್ಪಿನಿಂದಾಗಿ ರಿಷಭ ಅವತಾರ ತೆಗೆದುಕೊಳ್ಳಬೇಕಾಯಿತು ಗೊತ್ತಾ..?

- Advertisement -

ಲೋಕ ಕಲ್ಯಾಣಕ್ಕಾಗಿ ದೇವ, ದೇವತೆಗಳು ಹಲವು ಅವತಾರಗಳು ಎತ್ತಿದ್ದರ ಬಗ್ಗೆ ಪೌರಾಣಿಕ ಕತೆಗಳಿದೆ. ಅದೇ ರೀತಿ ಶಿವ ಕೆಲವರ ತಪ್ಪಿನಿಂದಾಗಿ, ರಿಷಭನ ಅವತಾರ ತೆಗೆದುಕೊಳ್ಳಬೇಕಾಯಿತು. ಹಾಗಾದ್ರೆ ಯಾರ ತಪ್ಪಿನಿಂದಾಗಿ ಶಿವ ಈ ಅವತಾರ ತೆಗೆದುಕೊಳ್ಳಬೇಕಾಯಿತು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮಹಾಭಾರತ ಯುದ್ಧದಲ್ಲಿ ಗೆದ್ದ ಬಳಿಕ, ಯುಧಿಷ್ಟಿರನಿಗೆ ತಾವು ಎಷ್ಟೆಲ್ಲ ಜನರ ಜೀವ ಹರಣ ಮಾಡಿದ್ದೇವೆಂಬ ಪಶ್ಚಾತಾಪ ಉಂಟಾಯಿತು. ಗುರು ಶಿಷ್ಯರು ಪರಸ್ಪರ ಯುದ್ಧ ಮಾಡಿದರು. ಸಹೋದರರನ್ನ ಸಹೋದರರೇ ಕೊಂದರು. ಹಲವು ಮಹಿಳೆಯರು ವಿಧವೆಯರಾದರು. ರಾಜರ ಯುದ್ಧಕ್ಕಾಗಿ ಎಷ್ಟೋ ಸೈನಿಕರು ಪ್ರಾಣ ತ್ಯಾಗ ಮಾಡಿದರು. ಯುದ್ಧ ಭೂಮಿ ರಕ್ತ ಸಿಕ್ತವಾಗಿತ್ತು. ಹಾಗಾಗಿ ಪಾಂಡವರಲ್ಲಿ ಗೆದ್ದ ಸಂತೋಷಕ್ಕಿಂತ, ಹೀಗೆ ರಕ್ತಪಾತವಾದ ಯುದ್ಧಭೂಮಿ ಕಂಡೇ, ಬೇಸರವಾಗಿತ್ತು.

ಈ ಪಾಪದ ಪಶ್ಚಾತಾಪಕ್ಕಾಗಿ ಪಾಂಡವರು ಶ್ರೀಕೃಷ್ಣನಲ್ಲಿ ಪರಿಹಾರ ಕೇಳಿದರು. ಪಾಂಡವರು ಬ್ರಹ್ಮಹತ್ಯೆ, ಗೌತ್ರಹತ್ಯೆ, ಕುಲಹತ್ಯೆ, ಗುರುಹತ್ಯೆ ಮಾಡಿದ್ದರು. ಹಾಗಾಗಿ ಶ್ರೀಕೃಷ್ಣ, ಶಿವನಲ್ಲಿ ಹೋಗಿ, ಕ್ಷಮೆ ಕೇಳಿ ಎಲ್ಲ ಸರಿಯಾಗುತ್ತದೆ ಎಂದು ಹೇಳುತ್ತಾನೆ. ಶ್ರೀಕೃಷ್ಣನ ಮಾತಿನಂತೆ, ಪಾಂಡವರು ಶಿವನ ದರ್ಶನಕ್ಕೆ ಹೋಗುತ್ತಾರೆ. ಕಾಶಿಗೆ ಹೋಗಲು ನಿರ್ಧರಿಸುತ್ತಾರೆ.

ಆದ್ರೆ ಶಿವ ಪಾಂಡವರ ಕೆಲಸದಿಂದ ಕ್ರೋಧಕ್ಕೊಳಗಾಗಿರುತ್ತಾನೆ. ಪಾಂಡವರು ಬ್ರಹ್ಮಹತ್ಯೆ ಮಾಡಿದ್ದಕ್ಕಾಗಿ ಶಿವನಿಗೆ ಕೋಪ ಬಂದಿರುತ್ತದೆ. ಪಾಂಡವರು ಕಾಶಿಗೆ ಬರುತ್ತಿರುವ ವಿಷಯ ತಿಳಿದ ಶಿವ, ಕಾಶಿಯಿಂದ ಹೊರಡುತ್ತಾನೆ. ಇತ್ತ ಕಾಶಿಗೆ ಬಂದ ಪಾಂಡವರಿಗೆ ಶಿವ ದರ್ಶನವಾಗುವುದಿಲ್ಲ. ನಂತರ ಅವರು ಹಿಮಾಲಯಕ್ಕೆ ಹೋಗುತ್ತಾರೆ. ಅಲ್ಲಿಂದಲೂ ಶಿವ ಬೇರೆಡೆ ಹೋಗಿರುತ್ತಾನೆ. ಅಲ್ಲಿಯೂ ಪಾಂಡವರಿಗೆ ಶಿವ ಸಿಗುವುದಿಲ್ಲ.

ಕೇದಾರನಾಥದಲ್ಲಿ ಶಿವನಿರುವ ವಿಷಯ ತಿಳಿಯುತ್ತದೆ. ಹಾಗಾಗಿ ಪಾಂಡವರೆಲ್ಲ ಕೇದಾರನಾಥಕ್ಕೆ ಹೋಗುತ್ತಾರೆ. ಈ ಪಾಂಡವರು ತಾನೆಲ್ಲಿದ್ದರೂ ಹುಡುಕಲು ಬರುತ್ತಾರೆಂದು, ತಿಳಿದ ಶಿವ ಒಂದು ಉಪಾಯ ಮಾಡಿದ. ಕೇದಾರನಾಥದಲ್ಲಿ ಕೆಲವು ಹಸುಗಳು ಗುಂಪುಕಟ್ಟಿ ನಿಂತಿದ್ದವು. ಅವುಗಳ ಮಧ್ಯೆ ಹೋದ ಶಿವ, ವೃಷಭ ರೂಪ ತಾಳಿ ನಿಂತಿದ್ದ. ಭೀಮನಿಗೆ ಶಿವ ಇಲ್ಲೇ ಎಲ್ಲೋ ಇದ್ದಾರೆ ಎಂದು ಗೊತ್ತಾಯಿತು.

ಆಗ ಭೀಮ ದೈತ್ಯ ರೂಪ ತಾಳಿದ. ಅಲ್ಲಿರುವ ಹಸುಗಳೆಲ್ಲ ಭೀಮನ ದೈತ್ಯ ರೂಪ ಕಂಡು, ಅತ್ತಿಂದ ಇತ್ತ ಹೆದರಿ ಓಡತೊಡಗಿದವು. ಆದರೆ ವೃಷಭ ರೂಪದಲ್‌ಲಿದ್ದ ಶಿವ ಮಾತ್ರ, ಭೀಮನ ರೂಪ ಕಂಡು, ಇದ್ದ ಜಾಗದಲ್ಲೇ ನಿಂತಿತ್ತು. ಇದನ್ನು ಕಂಡ ಭೀಮ, ಇವರೇ ಶಿವನಿರಬೇಕೆಂದು ಗುರುತಿಸಿದ. ಅವರನ್ನು ಹಿಡಿಯಲು ಹೋಗಬೇಕೆನ್ನುವಾಗ, ಶಿವ ಇದ್ದ ಜಾಗದಲ್ಲೇ ಭೂಮಿಯ ಒಳಗೆ ಹೋಗಲು ಪ್ರಯತ್ನಿಸಿದ. ಆದರೆ ಭೀಮ ತನ್ನೆರಡು ಕೈಗಳಿಂದ ಶಿವನನ್ನು ತಡೆಯಲು ಹೋದ, ಆಗ ವೃಷಭ ರೂಪಿ ಶಿವ 4 ಪಾಲಾದ ಎಂದು ಹೇಳಲಾಗಿದೆ. ಕೇದಾರನಾಥದಲ್ಲಿರುವ ನಾಲ್ಕು ದೇವಸ್ಥಾನಗಳಲ್ಲಿ ಈ ನಾಲ್ಕು ಭಾಗ ಹಂಚಿಹೋಗಿದೆ ಎಂದು ಹೇಳಲಾಗಿದೆ.

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ರೆಮಿಡಿ ಫಾಲೋ ಮಾಡಿ..

- Advertisement -

Latest Posts

Don't Miss