Friday, April 18, 2025

Latest Posts

ಕಿವಿ ನೋವು ಕಡಿಮೆ ಮಾಡಲು ಈ ಡ್ರಾಪ್ಸ್ ಬಳಸಿ..

- Advertisement -

ತಲೆನೋವು, ಹೊಟ್ಟೆ ನೋವು, ಕೈ ಕಾಲು ನೋವು ಇದೆಲ್ಲ ಇಂದಿನ ಪೀಳಿಗೆಯವರಿಗೆ ಆಗಾಗ ಬರೋದು ಕಾಮನ್ ಆಗಿದೆ. ಆದ್ರೆ ಕಿವಿ ನೋವು ಮಾತ್ರ ಯಾವಾಗಲಾದರೂ ಬರತ್ತೆ. ಆದ್ರೆ ಒಮ್ಮೆ ಬಂದ್ರೆ, ಸರಿಯಾಗಿ ತೊಂದರೆ ಕೊಟ್ಟು ಹೋಗತ್ತೆ. ಯಾವ ಕೆಲಸವನ್ನು ಸರಿಯಾಗಿ ಮಾಡೋಕ್ಕೆ ಆಗಲ್ಲ. ನೆಮ್ಮದಿಯಾಗಿ ನಿದ್ರಿಸೋಕ್ಕೂ ಆಗಲ್ಲ. ಅದರಲ್ಲೂ ವಯಸ್ಸಾದವರಿಗೆ ಹೆಚ್ಚು ಕಿವಿ ನೋವು ಬರೋದು. ಹಾಗಾಗಿ ನಾವಿಂದು ಕಿವಿ ನೋವಿಗಾಗಿ ಮನೆಯಲ್ಲೇ ಒಂದು ಡ್ರಾಪ್ಸ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..

ಕೆಲವೊಮ್ಮೆ ಮಕ್ಕಳಿಗೆ ಕಿವಿ ನೋವು ಬರುತ್ತದೆ. ಅವರನ್ನ ವೈದ್ಯರ ಬಳಿ ಕರೆದೊಯ್ದರೂ ಕೂಡ, ವೈದ್ಯರು ಕೊಡುವ ಮದ್ದಿನ ಪರಿಣಾಮ ಇರುವ ತನಕ ಮಾತ್ರ, ಮಕ್ಕಳು ಸುಮ್ಮನಿರುತ್ತಾರೆ. ಆ ಔಷದಿಯ ಪರಿಣಾಮ ಕಡಿಮೆಯಾದ ಮೇಲೆ ಮತ್ತೆ ಕಿವಿ ನೋವು ಶುರುವಾಗುತ್ತದೆ. ಹಾಗಾಗಿ ಅದಕ್ಕಾಗಿ ನಾವಿಂದು ಮನೆಮದ್ದನ್ನ ಹೇಳಲಿದ್ದೇವೆ.

ಸಾಸಿವೆ ಎಣ್ಣೆ ಅಥವಾ ತೆಂಗಿನ ಎಣ್ಣೆ ಅಥವಾ ಹಸುವಿನ ಶುದ್ಧ ತುಪ್ಪ, ಯಾವುದಾದರೂ ಒಂದನ್ನ ಒಂದು ಸ್ಪೂನ್ ತೆಗೆದುಕೊಂಡು, ಅದರಲ್ಲಿ ನಾಲ್ಕು ಮೆಂತ್ಯೆ ಕಾಳು ಹಾಕಿ, ಚೆನ್ನಾಗಿ ಬಿಸಿ ಮಾಡಿ. ಈ ಎಣ್ಣೆ ತಣ್ಣಗಾದ ಮೇಲೆ ಒಂದು ಡ್ರಾಪ್ ಎಣ್ಣೆಯನ್ನ ಕಿವಿಯಲ್ಲಿ ಹಾಕಿ. ಅಪ್ಪಿತಪ್ಪಿಯೂ ಹೆಚ್ಚು ಎಣ್ಣೆ ಹಾಕಬೇಡಿ. ಇದು ಕಿವಿ ನೋವು ಬಂದಾಗ ಮಾತ್ರ ಉಪಯೋಗಿಸಬೇಕಾದ ಮದ್ದು. ನೀವು ನಿಮಗೆ ಬೇಕಾದಾಗ, ಇದರ ಪ್ರಯೋಗ ಮಾಡುವಂತಿಲ್ಲ.

ಮಂಡಿ, ಮೊಣಕೈ, ಕಂಕುಳ ಚರ್ಮದ ಬಣ್ಣವನ್ನ ಈ ರೀತಿ ತಿಳಿಯಾಗಿಸಿ..

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ಇದೊಂದೇ ವಸ್ತು ಸಾಕು..

- Advertisement -

Latest Posts

Don't Miss