ಇಂದು ಒಂದು ಸುಲಭವಾದ ಫೇಸ್ ಪ್ಯಾಕ್ ರೆಡಿ ಮಾಡಿಕೊಳ್ಳುವುದರ ಬಗ್ಗೆ ತಿಳಿಯೋಣ. ಬೇಗನೆ ಸಿದ್ದ ಮಾಡಿಕೊಳ್ಳಬಹುದು. ಇನ್ನೂ ಒಂದು ತಾಸಿನಲ್ಲಿ ಫಂಕ್ಷನ್ ಇದೆ ಪಾರ್ಟಿ ಇದೆ. ನನ್ನ ಮುಖದಲ್ಲಿ ಹೊಳಪು ಕಾಂತಿ ಇಲ್ಲ, ಒಂದು ಚೂರೂ ಶೈನಿ ಇಲ್ಲ, ಜೊತೆಗೆ ಡಲ್ ಆಗಿದೆ ಎಂದು ಬೇಸರ ಆಗುವವರಿಗೆ ಚಿಂತೆ ಬೇಡ, ನಿಮಗೆ ತಕ್ಷಣವೇ ಇನ್ಸ್ಟಂಟ್ ಫೇರ್ನೆಸ್ ಸಿಗಬೇಕಾದರೆ, ಈ ಫೇಸ್ ಪ್ಯಾಕ್ ಬಹಳಶ್ಟು ಸಹಾಯ ಮಾಡುತ್ತದೆ. ಹಾಗಾದರೆ ಈ ಫೇಸ್ ಪ್ಯಾಕ್ ಹೇಗೆ ಸಿದ್ದ ಮಾಡುವುದೆಂದು ನೋಡೋಣ. ಒಂದು ಬೌಲ್ ತೆಗೆದುಕೊಳ್ಳಿ ಮೊದಲಿಗೆ ಅಲೋವೆರಾ ಜೆಲ್ ಉಪಯೋಗ ಮಾಡೋಣ. ಒಂದು ಚಮಚ ಸಾಕು, ನಂತರ ಒಂದು ಚಮಚ ಕಾಫಿ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಕಾಫಿ ಬೀಜ ಸ್ಕಿನ್ ಕಾಂಪ್ಲೆಕ್ಸಶನ್ ಅಭಿವೃದ್ದಿ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೆಯೇ ಇನ್ಸ್ಟಂಟ್ ಫೇರ್ನೆಸ್ ಕೂಡ ನಿಮ್ಮ ಮುಖಕ್ಕೆ ಬರುತ್ತದೆ. ಕಾಫಿ ಪುಡಿ ಆದ ಮೇಲೆ ಕಾಡು ಅರಿಶಿಣ ಪುಡಿಯನ್ನು ಸೇರಿಸಿಕೊಳ್ಳೋಣ.
ಈ ಅರಿಶಿಣ ಪುಡಿ ಡಾರ್ಕ್ ಸ್ಪೊಟ್ಸ್ಸ್ , ಕಪ್ಪು ಕಲೆಗಳು ಇವೆಲ್ಲವನ್ನೂ ಹೋಗಲಾಡಿಸಲು ತುಂಬಾನೇ ಸಹಾಯ ಮಾಡುತ್ತದೆ. ಕೊನೆಯದಾಗಿ ಟೊಮ್ಯಾಟೋ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬೇಕಾದರೆ ನಿಂಬೆ ಹಣ್ಣಿನ ರಸ ಅಥವ ಜೇನುತುಪ್ಪವನ್ನು ಬಳಕೆ ಮಾಡಬಹುದು. ಟೊಮ್ಯಾಟೋ ಮತ್ತು ನಿಂಬೆ ರಸ ಆಯಿಲ್ ಸ್ಕಿನ್ ಇರುವವರು ಬಳಕೆ ಮಾಡಬಹುದು. ಇನ್ನೂ ಡ್ರೈ ಸ್ಕಿನ್ ಇರುವವರು ಜೇನುತುಪ್ಪವನ್ನು ಬಳಕೆ ಮಾಡಬಹುದು. ಈ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಒಂದು ಪೇಸ್ಟ್ ರೀತಿಯಲ್ಲಿ ಸಿಗುತ್ತದೆ. ಇದನ್ನು ನೀವು ಮುಖದ ತುಂಬಾ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಒಣಗಲು ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ಬಳಕೆ ಮಾಡುವುದರಿಂದ ನಿಮ್ಮ ಮುಖ ಕಾಂತಿಯುಕ್ತವಾಗಿ ಕಾಣಿಸುತ್ತದೆ. ಯಾವುದೇ ಅಡ್ಡ ಪರಿಣಾಮಗಳೂ ಬೀರುವುದಿಲ್ಲ. ನೀವು ಆತಂಕವಿಲ್ಲದೆ ಬಳಕೆ ಮಾಡಬಹುದು. ಈ ಫೇಸ್ ಪ್ಯಾಕ್ ಮೊಡವೆಗಳನ್ನು, ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ ನಿಮ್ಮ ಮುಖಕ್ಕೆ ಒಳ್ಳೆಯ ಹೊಳಪು ಕೊಟ್ಟು ನೀವು ಸುಂದರವಾಗಿ ಕಾಣುವಂತೆ ಮಾಡುತ್ತದೆ.