Saturday, November 29, 2025

Latest Posts

ವಯಸ್ಸಾದರೂ ಫಿಟ್ ಆಗಿರಬೇಕು ಅಂದ್ರೆ ಈ 5 ಆಹಾರವನ್ನು ಸೇವಿಸಿ..

- Advertisement -

ಯಾರಿಗೆ ತಾನೇ, ತಾವು ಯಂಗ್ ಆಗಿ ಕಾಣಬೇಕು. ಸುಂದರವಾಗಿರಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದ್ರೆ ಅದಕ್ಕಾಗಿ ಏನು ಮಾಡಬೇಕು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ, ಆ ಕೆಲಸವನ್ನ ಮಾಡೋಕ್ಕೆ, ಅದಕ್ಕೆ ಬೇಕಾದ ಆಹಾರವನ್ನು ತಿನ್ನೋಕ್ಕೆ ಉದಾಸೀನ. ಆದ್ರೆ ನೀವು ವಯಸ್ಸಾದರೂ ಯಂಗ್ ಆಗಿ ಕಾಣಬೇಕು ಅಂದ್ರೆ ಕೆಲ ಆಹಾರಗಳನ್ನು ತಿನ್ನಬೇಕು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮಣ್ಣಿನ ಮಡಿಕೆಯಲ್ಲಿಟ್ಟ ನೀವು ಕುಡಿದರೆ ಅದೆಷ್ಟು ಆರೋಗ್ಯಕರ ಪ್ರಯೋಜನಗಳಿದೆ ಗೊತ್ತಾ..?

ವಯಸ್ಸು 30 ದಾಟುತ್ತಿದ್ದಂತೆ ನೀವು ಕೆಲ ಆಹಾರಗಳನ್ನ ಉದಾಸೀನ ಮಾಡದೇ ತಿನ್ನೋಕ್ಕೆ ಶುರು ಮಾಡಬೇಕು. ವ್ಯಾಯಾಮ, ನಡಿಗೆ ಕೂಡ ಶುರು ಮಾಡಬೇಕು. ಅದೆಲ್ಲದಕ್ಕಿಂತ ಮುಖ್ಯವಾಗಿ, ಜೀವನದಲ್ಲಿ ಬರುವ ಅಡೆತಡೆಗಳನ್ನ ತೀರಾ ಮನಸ್ಸಿಗೆ ಹಚ್ಚಿಕೊಳ್ಳದೇ ಬದುಕುವುದನ್ನ ಕಲಿಯಬೇಕು. ಹಾಗೆ ಮಾತು ಮಾತಿಗೆ ಟೆನ್ಶನ್ ತೆಗೆದುಕೊಳ್ಳುವುದರಿಂದಲೇ, ಬಿಪಿ ಶುಗರ್ ಬರುತ್ತದೆ.

ಫೈಬರ್ ಯುಕ್ತ ಆಹಾರವನ್ನು ಹೆಚ್ಚು ತೆಗೆದುಕೊಳ್ಳಬೇಕು. ಜೊತೆಗೆ ತರಕಾರಿ, ಹಣ್ಣಿನ ಸೇವನೆಯೂ ಹೆಚ್ಚಾಗಬೇಕು. ಕೆಲವರಿಗೆ ವಯಸ್ಸು 50 ಆಗುತ್ತಿದ್ದಂತೆ ಹಾಲು, ತುಪ್ಪ ತಿಂದರೆ ಜೀರ್ಣವಾಗುವುದಿಲ್ಲ. ಆದರೆ ಮೊಸರು, ಮಜ್ಜಿಗೆ ಸೇವನೆ ಕಫ ಸಮಸ್ಯೆ ಇಲ್ಲದವರು ಮಾಡಬಹುದು. ಮೊಸರು, ಮಜ್ಜಿಗೆ ತಿಂದರೆ, ನಾವು ತಿಂದ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ.

ಸೈಕಲ್ ಚಲಾಯಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

ಆದಷ್ಟು ಕಾಯಿಸಿ, ತಣಿಸಿದ ನೀರನ್ನೇ ಕುಡಿದರೆ ಒಳ್ಳೆಯದು. ತಣ್ಣೀರಿನ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ನಿಮಗೆ ವಯಸ್ಸಾಗುತ್ತಿದ್ದಂತೆ, ತಾಮ್ರದ ತಂಬಿಗೆಯಲ್ಲಿ 8 ತಾಸು ಇರಿಸಿದ ಕಾಯಿಸಿ, ತಣಿಸಿದ ನೀರನ್ನ ಖಂಡಿತ ಕುಡಿಯಿರಿ. ಇದರಿಂದ ನಿಮಗೆ ಶಕ್ತಿ ಬರುವುದಲ್ಲದೇ, ಸಂಧಿವಾತ, ಕೈ ಕಾಲು ಸೆಳೆತದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಅಲ್ಲದೇ ಊಟ, ತಿಂಡಿ, ಸೇವನೆಯಲ್ಲಿಯೂ ಮಿತಿ ಇರುವಂತೆ ನೋಡಿಕೊಳ್ಳಿ.

ಎಲ್ಲಕ್ಕಿಂತ ಮುಖ್ಯವಾಗಿ, ಹೆಚ್ಚು ಟೆನ್ಶನ್ ತೆಗೆದುಕೊಳ್ಳದೇ, ಆರಾಮವಾಗಿರಿ. ಖುಷಿಯಾಗಿರಲು ನೆಪ ಹುಡುಕಿ, ಚಿಕ್ಕ ಮಕ್ಕಳೊಂದಿಗೆ ಆಟ, ಭಜನೆ, ವಾಕಿಂಗ್, ಸೈಕ್ಲಿಂಗ್, ಸ್ವಿಮ್ಮಿಂಗ್‌, ಇದೆಲ್ಲ ಮಾಡುವುದರಿಂದ, ನೀವು ಉಲ್ಲಸಿತರಾಗಿರುತ್ತೀರಿ.

- Advertisement -

Latest Posts

Don't Miss