Sunday, July 6, 2025

Latest Posts

ಈ ಆಹಾರಗಳು ನಿಮ್ಮ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ..

- Advertisement -

ಕಣ್ಣು ಕಾಣೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತು. ದೃಷ್ಟಿ ಹೀನರಾದ್ರೆ, ಅದಕ್ಕಿಂತ ನರಕ ಇನ್ನೊಂದಿಲ್ಲ. ಕೆಲವರು ಯುವಕರಾಗಿದ್ದಾಗ ಚೆನ್ನಾಗಿರುತ್ತಾರೆ. ವಯಸ್ಸಾಗುತ್ತಿದ್ದಂತೆ, ಕಣ್ಣಿಗೆ ಪೊರೆ ಬಂದು, ಕಣ್ಣು ಕಾಣೋದು ಸಂಪೂರ್ಣವಾಗಿ ನಿಲ್ಲುತ್ತದೆ. ಹಾಗಾಗಿ ನೀವು ಕಡಿಮೆ ವಯಸ್ಸಿನವರಾಗಿದ್ದಾಗಲೇ ಕೆಲ ಆಹಾರಗಳನ್ನು ತಿನ್ನಲು ಶುರು ಮಾಡಿ, ಆಗ ನಿಮ್ಮ ವೃದ್ಧಾಪ್ಯದಲ್ಲಿ ನೀವು ದೃಷ್ಟಿ ದೋಷಕ್ಕೆ ಒಳಗಾಗಲು ಸಾಧ್ಯವಿಲ್ಲ. ಹಾಗಾದ್ರೆ ಯಾವುದು ಆ ಆಹಾರ ಅಂತಾ ತಿಳಿಯೋಣ ಬನ್ನಿ..

ಕ್ಯಾರೆಟ್. ನೀವು ಪ್ರತಿದಿನ ಒಂದೊಂದು ಕ್ಯಾರೆಟ್ ತಿನ್ನಬಹುದು. ಹಸಿ ಕ್ಯಾರೆಟ್ ತಿನ್ನುವುದರಿಂದ ನಿಮ್ಮ ದೃಷ್ಟಿ ಉತ್ತಮವಾಗುತ್ತದೆ. ಕಣ್ಣಿನ ಪೊರೆ ಬರದಂತೆ ತಡೆಗಟ್ಟಬಹುದು. ಸ್ಕಿನ್ ಉತ್ತಮವಾಗುತ್ತದೆ. ಕೂದಲು ಕೂಡ ಸೊಂಪಾಗಿ ಬೆಳೆಯುತ್ತದೆ.

ಎಸಿ ರೂಮಲ್ಲಿ ಕುಳಿತು ಕೆಲಸ ಮಾಡುವವರು ನೋಡಲೇಬೇಕಾದ ಸ್ಟೋರಿ ಇದು..

ದಾಳಿಂಬೆ. ದಾಳಿಂಬೆ ಹಣ್ಣಿನ ಜ್ಯೂಸ್ ಅಥವಾ ದಾಳಿಂಬೆ ಹಣ್ಣನ್ನು ತಿಂದರೆ, ಕಣ್ಣಿನ ಸಮಸ್ಯೆ ಬರುವುದಿಲ್ಲ. ದೃಷ್ಟಿ ಸ್ಪಷ್ಟವಾಗುತ್ತದೆ. ಪ್ರತಿದಿನ ದಾಳಿಂಬೆ ತಿನ್ನಲಾಗದಿದ್ದರೂ, ವಾರಕ್ಕೆ ಮೂರು ಬಾರಿಯಾದ್ರೂ ತಿನ್ನಿ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ತಿಂದ್ರೆ ಇನ್ನೂ ಉತ್ತಮ. ಗರ್ಭಿಣಿಯರು ದಾಳಿಂಬೆ ಸೇವಿಸಿದ್ರೆ, ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

ಬಾದಾಮ್‌. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ 5 ಬಾದಾಮನ್ನ ಸಿಪ್ಪೆ ತೆಗೆದು ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ, ನೆನಪಿನ ಶಕ್ತಿ ಹೆಚ್ಚುತ್ತದೆಯಲ್ಲದೇ, ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ.

ಮೀನು. ನಾನ್‌ ವೆಜ್ ತಿನ್ನುವವರು, ಮೀನು ತಿನ್ನಬಹುದು. ಇದರಿಂದ ದೃಷ್ಟಿ ದೋಷ ಬರುವುದನ್ನು ತಡೆಯಬಹುದು. ನಿಯಮಿತವಾಗಿ ಮೀನಿನ ಸೇವನೆ ಮಾಡಿದ್ರೆ, ನಿಮ್ಮ ಕಣ್ಣಿನ ಆರೋಗ್ಯ ಸರಿಯಾಗಿರುತ್ತದೆ. ಮೀನನ್ನು ಸರಿಯಾಗಿ ಬೇಯಿಸಿರಬೇಕು. ಅದರ ಪದಾರ್ಥ ಮಾಡುವಾಗ ಹೆಚ್ಚು ಉಪ್ಪು, ಖಾರ, ಮಸಾಲೆ, ಎಣ್ಣೆ ಬಳಸಬೇಡಿ.

ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..

ಮೊಟ್ಟೆ. ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಕೂದಲ ಆರೋಗ್ಯ, ಕಣ್ಣಿನ ಆರೋಗ್ಯ, ನಿಶ್ಶಕ್ತಿಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಲ್ಲಿ ವಿಟಾಮಿನ್ ಎ ಅಂಶ ಹೆಚ್ಚಾಗಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿದೆ.

ಕೊನೆಯದಾಗಿ ಮುಖ್ಯವಾದ ಮಾತು. ನೀವು ಆರೋಗ್ಯ ಅಭಿವೃದ್ಧಿ ಮಾಡಲು ಏನೇ ತಿಂದರೂ, ಅದು ಲಿಮಿಟ್‌ನಲ್ಲಿ ತಿನ್ನಿ. ಯಾಕಂದ್ರೆ ಅಗತ್ಯಕ್ಕಿಂತ ಏನು ತಿಂದರೂ, ಅದು ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಅದು ಆರೋಗ್ಯ ಕೊಡುವ ಬದಲು, ಆನಾರೋಗ್ಯ ತಂದೊಡ್ಡುತ್ತದೆ.

- Advertisement -

Latest Posts

Don't Miss