Wednesday, October 15, 2025

Latest Posts

ಬೇಗ ಗರ್ಭಧಾರಣೆ ಮಾಡಬೇಕೆನ್ನುವವರು ಈ ಆಹಾರವನ್ನು ತಿನ್ನಿ..

- Advertisement -

ಪ್ರತಿ ಹೆಣ್ಣಿಗೂ ತಾನೂ ಕೂಡ ತಾಯಿಯಾಗಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಹಾಗೆ ತಾಯಿಯಾಗಲೂ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೂ ಕೂಡ ಆರೋಗ್ಯ ಅದೃಷ್ಟ ಎರಡೂ ಬೇಕು. ಹಾಗಾಗಿ ನಾವಿಂದು ಯಾವ ಆಹಾರವನ್ನು ನೀವು ನಿಯಮಿತವಾಗಿ ಸೇವಿಸಿದ್ದಲ್ಲಿ, ಗರ್ಭಧಾರಣೆ ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..

ಮೊದಲನೇಯ ಆಹಾರ ಒಮೆಗಾ ತ್ರಿ ಫ್ಯಾಟಿ ಆ್ಯಸಿಡ್. ಇದು ಮೀನಿನಲ್ಲಿ ಸಿಗುತ್ತದೆ. ನಾನ್‌ವೆಜ್ ಸೇವನೆ ಮಾಡುವವರು ಮೀನನ್ನು ಸೇವಿಸಬಹುದು. ಹಾಗಂತ ಅಗತ್ಯಕ್ಕಿಂತ ಹೆಚ್ಚು ಸೇವನೆ ಒಳ್ಳೆಯದಲ್ಲ. ಅಲ್ಲದೇ, ನೀವು ಮೀನಿನ ಸೇವನೆ ಮಾಡುವಾಗ, ಅದನ್ನು ಸರಿಯಾಗಿ ಬೇಯಿಸಿ, ಖಾರ, ಉಪ್ಪು, ಎಣ್ಣೆಯನ್ನು ಮಿತವಾಗಿ ಬಳಸಿ ತಿಂದಲ್ಲಿ, ಅದು ಔಷಧಿಯಂತೆ ಕೆಲಸ ಮಾಡುತ್ತದೆ.

ಕಾಫಿ ಪುಡಿಯಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತದೆಯೆ..?

ಎರಡನೇಯದಾಗಿ ವಿಟಾಮಿನ್ ಸಿ. ಹೆಣ್ಣು ಮಕ್ಕಳ ದೇಹದಲ್ಲಿ ಎಂದಿಗೂ ವಿಟಾಮಿನ್ ಸಿ ಅಂಶ ಕಡಿಮೆಯಾಗಬಾರದು. ಹಾಗಾಗಿ ಹುಳಿ ಹಣ್ಣನ್ನ ಮಿತವಾಗಿ ಸೇವಿಸಬೇಕು. ನೆಲ್ಲಿಕಾಯಿ, ನಿಂಬೆಹಣ್ಣು, ಕಿತ್ತಳೆ ಹಣ್ಣು, ಕಿವಿ ಫ್ರೂಟ್ ಇವುಗಳನ್ನು ನಿಯಮಿತವಾಗಿ ಸೇವಿಸಿದ್ದಲ್ಲಿ, ನಿಮ್ಮ ದೇಹದಲ್ಲಿ ವಿಟಾಮಿನ್ ಸಿ ಹೇರಳವಾಗಿರುತ್ತದೆ. ಮತ್ತು ಇದರಿಂದ ಗರ್ಭ ಧರಿಸಲು ಅನುಕೂಲವಾಗುತ್ತದೆ.

ಮೂರನೇಯ ಆಹಾರವೆಂದರೆ ನೀರು. ಹೆಣ್ಣು ಮಕ್ಕಳು ಚೆನ್ನಾಗಿ ನೀರು ಕುಡಿಯಬೇಕು. ನಿಮಗೆ ನೀರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದ್ದಲ್ಲಿ ನೀವು ದಿನಕ್ಕೆ 3ರಿಂದ 4 ಲೀಟರ್ ನೀರು ಕುಡಿಯಬಹುದು. ಇದು ನಿಮ್ಮನ್ನು ಆರೋಗ್ಯವಂತರನ್ನಾಗಿ ಇಡುತ್ತದೆ. ಇದರಿಂದ ನೀವು ಗರ್ಭ ಧರಿಸಬಹುದಲ್ಲದೇ, ನಿಮ್ಮ ಮಗುವಿನ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ. ಅಲ್ಲದೇ, ನಿಮಗೆ ನಾರ್ಮಲ್ ಡೆಲಿವರಿಯಾಗಲು ಇದು ಸಹಾಯ ಮಾಡುತ್ತದೆ.

ಶುಗರ್ ರೋಗಿಗಳು ಇವುಗಳನ್ನು ನೆನೆಸಿ ತಿಂದರೆ ಇನ್ಸುಲಿನ್ ಗೆ ಸಮ..!

ಇನ್ನು ಹಾಲು, ತುಪ್ಪ, ಬೆಣ್ಣೆ, ಪನೀರ್ ಸೇವನೆಯನ್ನು ಪ್ರತಿದಿನ ಮಿತವಾಗಿ ಸೇವಿಸಿದ್ದಲ್ಲಿ, ನಿಮ್ಮ ಮೂಳೆ ಗಟ್ಟಿಗೊಳ್ಳುತ್ತದೆ. ಇದು ನೀವು ಗರ್ಭಿಣಿಯಾಗಲು ಸಹಾಯ ಮಾಡುತ್ತದೆ. ಕೆಲವರಿಗೆ ಎಷ್ಟೇ ಬಾರಿ ಮಕ್ಕಳಿಗಾಗಿ ಪ್ರಯತ್ನ ಪಟ್ಟರೂ, ಮಕ್ಕಳನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಅಂಥವರು ಡೈರಿ ಪ್ರಾಡಕ್ಟ್‌ನ್ನ ಸರಿಯಾಗಿ, ಮಿತವಾಗಿ ಸೇವಿಸಿದರೆ ಉತ್ತಮ.

- Advertisement -

Latest Posts

Don't Miss