Sunday, September 8, 2024

Latest Posts

ಇದನ್ನ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಸಾಕು, ಕೂದಲ ಸಮಸ್ಯೆಗೆ ಪರಿಹಾರ ಗ್ಯಾರಂಟಿ..

- Advertisement -

ನಾವು ಪ್ರತಿದಿನ ಹಲವು ತರಕಾರಿ, ಹಣ್ಣುಗಳನ್ನ ತಿಂತಿರ್ತೀವಿ. ಆದ್ರೆ ಅದನ್ನ ನಾವು ಸರಿಯಾದ ರೀತಿಯಲ್ಲೇ ತಿಂತಿದ್ದೀವಾ ಅನ್ನೋದು ಮಾತ್ರ ನಮಗೆ ಗೊತ್ತಿರೋದಿಲ್ಲಾ. ತಿನ್ನಬೇಕಲ್ಲಾ ಅಂತಾ ತಿಂತೀವಷ್ಟೇ. ಆಧ್ರೆ ನಾವು ಯಾವುದೇ ತರಕಾರಿ, ಹಣ್ಣನ್ನ ಸರಿಯಾದ ರೀತಿಯಲ್ಲಿ ತಿಂದಾಗಷ್ಟೇ ಅದು ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಾವಿಂದು ಬೆಳ್ಳುಳ್ಳಿಯನ್ನು ಯಾವ ರೀತಿ ತಿನ್ನಬೇಕು..? ಹೇಗೆ ಬೆಳ್ಳುಳ್ಳಿಯನ್ನ ಸೇವಿಸಿದ್ರೆ, ಆರೋಗ್ಯ ಸಮಸ್ಯೆಗಳು ದೂರಗೊಳ್ಳುತ್ತದೆ ಅನ್ನೋ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವು ಬೆಳ್ಳುಳ್ಳಿಯನ್ನ ತಿಂದು ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಹಸಿ ಬೆಳ್ಳುಳ್ಳಿ ತಿನ್ನಲು ಹಲವರಿಗೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಕೆಲವರಿಗೆ ಜೀರ್ಣವಾಗುವುದಿಲ್ಲ. ಹಾಗಾಗಿ ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳನ್ನು ತೊಳೆದು, ಒರೆಸಿ, ಕಾವಲಿಯ ಮೇಲಿಟ್ಟು, ಸುಟ್ಟು ತಿನ್ನಬೇಕು. ಹೀಗೆ ತಿಂದ ಬಳಿಕ, ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ, ಕೂದಲು ಬಿಳಿಯಾಗುವ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೇ, ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ.

ಇನ್ನು ಹೀಗೆ ಸುಟ್ಟ ಬೆಳ್ಳುಳ್ಳಿ ತಿನ್ನುವುದರ ಜೊತೆಗೆ ಅರ್ಧ ಸ್ಪೂನ್ ಜೇನು ತುಪ್ಪ ಸೇರಿಸಿ ತಿಂದರೆ, ಹೊಟ್ಟೆಗೆ ಸಂಬಂಧಿಸಿದ ಬಾಧೆಗಳು ಮಾಯವಾಗುತ್ತದೆ. ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ಪುರುಷರ ಸಮಸ್ಯೆಗೂ ಕೂಡ ಇದು ಮುಕ್ತಿ ನೀಡುತ್ತದೆ. ಹೀಗೆ ಹುರಿದ ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ವೀರ್ಯಾಣು ಉತ್ಪತ್ತಿಯಾಗುವುದಕ್ಕೆ ಸಹಾಯ ಮಾಡುತ್ತದೆ.

- Advertisement -

Latest Posts

Don't Miss