Health Tips: ಇಂದಿನ ಜನರಿಗೆ ಇರುವ ಕಾಮನ್ ಆರೋಗ್ಯ ಸಮಸ್ಯೆ ಅಂದ್ರೆ ಆ್ಯಸಿಡಿಟಿ. ನಾವು ಸೇವಿಸುವ ಆಹಾರದಿಂದ ಈ ಸಮಸ್ಯೆ ಬರುತ್ತಿದೆ. ಅಲ್ಲದೇ, ಸಮಯಕ್ಕೆ ತಕ್ಕಂತೆ ಆಹಾರ ಸೇವಿಸದ ಕಾರಣ ಆ್ಯಸಿಡಿಟಿ ಸಮಸ್ಯೆ ಬರುತ್ತದೆ. ಇಂದು ನಾವು ಆ್ಯಸಿಡಿಟಿಯನ್ನು ತಡೆಗಟ್ಟಲು ಒಂದೇ ಒಂದು ಆಹಾರ ಸೇವಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆ ಆಹಾರ ಯಾವುದೆಂದರೆ, ನಿಂಬೆರಸ ಮತ್ತು ನೀರು. ನೀರಿಗೆ ಕೊಂಚ ನಿಂಬೆರಸ ಹಾಕಿ ಕುಡಿದರೆ, ಆ್ಯಸಿಡಿಟಿ ನಿವಾರಣೆಯಾಗುತ್ತದೆ. ಆದರೆ ಯಾವಾಗ ಈ ಸಮಸ್ಯೆ ನಿಮಗೆ ಬರುತ್ತದೆಯೋ, ಆಗಷ್ಟೇ ನೀವು ನಿಂಬೆಜ್ಯೂಸ್ ಸೇವಿಸಬೇಕು. ಪ್ರತಿದಿನ ನಿಂಬೆಜ್ಯೂಸ್ ಸೇವಿಸುವುದು ಉತ್ತಮವಲ್ಲ.
ದೇಹದಲ್ಲಿ ಪಿತ್ತ ಇಂಬ್ಯಾಲೆನ್ಸ್ ಆಗುವ ಕಾರಣಕ್ಕೆ, ಆ್ಯಸಿಡಿಟಿ ಉಂಟಾಗುತ್ತದೆ. ನಿಮಗೂ ಪದೇ ಪದೇ ಆ್ಯಸಿಡಿಟಿ ಆಗುತ್ತಿದೆ ಎಂದಾದಲ್ಲಿ, ನೀವು ಕೆಲ ಪಥ್ಯಗಳನ್ನು ಮಾಡಬೇಕು. ಕರಿದ ತಿಂಡಿ, ಮದ್ಯಪಾನ, ಬೇಕರಿ ತಿಂಡಿಗಳ ಸೇವನೆ ಕಡಿತಗೊಳಿಸಬೇಕು. ಹಣ್ಣು, ಹಾಲು, ಮೊಸರು, ತುಪ್ಪ, ತರಕಾರಿ, ಸೊಪ್ಪು, ಮೊಳಕೆ ಕಾಳು ಇಂಥ ಆರೋಗ್ಯಕರ ಆಹಾರಗಳ ಸೇವನೆ ಮಾಡಬೇಕು.
ಅಲ್ಲದೇ, ಯಾವುದೇ ಹಣ್ಣುಗಳ ಸೇವನೆ ಮಾಡುವುದಿದ್ದರೂ, ಅದು ಪೂರ್ಣವಾಗಿ ಹಣ್ಣಾಗಿರಲಿ. ಅರ್ಧಂಬರ್ಧ ಹಣ್ಣಾಗಿರುವ, ಕಾಯಿ ಕಾಯಿಯಾಗಿರುವ ಹಣ್ಣುಗಳ ಸೇವನೆ ಮಾಡಬೇಡಿ. ಇದರಿಂದ ಆ್ಯಸಿಡಿಟಿ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ-ಕಾಫಿ ಸೇವನೆ ಮಾಡುವುದರಿಂದಲೂ ಆ್ಯಸಿಡಿಟಿ ಉಂಟಾಗುತ್ತದೆ. ಚಾಕೋಲೇಟ್, ಟೊಮೆಟೋ ಪದಾರ್ಥ ಸೇವನೆಯಿಂದಲೂ ಈ ಸಮಸ್ಯೆ ಹೆಚ್ಚಾಗುತ್ತದೆ.
Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?