Krishi News: ಎಲ್ಲೋರಾ ನ್ಯಾಚುರಲ್ ಸೀಡ್ಸ್ ಅನ್ನುವುದು ಔರಂಗಾಬಾದ್ ಬೇಸ್ಡ್ ಕಂಪನಿ. 2009ರಲ್ಲಿ ಶುರುವಾಗಿದ್ದ ಈ ಕಂಪನಿ ಮೊದಲು ಆನ್‌ಲೈನ್‌ನಲ್ಲಿ ಗಿಡಗಳ ಬೀಜವನ್ನು ಮಾರಾಟ ಮಾಡುತ್ತಿತ್ತು. ಇದೀಗ ಉತ್ತಮ ಬ್ರ್ಯಾಂಡ್ ಆಗಿ ರೂಪುಗೊಂಡಿದೆ. ಎಲ್ಲೋರಾ ಸೀಡ್ಸ್ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ದು, ಇದರ ಸಿಬ್ಬಂದಿ ಈ ಕಂಪನಿ ಬಗ್ಗೆ, ಇಲ್ಲಿ ಮಾರಾಟ ಮಾಡುವಂಥ ಹಣ್ಣು, ತರಕಾರಿ, ಹೂವುಗಳ ಬೀಜಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಬೀಜದಿಂದ ಬಾಜಾರದವರೆಗೆ ನಿಮ್ಮ ಜೊತೆ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಕಂಪೆನಿ, ರೈತರಿಗೆ ಅನುಕೂಲವಾಗುವಂತೆ, ಉತ್ತಮ ಕ್ವಾಲಿಟಿಯ ಬೀಜಗಳನ್ನು ಮಾರಾಟ ಮಾಡುತ್ತಿದೆ. ಇವರ ಬೀಜಗಳು ಅತ್ಯುತ್ತಮವಾಗಿದ್ದಕ್ಕೆ, ಇವರ ಬಳಿ ಹಲವರು ಕಾಲ್ ಮಾಡಿ, ಬೀಜಗಳನ್ನು ಆರ್ಡರ್ ಮಾಡಿ ಪಡೆದುಕೊಳ್ಳುತ್ತಿದ್ದಾರಂತೆ. ಕಂಪನಿ ಮಹಾರಾಷ್ಟ್ರದಲ್ಲಿದ್ದರೂ ಕೂಡ, ಇಡೀ ದೇಶಕ್ಕೆ ಇವರು ಬೀಜಗಳನ್ನು ಮಾರಾಟ ಮಾಡುತ್ತಾರೆ.
ಕಲ್ಲಂಗಡಿ ಹಣ್ಣು, ಮಸ್ಕ್ ಮೆಲನ್, ಪಾಲಕ್, ಬದನೆಕಾಯಿ, ಟೊಮೆಟೋ, ಈರುಳ್ಳಿ, ಹಸಿಮೆಣಸು, ಬೀನ್ಸ್, ಮೂಲಂಗಿ ಸೇರಿ, ವಿವಿಧ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳ ಬೀಜಗಳನ್ನು ಇವರು ಮಾರಾಟ ಮಾಡುತ್ತಾರೆ. ಇವರ ಬಳಿ ಯಾವ ರೀತಿಯ ಬೀಜಗಳು ಸಿಗುತ್ತದೆ..? ಅದರ ಕ್ವಾಲಿಟಿ ಹೇಗಿರುತ್ತದೆ ಎಂದು ತಿಳಿಯಲು ಈ ವೀಡಿಯೋ ನೋಡಿ..
ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..