ನಾವು ಮಹಿಳಾ ದಿನಾಚರಣೆ ಸ್ಪೆಶಲ್ ಆಗಿ, ಈ ಮೊದಲು ನಿಮಗೆ ಮಹಿಳೆಯರು ಮನೆಯಲ್ಲೇ ಕುಳಿತು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದರಲ್ಲಿ ನಾವು ಶಾಲೆ ಕಲಿಯದ ಹೆಣ್ಣು ಮಕ್ಕಳು ಕೂಡ ಯಾವ ಉದ್ಯಮ ಮಾಡಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಕೆಲಸ ಮೆಹೆಂದಿ ಹಾಕುವುದು. ಮದುವೆ ಕಾರ್ಯಕ್ರಮಗಳಲ್ಲಿ ಮೇಕಪ್ ಮಾಡುವವರಿಗೆ, ಹೇರ್ ಸ್ಟೈಲ್ ಮಾಡುವವರಿಗೆ ಎಷ್ಟು ಬೇಡಿಕೆ ಇದೆಯೋ, ಅಷ್ಟೇ ಬೇಡಿಕೆ ಮೆಹೆಂದಿ ಹಾಕುವವರಿಗಿದೆ. ನೀವು ವೆರೈಟಿ ಡಿಸೈನ್ ಮೆಹೆಂದಿ ಹಾಕುವುದನ್ನ ಕಲಿಸುವ ಕ್ಲಾಸಿಗೆ ಹೋಗಿ ತರಬೇತಿ ಪಡೆಯಬಹುದು. ನೀವು ಪರ್ಫೆಕ್ಟ್ ಆಗಿ ಮೆಹೆಂದಿ ಹಾಕಿದ್ರೆ, ನೀವು ದಿನಕ್ಕೆ ಸಾವಿರಾರು ರೂಪಾಯಿ ಗಳಿಸಬಹುದು. ಅದರಲ್ಲೂ ಮದುವೆ ಸೀಸನ್‌ನಲ್ಲಿ ಉತ್ತಮವಾಗಿ ಆದಾಯ ಬರುತ್ತೆ.
ಎರಡನೇಯ ಕೆಲಸ ಬ್ರೈಡಲ್ ಮೇಕಪ್. ಈಗಷ್ಟೇ ಮೆಹೆಂದಿ ಬಗ್ಗೆ ಹೇಳಿದ್ದೆವು. ಅದಕ್ಕಿಂತ ಹೆಚ್ಚು ಬೇಡಿಕೆ ಇರೋ ಕೆಲಸ ಅಂದ್ರೆ ಮೇಕಪ್ ಮಾಡುವವರಿಗೆ. ನೀವು ಮೇಕಪ್ ಕೋರ್ಸ್ ಮಾಡಿದ್ರೆ, ನೀವು ಪರ್ಫೆಕ್ಟ್ ಆಗಿ ಮೇಕಪ್ ಮಾಡಿದ್ರೆ, ನಿಮ್ಮ ಕೆಲಸವನ್ನ ಹೆಚ್ಚು ಜನ ಮೆಚ್ಚುತ್ತಾರೆ. ಉತ್ತಮವಾಗಿ ಹಣ ಗಳಿಕೆ ಮಾಡಬಹುದು. ನೀವು ಚೆನ್ನಾಗಿ ಮೇಕಪ್ ಮಾಡಿದ್ರೆ, ಅದೇ ಮದುವೆಗೆ ಬಂದವರು ನಿಮ್ಮನ್ನು ಅವರ ಮನೆ ಮದುವೆಗೆ ಮೇಕಪ್ ಮಾಡಲು ಕರಿಯಬಹುದು. ಹೀಗೆ ನೀವು ಇದರಲ್ಲಿ ಒಳ್ಳೆಯ ಹೆಸರು ಮತ್ತು ದುಡ್ಡು ಮಾಡಬಹುದು.
ಮೂರನೇಯ ಕೆಲಸ ಬೇಬಿ ಸಿಟ್ಟಿಂಗ್. ನೀವು ಬೇಬಿ ಸಿಟ್ಟಿಂಗ್ ಮಾಡಿ, ಮಕ್ಕಳನ್ನ ಸಾಕಬಹುದು. ಅಥವಾ ನಾಯಿ, ಬೆಕ್ಕುಗಳನ್ನ ಸಹ ಸಾಕಬಹುದು. ದೊಡ್ಡ ದೊಡ್ಡ ಸಿಟಿಗಳಲ್ಲಿ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗುವವರು ಇರ್ತಾರೆ. ನಾಯಿಯನ್ನ ನೋಡಿಕೊಳ್ಳಲು ಯಾರೂ ಇರಲ್ಲ, ಅಂಥವರು ನಾಯಿಯನ್ನ ಚೆನ್ನಾಗಿ ಸಾಕುವವರನ್ನ ಹುಡುಕುತ್ತಿರುತ್ತಾರೆ. ನಾವು ಈ ಕೆಲಸ ಮಾಡಿದ್ರೆ, ಉತ್ತಮ ಹಣ ಗಳಸಬಹುದು. ಪ್ರಾಣಿಯ ಆಹಾರದ ಬಗ್ಗೆ ಕಾಳಜಿ ವಹಿಸಿದ್ರೆ ಸಾಕು. ಮತ್ತು ಅದು ಎಲ್ಲೂ ಹೋಗದಂತೆ ನೋಡಿಕೊಳ್ಳಬೇಕು.
ಇನ್ನು ಮಕ್ಕಳ ವಿಷಯಕ್ಕೆ ಬಂದ್ರೆ, ಅವರನ್ನ ಜೋಪಾನವಾಗಿ ನೋಡಿಕೊಳ್ಳಬೇಕು. ಇದೇ ನಿಮಗೆ ಚಾಲೆಂಜ್ ಆಗಿರತ್ತೆ. ಹಾಗಾಗಿ ನಿಮಗೆ ಒಂದಿಬ್ಬರು ಜೊತೆಗಾರರು ಬೇಕು.
ನಾಲ್ಕನೇಯ ಕೆಲಸ ಹೈನುಗಾರಿಕೆ. ಹೈನುಗಾರಿಕೆ ಅಂದ್ರೆ, ದನ ಸಾಕಾಣೆ. ನೀವು ಬೇರೆ ಕೆಲಸವನ್ನ ಮಾಡಿ, ಅಥವಾ ಮನೆ ಕೆಲಸವನ್ನ ಮಾಡಿಕೊಂಡೇ, ಹೈನುಗಾರಿಕೆ ಮಾಡಬಹುದು. ಹೀಗೆ ಒಂದೆರಡು ದನ ಸಾಕಿ, ಹಾಲು ಕರಿದು, ಹತ್ತಿರದ ಡೈರಿಗೆ ಹಾಲು ಮಾರಿದ್ರೆ, ನೀವೂ ಲಾಭಗಳಿಸಿ, ಮತ್ತೊಂದಿಷ್ಟು ದನ ಸಾಕಿ, ನೀವೇ ಒಂದು ಡೈರಿ ಇಡಬಹುದು. ಅಥವಾ ಹೊಟೇಲ್‌ಗಳಿಗೆ ಹಾಲು ಮಾರಾಟ ಮಾಡಬಹುದು.
ಐದನೇಯ ಕೆಲಸ ಕೇಟರಿಂಗ್. ನಿಮಗೆ ಅಡುಗೆ ಮಾಡುವುದೆಂದರೆ ಇಷ್ಟವಿದ್ದಲ್ಲಿ, ನೂರಕ್ಕೂ ಹೆಚ್ಚು ಜನರಿದ್ದರೂ ಅಡುಗೆ ಮಾಡಬಲ್ಲಿರಿ ಎಂದಲ್ಲಿ, ಕೇಟರಿಂಗ್ ಗ್ರೂಪ್ ಮಾಡಿಕೊಂಡು ಈ ಉದ್ಯಮ ಮಾಡಬಹುದು. ಇದಕ್ಕೆ ನಿಮ್ಮ ಪತಿ ಕೂಡ ಸಾಥ್ ನೀಡಿದ್ರೆ, ಒಳ್ಳೆಯ ಹಣ ಮಾಡಬಹುದು.
ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..
Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 1