Sunday, April 13, 2025

Latest Posts

ಪ್ರತೀ ವರ್ಷ ಪುರಿ ಜಗನ್ನಾಥನಿಗೆ ಅನಾರೋಗ್ಯವಾಗುತ್ತದೆ.. ಇದರ ಹಿಂದಿನ ಕಥೆ ಇಲ್ಲಿದೆ ನೋಡಿ..

- Advertisement -

Spiritual: ಮನುಷ್ಯರಿಗೆ ಅನಾರೋಗ್ಯ ಉಂಟಾಗುತ್ತದೆ ಎಂದರೆ ಅದು ಸಾಮಾನ್ಯ ಎಂದು ನಾವು ಹೇಳಬಹುದು. ಆದರೆ ದೇವರಾದ ಪುರಿ ಜಗನ್ನಾಥನಿಗೂ ಅನಾರೋಗ್ಯ ಉಂಟಾಗಿತ್ತು ಎಂದರೆ ನೀವು ನಂಬುತ್ತೀರಾ..? ಹಾಗಾದರೆ ಇದರ ಪೂರ್ತಿ ಸತ್ಯವೇನು ಅನ್ನುವುದನ್ನ ಈ ಕಥೆಯ ಮೂಲಕ ತಿಳಿಯೋಣ ಬನ್ನಿ..

ಓಡಿಸ್ಸಾದಲ್ಲಿರುವ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಸುವ ಪದ್ಧತಿ ಪ್ರಕಾರ,. ಜಗನ್ನಾಥನಿಗೆ 15 ದಿನ ಅನಾರೋಗ್ಯವಿರುತ್ತದೆ. ಇದಕ್ಕೆ ಚಿಕಿತ್ಸೆಯೂ ನಡೆಯುತ್ತದೆ. ಈ ಪದ್ಧತಿಯ ಹಿಂದೆ ಒಂದು ಕಥೆಯೂ ಇದೆ. ಹಲವು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಮಾಧವದಾಸ ಎಂಬುವವರು ವಾಸವಿದ್ದರು. ಅವರು ಜಗನ್ನಾಥನ ಭಕ್ತರಾಗಿದ್ದು, ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು.

ಇವರು ಜಗನ್ನಾಥನಲ್ಲಿ ಅದೆಷ್ಟು ಭಕ್ತಿ ಮಾಡುತ್ತಿದ್ದರು ಎಂದರೆ, ಜಗನ್ನಾಥನ ಜಪ ಮಾಡುತ್ತಿದ್ದರು. ಜಗನ್ನಾಥನ ಫೋಟೋದ ಎದುರು ಕುಳಿತು ಆಟವಾಡುತ್ತಿದ್ದರು. ಹಲವರ ಪ್ರಕಾರ, ಎಷ್ಟೋ ಬಾರಿ ಜಗನ್ನಾಥ ಮಗುವಿನ ರೂಪದಲ್ಲಿ ಬಂದು, ಇವರೊಂದಿಗೆ ಆಡುತ್ತಿದ್ದರಂತೆ. ಒಮ್ಮೆ ಅವರ ಆರೋಗ್ಯ ಹಾಳಾಗಿ ಅವರು ಹಾಸಿಗೆ ಹಿಡಿಯುತ್ತಾರೆ. ಆಗ ಅಕ್ಕಪಕ್ಕದ ಮನೆಯವರು ಬಂದು, ನಾವು ನಿಮ್ಮ ಸೇವೆ ಮಾಡುತ್ತೇವೆ ನೀವು ನಮ್ಮ ಮನೆಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೂ ಮಾಧವರು ಯಾರ ಮನೆಗೂ ಹೋಗದೇ, ಜಗನ್ನಾಥ ನನ್ನನ್ನು ರಕ್ಷಿಸುತ್ತಾನೆಂಬ ನಂಬಿಕೆಯಲ್ಲಿ ಒಬ್ಬರೇ ಇರುತ್ತಿದ್ದರು.

ತನ್ನ ಪರಮ ಭಕ್ತ ಈ ರೀತಿ ಒದ್ದಾಡುವುದನ್ನು ನೋಡಲಾಗದೇ, ಜಗನ್ನಾಥ ಸೇವಕನ ವೇಷ ಧರಿಸಿ, ಬೇಡ ಬೇಡವೆಂದರೂ, ಮಾಧವರ ಸೇವೆ ಮಾಡಿದ. ಒಂದು ದಿನ ಆ ಸೇವಕನೇ ಜಗನ್ನಾಥನೆಂದು ಮಾಧವರಿಗೆ ಗೊತ್ತಾದಾಗ, ಅವರು ಕೈಮುಗಿದು, ನೀನು ಮನಸ್ಸು ಮಾಡಿದರೆ, ನನ್ನ ರೋಗವನ್ನು ವಾಸಿ ಮಾಡಬಹುದಿತ್ತು. ಅದನ್ನು ಬಿಟ್ಟು ನೀನೇಕೆ ನನ್ನ ಸೇವೆ ಮಾಡಿದೆ ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ಜಗನ್ನಾಥ, ಪೂರ್ವ ಜನ್ಮದಲ್ಲಿ ಮಾಡಿದ ಪಾಪಕ್ಕಾಗಿ, ನಿನಗೆ ಈ ರೋಗ ಬಂದಿತ್ತು. ಅದನ್ನು ನೀನು ಅನುಭವಿಸಲೇಬೇಕಿತ್ತು. ಅದಕ್ಕಾಗಿ ನಿನ್ನ ರೋಗ ಗುಣ ಮಾಡದೇ, ನಿನ್ನ ಸೇವೆ ಮಾಡಿದೆ. ನೀನು ಇನ್ನೂ 15 ದಿನ ರೋಗ ಅನುಭವಿಸಬೇಕಿತ್ತು. ಆದರೆ ನಾನೇ ಜಗನ್ನಾಥನೆಂಬ ಸತ್ಯ ನೀನು ಅರಿತ ಕಾರಣ, ನಿನ್ನ 15 ದಿನದ ರೋಗವನ್ನು ನಾನು ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ.

ಈ ಕಾರಣಕ್ಕೆ ವರ್ಷದಲ್ಲಿ 15 ದಿನ ಜಗನ್ನಾಥ ಮಂದಿರದ ಬಾಗಿಲನ್ನು ಮುಚ್ಚಿರುತ್ತಾರೆ. ಈ ದಿನ ದೇವಸ್ಥಾನದೊಳಗೆ ಅರ್ಚಕರು ದೇವರಿಗೆ 56 ರೀತಿಯ ಭೋಜನ ನೀಡುವುದಿಲ್ಲ. ಬದಲಾಗಿ ಕಹಿ ಔಷಧವನ್ನು ನೈವೇದ್ಯ ಮಾಡುತ್ತಾರೆ. ಹಣ್ಣಿನ ರಸವನ್ನು ಜಗನ್ನಾಥನಿಗೆ ಅರ್ಪಿಸುತ್ತಾರೆ. 15 ದಿನದ ಬಳಿಕ ದೇವಸ್ಥಾನದ ಬಾಗಿಲು ತೆರೆಯುವ ಮೂಲಕ. ಪುರಿ ಜಗನ್ನಾಥ ಯಾತ್ರೆ ಆರಂಭವಾಗುತ್ತದೆ.

ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..

ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

- Advertisement -

Latest Posts

Don't Miss