ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರು ಸೂಕ್ತ ತೀರ್ಮಾನ ಕೈಗೊಳ್ತಾರೆ ಅಂತ ನಾನು ಹೇಳಿದಂತೆ ಆಗಿದೆ. ಸುಮಲತಾರನ್ನು ಜನ ಗೆಲ್ಲಿಸೋ ಮೂಲಕ ಕುಮಾರಸ್ವಾಮಿಗೆ ಪಾಠ ಕಲಿಸಿದ್ದಾರೆ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ನಾನು ಹೇಳಿದ ಹಾಗೆ ಜನ ಸೂಕ್ತ ತೀರ್ಮಾನ ಕೈಗೊಂಡು ಸುಮಲತಾರನ್ನು ಗೆಲ್ಲಿಸೋ ಮೂಲಕ ಎಚ್ಡಿಕೆಗೆ ಪಾಠ ಕಲಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ಪರ ನಿಂತ ಮಂಡ್ಯ ಜನ ಸುಮಲತಾರನ್ನು 8 ಕ್ಷೇತ್ರದಲ್ಲಿ ಗೆಲ್ಲಿಸಿದ್ರು. ಕುಮಾರಸ್ವಾಮಿಯವ್ರ ನಡೆ, ನುಡಿಗೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಅಂತ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.
ಜನ ಪುಟ್ಟರಾಜು ರಾಜೀನಾಮೆ ಕೇಳಬೇಕು
ನಾನು, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ ಮಾಡಿದ ತಪ್ಪೇನು? ಅಂತ ಪ್ರಶ್ನಿಸಿದ ಚಲುವರಾಯಸ್ವಾಮಿ, ಜನರಿಗೆ ಕೊಟ್ಟಿದ್ದ ಭರವಸೆಯನ್ನಾದ್ರೂ ಈಡೇರಿಸಿದ್ರೆ ಜನ ಅವ್ರನ್ನ ಉಳಿಸಿಕೊಳ್ತಿದ್ರು. ಅವರ ಪರ ಇದ್ದವರೇ ಅವರ ವಿರುದ್ಧ ನಿಂತ್ರು ಅಂತ ಹೇಳಿದ್ದಾರೆ.
ಚುನಾವಣೆ ವೇಳೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋ ವಿಚಾರವಾಗಿ ಪ್ರತಿಕ್ರಿಯಿಸಿ ಚಲುವರಾಯಸ್ವಾಮಿ, ನನ್ನನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಅಂತ ನಾನ್ಯಾಕೆ ಹೇಳಬೇಕಿತ್ತು, ನಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂದಾಗ ಸೋತವ್ರ ವಿಶ್ವಾಸ ಬೇಡ ಅಂತ ಸಚಿವ ಪುಟ್ಟರಾಜು ಹೇಳಿದ್ರು. 23ಕ್ಕೆ ಉತ್ತರ ಕೊಡ್ತೀನಿ ಅಂದ್ರು ಸಚಿವರು ಕೊಟ್ರಾ? ಅಂತ ಪುಟ್ಟರಾಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ದೇವೇಗೌಡ, ಕುಮಾರಸ್ವಾಮಿ ಅಲೆಯಿಂದ ನಾಗಮಂಗಲದಲ್ಲಿ ನಿಖಿಲ್ ಲೀಡ್ ಪಡೆದಿದ್ದಾರೆ ಅಷ್ಟೇ. ಸುಮಲತಾರದ್ದು ಒಬ್ಬರ ಗೆಲುವಲ್ಲ ಅವರದ್ದು ಸ್ವಾಭಿಮಾನದ ಗೆಲುವು. ಜೆಡಿಎಸ್ ನವರ ನಡವಳಿಕೆಯಿಂದಾಗಿಯೇ ನಾವು ಅವರನ್ನ ಬೆಂಬಲಿಸಲ್ಲ ಅಂತ ಚಲುವರಾಯಸ್ವಾಮಿ ಹೇಳಿದ್ದಾರೆ.
ಸುಮಲತಾ ಕೊಟ್ಟ ಮಾತು ಉಳಿಸಿಕೊಳ್ತಾರಾ…? ಈ ವಿಡಿಯೋ ತಪ್ಪದೇ ನೋಡಿ.