Health Tips: ವ್ಯಾಯಾಮ ಮಾಡುವವರು ದೇಹಕ್ಕೆ ಎಷ್ಟು ಅಗತ್ಯವೋ, ಅಷ್ಟೇ ವ್ಯಾಯಾಮ ಮಾಡಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ವ್ಯಾಯಮ, ಜಿಮ್ ಮಾಡಿದ್ರೆ, ಅಂಥವರ ಜೀವಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದನ್ನ ನಾವು ನೀವು ನೋಡಿದ್ದೇವೆ. ಹಾಗಾಗಿ ವೈದ್ಯರು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಬೇಡವೆನ್ನುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಎಕ್ಸ್‌ಸೈಜ್ ಮಾಡುವ ಮುನ್ನ ಇಸಿಜಿ ಚೆಕ್ ಮಾಡಿಸಿಕೊಳ್ಳಬೇಕಂತೆ. ಹೆಚ್ಚು ವ್ಯಾಯಾಮ ಮಾಡಲಾಗದವರು, ವಾಕಿಂಗ್ ಮಾಡುವುದು ಉತ್ತಮ. ಯಾರಾದರೂ ಟ್ರೇಡ್‌ಮಿಲ್ ಮಾಡುವುದಿದ್ದರೆ, ಮೊದಲು ಇಸಿಜಿ ಚೆಕ್ ಮಾಡಿಸಿಕೊಂಡು, ಹೆಚ್ಚೆಂದರೆ 40ರಿಂದ 45 ನಿಮಿಷ ಮಾಡಬಹುದು ಅಂತಾರೆ ವೈದ್ಯರು.
ಇನ್ನು ಯಾರೂ ಕೂಡ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಯಾವುದೇ ವ್ಯಾಯಾಮವಾಗಲಿ 40 ನಿಮಿಷಕ್ಕಿಂತ ಹೆಚ್ಚು ಮಾಡಲು ಹೋಗಬೇಡಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿ ತಿಳಿಯಲು ವೀಡಿಯೋ ನೋಡಿ..