Tuesday, March 11, 2025

Latest Posts

ಕೊರೋನಾ ನಂತರ ತಲೆಕೂದಲು ಉದುರುವಿಕೆ ಅತಿಯಾಗಿದೆಯೇ?

- Advertisement -

Health Tips: ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ. ಅದರಲ್ಲೂ ಇಂದಿನ ಪೀಳಿಗೆಯವರ ಜೀವನ ರೀತಿ, ಆಹಾರ ಪದ್ಧತಿ, ಕಲ್ಮಶದಿಂದ ಕೂಡಿರುವ ನೀರಿನ ಬಳಕೆ, ಧೂಳು, ಮಣ್ಣು ಇವುಗಳಿಂದಲೇ, ಹೆಚ್ಚು ಕೂದಲು ಉದುರುತ್ತಿದೆ. ಇದನ್ನು ಬಿಟ್ಟು ಕೂದಲು ಉದುರಲು ಇರುವ ಇನ್ನೊಂದು ಕಾರಣವೆಂದರೆ, ಕೊರೋನಾ. ಕೊರೋನಾ ನಂತರ ಹಲವರಿಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದೆ.

ಪ್ರತಿದಿನ ನೂರಕ್ಕಿಂತ ಹೆಚ್ಚು ಕೂದಲು ಉದುರಿದರೆ, ಅದನ್ನು ಕೂದಲು ಉದುರುವಿಕೆ ಎಂದು ಹೇಳಲಾಗುತ್ತದೆ. ಹಲವು ಆರೋಗ್ಯ ಸಮಸ್ಯೆಗಳು ಬಂದು ಹೋದ ಬಳಿಕ ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇತ್ತೀಚೆಗೆ ಕೊರೋನಾ ಬಂದು ಹೋದ ಬಳಿಕ, ಹಲವರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ.

ಇಂಥ ಸಮಸ್ಯೆಗಳಿದ್ದಾಗ, ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ, ವೈದ್ಯರು ಕೂದಲು ಉದುರುವಿಕೆಗೆ ಕಾರಣವೇನು ಎಂದು ಹೇಳಿ, ಅದಕ್ಕೆ ತಕ್ಕ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ ಯಾವ ಎಣ್ಣೆ, ಶ್ಯಾಂಪೂ, ಸೇರಮ್ ಬಳಸಬೇಕು ಎಂಬ ಸಲಹೆಯೂ ನೀಡುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ..?

ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ..?

ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳು ವ್ಯಾಕ್ಸಿಂಗ್ ವಿಷಯದಲ್ಲಿ ಈ ತಪ್ಪು ಮಾಡಲೇಬಾರದು..

- Advertisement -

Latest Posts

Don't Miss