Monday, October 6, 2025

Latest Posts

ಅತಿಯಾಗಿ ಕೂದಲು ಉದುರುತ್ತಿದೆಯಾ..? ಕಾರಣವೇನು ಗೊತ್ತಾ..?

- Advertisement -

Health Tips: ಇಂದಿನ ಕಾಲದ ಹಲವರ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಏನೇ ಔಷಧಿ ಮಾಡಿದ್ರೂ ಕೂದಲು ಉದುರೋದು ಮಾತ್ರ ಕಡಿಮೆಯಾಗಲ್ಲ. ಡಾ.ದೀಪಿಕಾ ಅವರು ಇಂದು ಅತಿಯಾರಿ ಕೂದಲು ಉದುರಲು ಕಾರಣವೇನು ಅಂತಾ ವಿವರಿಸಿದ್ದಾರೆ.

ವೈದ್ಯರು ಹೇಳುವುದೇನೆಂದರೆ, ನಾವು ಆರೋಗ್ಯಕರ ಆಹಾರ ಸೇವಿಸದಿದ್ದಲ್ಲಿ, ನಮ್ಮ ಜೀವನದಲ್ಲಿ ಒತ್ತಡವಿದ್ದಲ್ಲಿ, ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ದೇಹದಲ್ಲಿ ಐರನ್ ಸತ್ವ ಕಡಿಮೆ ಇದ್ದಲ್ಲಿ ಹೆಚ್ಚು ಕೂದಲು ಉದುರಲು ಶುರುವಾಗುತ್ತದೆ. 25 ವರ್ಷ ದಿಂದ 35 ವರ್ಷದವರೆಗೆ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿರುತ್ತದೆ.

ದೇಹದಲ್ಲಿ ಹಾರ್ಮೋನಿನ ಏರುಪೇರು ಆದಾಗ, ನಮ್ಮ ಜೀವನಶೈಲಿ ಆರೋಗ್ಯಕರವಾಗಿ ಇರದಿದ್ದಾಗ, ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಇದ್ದಾಗ, ನಾವು ಬಳಸುವ ನೀರು ಸ್ವಚ್ಛವಾಗಿ ಇರದಿದ್ದಾಗ, ಕೂದಲು ಉದುರುವ ಸಮಸ್ಯೆ ಶುರುವಾಗುತ್ತದೆ. ಹಳೆಯ ಕಾಲದವರ ಜೀವನ ಶೈಲಿ ಅತ್ಯುತ್ತಮವಾಗಿತ್ತು. ಅವರು ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸುತ್ತಿದ್ದರು. ತಲೆಗೆ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ, ತಲೆಸ್ನಾನ ಮಾಡುತ್ತಿದ್ದರು. ಕೆಮಿಕಲ್ ಯುಕ್ತವಾದ ಶ್ಯಾಂಪೂ ಬಳಸುತ್ತಿರಲಿಲ್ಲ. ಹಾಗಾಗಿ ಅಂದಿನ ಕಾಲದಲ್ಲಿ ಹೆಚ್ಚು ಕೂದಲು ಉದುರುವ ಸಮಸ್ಯೆ ಇರಲಿಲ್ಲ.

ಇಂದಿನ ಕಾಲದಲ್ಲಿ ಕೆಮಿಕಲ್ ಯುಕ್ತವಾದ ಶ್ಯಾಂಪೂ, ಎಣ್ಣೆ, ಹೇರ್‌ಮಾಸ್ಕ್ ಬಳಸಲಾಗುತ್ತಿದೆ. ಆಹಾರವೂ ಅಷ್ಟು ಆರೋಗ್ಯಕರವಿಲ್ಲ. ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವವರು ಕಡಿಮೆ. ನೆನಪಾದಾಗ ಮಾತ್ರ ನೀರು ಕುಡಿಯುತ್ತಾರೆ. ಹೀಗಾಗಿ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿದೆ. ಈ ಬಗ್ಗೆ ಹಲವು ರೀತಿಯ ಚಿಕಿತ್ಸೆ ಕೊಡಲಾಗುತ್ತದೆ. ಈ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss