Health Tips: ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಎಸ್, ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಬ್ಲೀಡಿಂಗ್ ಸಮಸ್ಯೆ ಇರುತ್ತದೆ. ಮಕ್ಕಳಾಗಲು ಸಮಸ್ಯೆ ಇರುತ್ತದೆ. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ಡಾ.ಚಂದ್ರಿಕಾ ಆನಂದ್ ಈ ಬಗ್ಗೆ ವಿವರಿಸಿದ್ದು, ವೈದ್ಯರು ಹೇಳುವ ಪ್ರಕಾರ, ಪಿಸಿಓಡಿ ಮತ್ತು ಪಿಸಿಓಎಸ್ ಇವೆರಡೂ ಒಂದೇ. ಈ ಆರೋಗ್ಯ ಸಮಸ್ಯೆ ಬಂದಲ್ಲಿ, ಕೂದಲು ಉದುರುವ ಸಮಸ್ಯೆ, ಪಿಂಪಲ್ಸ್, ತೊಡೆ, ಹೊಟ್ಟೆ, ಬೆನ್ನು, ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವ ಲಕ್ಷಣಗಳು ಕಂಡು ಬರುತ್ತದೆ. ಕೆಲವರಿಗೆ ಮುಟ್ಟಿನಲ್ಲಿ ಸಮಸ್ಯೆಯಾಗುತ್ತದೆ.
ಪ್ರತಿ ತಿಂಗಳು ಸರಿಯಾಗಿ ಮುಟ್ಟಾಗುವುದಿಲ್ಲ. ಇನ್ನು ಕೆಲವರಿಗೆ ಸಂತಾನ ಹೀನ ಸಮಸ್ಯೆ ಬರುತ್ತದೆ. ಕೆಲವರಿಗೆ ಸಿಕ್ಕಾಪಟ್ಟೆ ಕೂದಲು ಉದುರಿ ಹೋಗುತ್ತದೆ. ಪಿಸಿಓಡಿಯನ್ನು ಕಡೆಗಣಿಸಿದರೆ, ಸಣ್ಣ ವಯಸ್ಸಿನಲ್ಲೇ ಬಿಪಿ, ಶುಗರ್, ಕೊಲೆಸ್ಟ್ರಾಲ್, ಕ್ಯಾನ್ಸರ್, ಹೃದಯ ಖಾಯಿಲೆಯಂಥ ಸಮಸ್ಯೆಗಳು ಕಂಡು ಬರುತ್ತದೆ. ಇವೆಲ್ಲ ಲಕ್ಷಣಗಳು ಯಾರಲ್ಲಿ ಕಂಡು ಬರುತ್ತದೆಯೋ, ಅಂಥವರು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..