ಸಾಫ್ಟ್, ಫೇರ್, ಬ್ಯೂಟಿಫುಲ್ ಮುಖ ನಿಮ್ಮದಾಗಬೇಕೆ..? ಹಾಗಾದ್ರೆ ಈ ಫೇಸ್ ಪ್ಯಾಕ್ ಬಳಸಿ..

ಇಂದಿನ ಯುವ ಪೀಳಿಗೆಯವರು ತಿಂಗಳಿಗೆ ಎರಡು ಬಾರಿಯಾದರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾರೆ. ಅಲ್ಲಿ, ಕ್ಲೀನ್ ಅಪ್, ಫೇಸ್‌ಪ್ಯಾಕ್, ಬ್ಲೀಚಿಂಗ್ ಇತ್ಯಾದಿ ಮಾಡಿಸಿ, ದಿನಗಳೆದಂತೆ ಮುಖದ ನ್ಯಾಚುರಲ್ ಬ್ಯೂಟಿ ಕಳೆದುಕೊಳ್ತಾರೆ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ವಿಭಿನ್ನ ತರಹದ ಕ್ರೀಮ್, ಜೆಲ್‌ಗಳನ್ನು ಬಳಸಿ, ಇರುವ ಸೌಂದರ್ಯವನ್ನೂ ಕಳೆದುಕೊಳ್ತಿದ್ದಾರೆ. ಅಂಥವರಿಗಾಗಿ ನಾವಿಂದು ಒಂದು ಫೇಸ್‌ಪ್ಯಾಕ್ ರೆಸಿಪಿ ತಂದಿದ್ದೇವೆ. ಅದ್ಯಾವುದು..? ಅದನ್ನ ಹೇಗೆ ಅಪ್ಲೈ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ಒಂದು ಸಣ್ಣ ಬೌಲ್ ಪಪ್ಪಾಯಿ ಹಣ್ಣು, ಅದರ ಬೀಜ, ಒಂದು ಪ್ಯಾಕ್ ಗ್ರೀನ್ ಟೀ, ಎರಡು ಸ್ಪೂನ್ ಅಕ್ಕಿ ಹಿಟ್ಟು, ರೋಸ್‌ ವಾಟರ್. ಇವಿಷ್ಟು ಫೇಸ್‌ಪ್ಯಾಕ್‌ಗೆ ಬೇಕಾಗಿರುವ ಸಾಮಗ್ರಿ. ಮೊದಲು ಗ್ರೀನ್ ಟೀಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಅಕ್ಕಿ ಹಿಟ್ಟು ಬೆರೆಸಿ ಪಕ್ಕಕ್ಕಿರಿಸಿ. ಈಗ ಮಿಕ್ಸಿ ಜಾರ್‌ಗೆ ಪಪ್ಪಾಯಿ ಹಣ್ಣು ಮತ್ತು ಅದರ ಬಿಜ ಸೇರಿಸಿ ರುಬ್ಬಿ ಪೇಸ್ಟ್‌ ತಯಾರಿಸಿಕೊಳ್ಳಿ.

ಈ ಪೇಸ್ಟ್‌ಗೆ ಅಕ್ಕಿ ಹಿಟ್ಟು ಮತ್ತು ಗ್ರೀನ್ ಟೀ ಪುಡಿ ಸೇರಿಸಿ. ಈಗ ತಯಾರಾಗಿರುವ ಪೇಸ್ಟ್‌ಗೆ ಕೊಂಚ ರೋಸ್‌ ವಾಟರ್ ಬೆರೆಸಿ ಕೈಗೆ ಅಪ್ಲೈ ಮಾಡಿ.  15 ನಿಮಿಷ ಬಿಟ್ಟು ನಿಮಗೇನೂ ಅಲರ್ಜಿಯಾಗಿಲ್ಲವೆಂದು ಖಾತ್ರಿಯಾದಲ್ಲಿ, ಅದನ್ನ ಮುಖಕ್ಕೆ ಅಪ್ಲೈ ಮಾಡಿ, 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಈ ಫೇಸ್‌ಪ್ಯಾಕ್ ಬಳಸಬಹುದು.

ಇದನ್ನು ರೆಡಿ ಮಾಡಿದ ಬಳಿಕ ಇದನ್ನ ಫ್ರಿಜ್‌ನಲ್ಲಿರಿಸಿ, ಒಂದು ವಾರ ಬಳಸಬಹುದು. ನೀವು ಇದನ್ನ ಫ್ರಿಜ್‌ನಲ್ಲಿರಿಸದೇ, ಹೊರಗೇ ಇರಿಸಿದರೆ, ಅದು ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಪೇಸ್ಟ್‌ನ್ನ ಫ್ರಿಜ್‌ನಲ್ಲಿರಿಸಿ ಬಳಸಿ. ಅಲ್ಲದೇ ತಿಂಗಳಿಗೆ 8 ಬಾರಿಯಾದ್ರೂ ನೀವು ಪಪ್ಪಾಯಿ ಹಣ್ಣನ್ನ ತಿನ್ನಬೇಕು. ಇದರಿಂದ ನಿಮ್ಮ ಸೌಂದರ್ಯ ಹೆಚ್ಚುವುದಲ್ಲದೇ, ಹೊಟ್ಟೆ ನೋವಿನ ಸಮಸ್ಯೆ, ಮಲಬದ್ಧತೆ ಸಮಸ್ಯೆ ಇದ್ರೆ ಅದು ಕೂಡ ದೂರವಾಗುತ್ತದೆ.

About The Author