ಚಾಮರಾಜನಗರ: ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷನ ದುರ್ವರ್ತನೆ ಖಂಡಿಸಿ ಚಾಮರಾಜನಗರದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲೆಯ ಕುಂತೂರಿನ ಬಣ್ಣಾರಿಯಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷನ ದುರ್ವತನೆಗೆ ಖಂಡಿಸಿ ಕಳೆದ 12 ದಿಗಳಿಂದ ರೈತರು ಪ್ರತಿಭಟನೆ ನಡೆಸ್ತಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಶರವಣ ಕಾರ್ಖಾನೆಗೆ ಕಬ್ಬು ತಂದು ಹಾಕುವ ರೈತರ ಜೊತೆ ಅನುಚಿತ ವರ್ತನೆ ತೋರುತ್ತಿದ್ದಾರೆ ಅಲ್ಲದೆ ತಮಗೆ ನೀಡಬೇಕಾಗಿರೋ ಬಾಕಿ ಹಣ ಕೇಳಿದರೆ ಅಸಂಬದ್ಧವಾಗಿ ವರ್ತಿಸುತ್ತಾರೆ ಅನ್ನೋದು ರೈತರ ಆರೋಪವಾಗಿದೆ. ಹೀಗಾಗಿ ಆತನನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಆತನನ್ನು ಗಡಿ ಪಾರು ಮಾಡಿ ಅಂತ ರೈತರು ಪ್ರತಿಭಟನೆಗಿಳಿದಿದ್ದಾರೆ. ಜಿಲ್ಲಾಡಳಿತ ಭವನದೆದುರು ಮುಷ್ಕರ ನಡೆಸ್ತಿರೋ ರೈತರು ಇಂದು ಪ್ರತಿಭಟನೆಯ 12ನೇ ದಿನವಾದ್ದರಿಂದ ತರ್ಪಣ ಬಿಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು.
ಇನ್ನು ಶರವಣ ಗಡಿಪಾರಾಗೋವರೆಗೂ ಹೋರಾಟ ಮುಂದುವರಿಸೋದಾಗಿ ರಾದ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಭಾಗ್ಯರಾಜ್ ಹೇಳಿದ್ದಾರೆ.
ಪ್ರಸಾದ್. ಕರ್ನಾಟಕ ಟಿವಿ- ಚಾಮರಾಜನಗರ