Sunday, June 22, 2025

Latest Posts

ಕೊಬ್ಬು ಕೆಟ್ಟದ್ದೇನಲ್ಲ.. ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ..?

- Advertisement -

Health Tips: ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಾಗಲೇ, ಹೃದಯಕ್ಕೆ ಸಮಸ್ಯೆಯಾಗುತ್ತದೆ. ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಕೊಬ್ಬಿನಂಶ ಇರಲೇಬಾರದು ಅಂತಲ್ಲ. ಏಕೆಂದರೆ, ಕೊಂಚ ಕೊಬ್ಬಿನಂಶ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಹಾಗಾದ್ರೆ ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ..

ಕೊಬ್ಬಿನ ಬಗ್ಗೆ ಎಲ್ಲರೂ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಫ್ಯಾಟ್ ಇದ್ದರೆ, ನಾವು ದಪ್ಪವಾಗುತ್ತೇವೆ. ನಮಗೆ ರೋಗ ಬರುತ್ತದೆ. ಹೃದಯದ ಆರೋಗ್ಯ ಹಾಳಾಗುತ್ತದೆ ಅನ್ನೋ ಭಾವನೆ ಇದೆ. ಕೆಲವರು ದೇಹದಲ್ಲಿರುವ ಕೊಬ್ಬನ್ನು ತೆಗೆಸಲು ಸರ್ಜರಿ ಮಾಡಿಸಿಕೊಂಡು, ಜೀವ ಹಾನಿ ಮಾಡಿಕೊಂಡವರಿದ್ದಾರೆ. ಆದರೆ ಅದು ಕೆಟ್ಟ ಕೊಬ್ಬಿನಿಂದ ಆಗುವ ಸಮಸ್ಯೆಗಳು. ದೇಹದಲ್ಲಿ 2 ರೀತಿಯ ಕೊಬ್ಬುಗಳಿದೆ. ಒಂದು ಕೆಟ್ಟ ಕೊಬ್ಬು ಇನ್ನೊಂದು ಒಳ್ಳೆ ಕೊಬ್ಬು. ದೇಹಕ್ಕೆ ಒಳ್ಳೆ ಕೊಬ್ಬಿನ ಅವಶ್ಯಕತೆ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಆರೋಗ್ಯವಂತ ದೇಹದಲ್ಲಿ ಸ್ವಲ್ಪವಾದರೂ ಕೊಬ್ಬಿರಬೇಕು.

ದೇಹದಲ್ಲಿ ಕೊಬ್ಬಿನಂಶ ಇದ್ದರೆ, ಅದು ಹಸಿವನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ, ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಒಳ್ಳೆ ಕೊಬ್ಬು ಇಲ್ಲದಿದ್ದಲ್ಲಿ, ಮುಟ್ಟಿನ ತೊಂದರೆ ಉಂಟಾಗುತ್ತದೆ. ದಿನಾಂಕಕ್ಕಿಂತ ಬೇಗ ಮುಟ್ಟಾಗುವುದು. ಆ ಸಮಯದಲ್ಲಿ ಕಿರಿಕಿರಿ ಉಂಟಾಗುವುದೆಲ್ಲ ಆಗುತ್ತದೆ. ಹಾಗಾಗಿ ದೇಹದಲ್ಲಿ ಉತ್ತಮ ಕೊಬ್ಬಿನಂಶ ಇರುವುದು ತುಂಬಾ ಮುಖ್ಯ.

ಇಷ್ಟೇ ಅಲ್ಲದೇ, ದೇಹದಲ್ಲಿ ಒಳ್ಳೆ ಕೊಬ್ಬಿಗಿಂತ ಕೆಟ್ಟ ಕೊಬ್ಬು ಹೆಚ್ಚಾಗಿದ್ದರೆ, ಸಂತಾನ ಸಮಸ್ಯೆ ಉತ್ಪತ್ತಿಯಾಗುತ್ತದೆ. ಹಲವು ಕೇಸ್‌ಗಳಲ್ಲಿ ದೇಹದಲ್ಲಿ ಸರಿಯಾದ ರೀತಿಯಲ್ಲಿ ಕೊಬ್ಬಿನ ಅಂಶ ಇಲ್ಲದ ಕಾರಣ, ಸಂತಾನ ಹೀನತೆಯಾಗಿದೆ. ಹಾಗಾಗಿ ದೇಹದಲ್ಲಿ ಒಳ್ಳೆಯ ಕೊಬ್ಬು ಇರಲು ಏನೇನು ಆಹಾರಗಳನ್ನು ಸೇವಿಸಬೇಕೋ, ಅದನ್ನು ಸೇವಿಸಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss