Tuesday, October 7, 2025

Latest Posts

ಮೂರ್ಖ ವ್ಯಕ್ತಿಯಲ್ಲಿ ಇಂಥ ಗುಣವಿರುತ್ತದೆಯಂತೆ… ನಿಮ್ಮಲ್ಲೂ ಇಂಥ ಗುಣವಿದೆಯಾ..?

- Advertisement -

ನಾವು ಮಾತನಾಡುವ ರೀತಿ ನೋಡಿ, ಅಥವಾ ನಾವು ನಡೆದುಕೊಳ್ಳುವ ರೀತಿ ನೋಡಿ ಜನ ನಾವು ಯಾವ ರೀತಿಯ ಮನುಷ್ಯರು ಅಂತಾ ಡಿಸೈಡ್ ಮಾಡ್ತಾರೆ. ಅಂತೆಯೇ ವಿದುರ ತಮ್ಮ ನೀತಿಯಲ್ಲಿ ಮೂರ್ಖ ಜನರಲ್ಲಿ ಎಂಥ ಲಕ್ಷಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೂರ್ಖನ ಮೊದಲನೇಯ ಗುಣ ಅಂದ್ರೆ, ಯಾವ ವ್ಯಕ್ತಿ ಯಾವುದಾದರೂ ಕೆಲಸ ಮಾಡುವ ಮುನ್ನ, ಆ ಕೆಲಸ ಮಾಡಲು ನಾನು ಯೋಗ್ಯನಿದ್ದೇನಾ..? ಆ ಕೆಲಸ ಶುರು ಮಾಡಿದರೆ, ನಾನು ಅದರಲ್ಲಿ ಯಶಸ್ಸು ಕಾಣಬಹುದಾ..? ಆ ಕೆಲಸ ಮಾಡುವಷ್ಟು ನನ್ನಲ್ಲಿ ಕ್ಷಮತೆ ಮತ್ತು ದುಡ್ಡಿದೆಯಾ..? ಈ ಕೆಲಸ ಮಾಡುವುದರಿಂದ ನನ್ನ ಮನೆ ಜನಕ್ಕೆ ತೊಂದರೆಯಾಗುತ್ತದಾ..? ಇಲ್ಲವಾ..? ಇತ್ಯಾದಿ ವಿಷಯಗಳ ಬಗ್ಗೆ ಒಂಚೂರು ವಿಚಾರ ಮಾಡದೇ, ಕೆಲಸಕ್ಕೆ ಇಳಿಯುತ್ತಾನೆ. ಹೀಗೆ ಭವಿಷ್ಯದ ಬಗ್ಗೆ ವಿಚಾರ ಮಾಡದೇ, ಕೆಲಸಕ್ಕೆ ಇಳಿಯುವುದು ಮೂರ್ಖನ ಗುಣ.

ಎರಡನೇಯದಾಗಿ ಒಂದು ಕೆಲಸ ಮಾಡುವಾಗ ಅದರಿಂದ ನನಗೆ ಲಾಭ ಅಥವಾ ನಷ್ಟವಿದೆಯಾ ಅಂತಾನೂ ಯೋಚಿಸದೇ, ಸುಮ್ಮನೆ ಕೆಲಸ ಮಾಡುವವನು. ತನಗೆ ಒಳ್ಳೆಯದನ್ನೇ ಬಯಸುವವರ ಬಳಿ ಸುಳ್ಳು ಹೇಳುವವನು. ಬೇರೆಯವರ ಜೀವನದಲ್ಲಿ ತಲೆ ಹಾಕುವವನು. ಅಂದ್ರೆ ತನಗೆ ಸಂಬಂಧಿಸದೇ ಇರುವ ವಿಷಯದ ಬಗ್ಗೆ ಮಾತನಾಡುತ್ತಾನೋ, ಅಂಥವನು ಮೂರ್ಖನು.

ಮೂರನೇಯದಾಗಿ ತನಗೆ ಪಡೆಯುವ ಯೋಗ್ಯತೆ ಇರದ ವಸ್ತುವನ್ನು ಪಡಿಯಲೇ ಬೇಕೆಂದು ಹಠಕ್ಕೆ ಬೀಳುವವನು. ತನಗೆ ಪಡೆಯುವ ಯೋಗ್ಯತೆ ಇರುವ ವಸ್ತುವನ್ನು ಪಡೆಯದೇ ಸುಮ್ಮನಿರುವನು. ತನಗಿಂತ ಬಲಿಷ್ಟ ವ್ಯಕ್ತಿಗಳ ಜೊತೆ ಶತ್ರುತ್ವ ಬೆಳೆಸಿಕೊಳ್ಳುವನು ಮೂರ್ಖನು ಎನ್ನುತ್ತಾರೆ ವಿದುರ.

ನಾಲ್ಕನೇಯದಾಗಿ ಯಾವ ಕೆಲಸವನ್ನು ಮಾಡಬೇಕೋ, ಆ ಕೆಲಸವನ್ನು ಮಾಡದವನು. ಮತ್ತು ಯಾವ ಕೆಲಸವನ್ನು ಮಾಡಬಾರದೋ, ಆ ಕೆಲಸವನ್ನು ಮಾಡುವವನು. ಯಾರನ್ನು ಭೇಟಿಯಾಗಬಾರದೋ, ಅಂಥವರನ್ನೇ ಪದೇ ಪದೇ ಭೇಟಿಯಾಗುವವನು. ಮತ್ತು ಯಾರನ್ನು ಭೇಟಿಯಾಗಬೇಕೋ, ಅವರಿಂದ ತಪ್ಪಿಸಿಕೊಳ್ಳುವವನು ಶತಮೂರ್ಖ.

- Advertisement -

Latest Posts

Don't Miss