Monday, October 6, 2025

Latest Posts

ಸಂಜೆ ಹೊತ್ತಲ್ಲಿ ಹೆಚ್ಚು ಸಿಹಿ ತಿನ್ನಬೇಕು ಅನ್ನಿಸುತ್ತಾ..?

- Advertisement -

Health Tips: ಪ್ರತೀ ಮನುಷ್ಯನಿಗೂ ರುಚಿ ರುಚಿಯಾದ ತಿಂಡಿ ತಿನ್ನಬೇಕು ಅನ್ನೋ ಆಸೆ ಇರುತ್ತದೆ. ಕೆಲವರು ಆರೋಗ್ಯ ಸಮಸ್ಯೆ ಬರುತ್ತದೆ ಎಂದು, ಡಯಟ್ ಮಾಡುತ್ತಾರೆ. ಮತ್ತೆ ಕೆಲವರು ತಮಗೆ ಏನೇನು ತಿನ್ನಬೇಕು ಎನ್ನಿಸುತ್ತದೆಯೋ ಅದನ್ನು ತಿನ್ನುತ್ತಾರೆ. ಅದರಲ್ಲೂ ಕೆಲವರಿಗೆ ಸಂಜೆ ಹೊತ್ತಲ್ಲಿ ಹೆಚ್ಚು ಸಿಹಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಹಾಗಾದ್ರೆ ಇದು ಅನಾರೋಗ್ಯದ ಲಕ್ಷಣವಾ..? ಅಥವಾ ಕಾಮನ್ ಆಗಿ ಅನ್ನಿಸುವುದು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ವೈದ್ಯರು ಹೇಳುವ ಪ್ರಕಾರ, ಸಿಹಿ ತಿನ್ನಬೇಕು ಅಂತಾ ಅನ್ನಿಸೋದು ಸಾಮಾನ್ಯ. ಆದರೆ ತಿನ್ನೋದು ಬಿಡೋದು ಮಾತ್ರ ನಮ್ಮ ಕೈಯಲ್ಲಿರುತ್ತದೆ. ಹಾಗಾಗಿ ಸಕ್ಕರೆ ಅಂಶ ಇರುವ ಪದಾರ್ಥವನ್ನು ತಿನ್ನುವುದು ಕಡಿಮೆ ಮಾಡಿ ಅಂತಾರೆ ವೈದ್ಯರು. ಅಲ್ಲದೇ, ಸಕ್ಕರೆ ಬದಲು, ನಾವು ಜೋನಿ ಬೆಲ್ಲ, ಜೇನುತುಪ್ಪದ ಸೇವನೆ ಮಾಡುತ್ತೇವೆ ಎಂದು ಕೆಲವರು ಹೇಳುತ್ತಾರೆ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಕೆಮಿಕಲ್‌ನಿಂದ ತುಂಬಿ ಹೋಗಿದೆ. ಹಾಗಾಗಿ ನಿಮಗೆ ಆ ಜೋನಿ ಬೆಲ್ಲ ಅಥವಾ ಜೇನುತುಪ್ಪದಲ್ಲಿ ಯಾವುದೇ ಕೆಮಿಕಲ್ಸ್ ಇಲ್ಲವೆಂದಲ್ಲಿ ಮಾತ್ರ ಅದನ್ನು ನೀವು ಬಳಸಬಹುದು.

ಇನ್ನು ನನಗೆ ಸಿಹಿ ತಿನ್ನೋದನ್ನ ಕಂಟ್ರೋಲ್ ಮಾಡಲು ಸಾಧ್ಯವೇ ಆಗುತ್ತಿಲ್ಲವೆಂದಲ್ಲಿ, ನೀವು ಆ ಜಾಗದಲ್ಲಿ ಖರ್ಜೂರ, ಅಂಜೂರ, ದ್ರಾಕ್ಷಿ ಇಂಥವುಗಳನ್ನ ಸೇವಿಸಿ. ಇದು ಆರೋಗ್ಯಕ್ಕೂ ಉತ್ತಮ, ತಿನ್ನಲು ರುಚಿಯಾಗಿರುತ್ತದೆ. ನಮ್ಮ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆದಾಗಲೇ ನಮಗೆ ರುಚಿ ರುಚಿಯಾದ, ಸಿಹಿಯಾದ ಅಥವಾ ಜಂಕ್ ಫುಡ್ ಸೇವನೆ ಮಾಡಬೇಕು ಅಂತಾ ಅನ್ನಿಸುತ್ತದೆ.

ಹಾಗಾಗಿ ನಮ್ಮ ದೇಹದಲ್ಲಿ ಹಾರ್ಮೋನಲ್ ಬ್ಯಾಲೆನ್ಸ್ ಸರಿಯಾಗಿ ಇರಬೇಕು ಅಂದ್ರೆ, ನಾವು ಆರೋಗ್ಯಕರವಾದ ಸಮತೋಲಿತ ಆಹಾರವನ್ನೇ ಸೇವಿಸಬೇಕು. ಬೆಳಿಗ್ಗೆ ಸರಿಯಾದ ಸಮಯಕ್ಕೆ ತಿಂಡಿ, ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟ, ಸಂಜೆ ತಿಂಡಿ, ರಾತ್ರಿ ಊಟ ಮಾಡುವುದಿಲ್ಲವೋ, ಆಗಲೇ ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ. ಹಾಗಾಗಿ ಸಮಯಕ್ಕೆ ತಕ್ಕಂತೆ ಊಟ ಮಾಡಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

- Advertisement -

Latest Posts

Don't Miss