Thursday, November 7, 2024

Latest Posts

ಭ್ರೂಣ ಹತ್ಯೆ ವಿಚಾರ: ಪೊಲೀಸ್ ಇಲಾಖೆ, ನಮ್ಮ ಇಲಾಖೆ ಕೈ ಜೋಡಿಸಿ ತನಿಖೆ ಮಾಡಿಸುತ್ತೇವೆ: ಸಚಿವ ಗುಂಡೂರಾವ್

- Advertisement -

Political News: ತುಮಕೂರು: ಭ್ರೂಣ ಹತ್ಯೆ ವಿಚಾರವಾಗಿ ತುಮಕೂರಿನಲ್ಲಿ ದಿನೇಶ್ ಗುಂಡೂರಾವ್ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು ಈಗಾಗಲೇ ಮಂಡ್ಯ ಮೈಸೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಇದೆ ಪರಿಸ್ಥಿತಿ ರಾಜ್ಯದಲ್ಲಿ ಮುಂದುವರಿದಿದೆ. ಪೊಲೀಸ್ ಇಲಾಖೆಯವರು ಬೈಯ್ಯಪ್ಪನಹಳ್ಳಿಯಲ್ಲಿ ಈ ಜಾಲವನ್ನು ಪತ್ತೆಹಚ್ಚಿದ್ದಾರೆ. ಇದೊಂದು ಬಹಳ ದೊಡ್ಡದಾದ ವಿಸ್ತೃತವಾಗಿ ತನಿಖೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಜೊತೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ.

ಅಲ್ಲದೇ, ಇದು ಒಂದು ಜಿಲ್ಲೆಗೆ, ಒಂದು ತಾಲೂಕಿಗೆ ಸೀಮಿತವಾಗಿಲ್ಲ. ಇಡೀ ರಾಜ್ಯವೇ ಈ ಜಾಲ ವ್ಯಾಪಿಸಿದೆ. ನಿನ್ನೆ ರಾತ್ರಿ ಈ ವಿಚಾರವಾಗಿ ಚರ್ಚೆ ಮಾಡಿ, ಇದನ್ನು ಸರಿಯಾದ ಅಂತದಲ್ಲಿ ಸಿಐಡಿ ತನಿಖೆಗೆ ಒಪ್ಪಿಸಬೇಕಿದೆ. ಪೊಲೀಸ್ ಇಲಾಖೆ ಹಾಗೂ ನಮ್ಮ ಇಲಾಖೆ ಕೈ ಜೋಡಿಸಿ ತನಿಖೆ ಮಾಡಿಸುತ್ತೇವೆ. ಲಿಂಗಾಣುಪಾತವಾಗಿ ನೋಡಿದಾಗ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿದೆ. ಇಂತಹ ಪ್ರಗತಿಪರ ಆಧುನಿಕರ ಜಗತ್ತಿಗೆ ಕಾಲು ಇಡುತ್ತಿದ್ದೇವೆ.ಆದರೂ ಇಂತಹ ಸಂದರ್ಭದಲ್ಲಿ ಇನ್ನಡೆ ಆಗಲು ಕಾರಣವೇನೆಂದರೆ, ಹೆಣ್ಣು ಮಗುವಾದರೆ ಬೇಡವೆನ್ನುವ ರೀತಿ ನಮ್ಮ ಸಮಾಜದಲ್ಲಿ ಇದೆ. ಹೆಣ್ಣು ಮಗು ಎಂದರೆ ಭಾರವಾಗುವ ರೀತಿಯಲ್ಲಿ ತಿಳಿದುಕೊಂಡು ಗಂಡು ಮಗುವೇ ಬೇಕೆಂದು ಕೇಳುವ ಮನಸ್ಥಿತಿಗೆ ಹೋಗಬಾರದು.

ಎರಡನೆಯದು ಇದನ್ನು ತಡೆಯುವ ಕೆಲಸ ಮಾಡಬೇಕಿದೆ,ಅದಕ್ಕೆ ನಮ್ಮ ಇಲಾಖೆ ಹೆಚ್ಚು ಗಮನಹರಿಸಬೇಕು. ಇಬ್ಬರು ಅಧಿಕಾರಿಗಳಿಗೆ ಈಗಾಗಲೇ ನಾನು ಅಮಾನತು ಮಾಡಿದ್ದೇನೆ. ಇದು ಒಂದು ಜಿಲ್ಲೆಗೆ ಸೀಮಿತವಾಗಿಲ್ಲ ಎಲ್ಲಾ ಕಡೆ ಆಗುತ್ತಿದ್ದು, ಅದಕ್ಕಾಗಿ ರಾಜ್ಯದ ವ್ಯಾಪ್ತಿಗೆ ತೆಗೆದುಕೊಂಡು ಕಾರ್ಯಕ್ರಮ ರೂಪಿಸಬೇಕಿದೆ. ನಾವು ನಮ್ಮ ಇಲಾಖೆಯಿಂದ ಏನೇನು ಮಾಡಬೇಕೆಂದು ರೂಪುರೇಷೆ ಮಾಡುತ್ತಿದ್ದೇವೆ. ಕೊರಟಗೆರೆ ಪಾವಗಡ ಭಾಗದಲ್ಲಿ ಒಂದು ಟ್ರಾಮಕೇರ್ ಮಾಡಲು ನಾವು ರೂಪುರೇಷೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಇನ್ನು ಬೆಂಗಳೂರು ಮುಂಬೈ ಹೈವೇಯಲ್ಲಿ ಹೆಚ್ಚು ಅಪಘಾತ ಆಗುತ್ತಿದೆ. ಹಾಗಾಗಿ ಈ ಹೈವೇಯಲ್ಲಿ ಚಿಕಿತ್ಸೆಗೆ ಬೇಕಾಗಿರುವ ಆರೋಗ್ಯ ಸಲಕರಣೆ ಹಾಗೂ ಟ್ರಾಮಕೇರ್ ಮಾಡಲು ರೆಡಿ ಇದ್ದೇವೆ. ಬೆಂಗಳೂರಿನಲ್ಲೆ ಅಲ್ಲ ಎಲ್ಲಾ ಕಡೆ ಕ್ಯಾನ್ಸರ್ ಇದೆ. ಮಾಲಿನ್ಯ ಹಾಗೂ ಕೆಟ್ಟ ಅಭ್ಯಾಸ ಮತ್ತು ಆಹಾರದಿಂದ ಕ್ಯಾನ್ಸರ್ ಬರುತ್ತಿದೆ. ಆಹಾರ ಪದ್ಧತಿ ಬಗ್ಗೆ ನಿಗಾ ವಹಿಸಿದರೆ .ಕೆಟ್ಟ ಅಭ್ಯಾಸ ಬಿಟ್ಟರೆ ಕ್ಯಾನ್ಸರ್ ನಿರ್ಮೂಲನೆ ಮಾಡಬಹುದು ಎಂದು ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಗೆ 5 ರಾಜ್ಯದಲ್ಲಿ ತೀವ್ರ ಪೈಪೋಟಿ ನೆಡೆದಿದೆ. ಮಿಜೋರಾಂ ಸೇರಿ ಎಲ್ಲಾ ಕಡೆ ಪೈಪೋಟಿ ನೀಡಿದ್ದೇವೆ. ಇದರಲ್ಲಿ 4 ರಾಜ್ಯದಲ್ಲಿ ಕಾಂಗ್ರೆಸ್ ಜಯಗೊಳಿಸುತ್ತದೆ. ಗ್ಯಾರೆಂಟಿ ಯೋಜನೆಯಿಂದ ಅಲ್ಲಾ ಜನ ಇವತ್ತು ರಾಷ್ಟ್ರ ರಾಜ್ಯದಲ್ಲಿ ನೋಡಿದ್ದಾರೆ ಏನು ಸಾಧನೆ, ಭಾವನಾತ್ಮಕ ವಿಚಾರ ಹೇಳಿಕೊಂಡು ಹೋಗುತ್ತಾರೆ. ಶ್ರೀಮಂತರು ಅನುಕೂಲ ಮಾಡಿಕೊಡುತ್ತಾರೆ. ಸಾಮಾನ್ಯ ಜನರಿಗೆ ಅನುಕೂಲ ಆಗಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರಗಳ ಬಗ್ಗೆ ಜನ ಬೇಜಾರಾಗಿದ್ದಾರೆ . ಆದ್ದರಿಂದ ಕಾಂಗ್ರೆಸ್ ಕಡೆ ಜನ ಮುಖ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಕಾರ್ಯಕ್ರಮದ ಪ್ರೀತಿ ನೋಡಿ ಜನ ಕಾಂಗ್ರೆಸ್ ಜನಮನಗೊಳಿಸುತ್ತಿದೆ. ನಮ್ಮ ಇಲಾಖೆಯಲ್ಲಿ ಎನ್ಎಚ್ಎಂ ಹೊರಗುತ್ತಿಗೆ ಸಿಎಂಓ ಗಳನ್ನು ಖಾಯಂ ಮಾಡಲು ಸರ್ಕಾರದ ಮಟ್ಟದಲ್ಲಿ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತಿವೆ ಎಂದಿದ್ದಾರೆ.

‘ವಿಧಾನಸಭಾ ಚುನಾವಣೆ ಫಲಿತಾಂಶ ‌ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ’

‘ದೇವೇಗೌಡರು ದೊಡ್ಡ ಆಲದ ಮರ ಇದ್ದಂತೆ, ಅವರ ನೆರಳಲ್ಲಿ ನಾನು ಕೆಲಸ ಮಾಡಿದ್ದೀನಿ’

ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

- Advertisement -

Latest Posts

Don't Miss