Tuesday, August 5, 2025

Latest Posts

ಅಂಜೂರ ಖೀರು ರೆಸಿಪಿ

- Advertisement -

Recipe: ಒಣಹಣ್ಣುಗಳನ್ನ ಬಳಸಿ ತರಹೇವಾರಿ ಸಿಹಿ ತಿಂಡಿ ಮಾಡಲಾಗುತ್ತದೆ. ಅದೇ ರೀತಿ ಅಂಜೂರ ಬಳಸಿ, ಖೀರು ಮಾಡಬಹುದು. ಇಂದು ನಾವು ಅಂಜೂರ ಬಳಸಿ ಖೀರು ಮಾಡೋದು ಹೇಗೆ ಎಂದು ಹೇಳಲಿದ್ದೇವೆ.

ಮೊದಲು ಪಾತ್ರೆ ಬಿಸಿಗಿಟ್ಟು, ಇದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ, ಇದಕ್ಕೆ ನೆನೆಸಿ ಸಿಪ್ಪೆ ತೆಗೆದ 15 ಬಾದಾಮಿ ಬೀಜಗಳನ್ನು ಹಾಕಿ, ಹುರಿಯಿರಿ. 3 ಟೇಬಲ್ ಸ್ಪೂನ್ ಸ್ವಚ್ಛವಾಗಿ ತೊಳೆದ ಅಕ್ಕಿ ಹಾಕಿ ಹುರಿಯಿರಿ. ಇದಕ್ಕೆ 1 ಲೀಟರ್ ಹಾಲು, ನೆನೆಸಿಟ್ಟ ಕೇಸರಿದಳ, ಸೇರಿಸಿ.  ಈಗ 3 ಗಂಟೆ ನೆನೆಸಿಟ್ಟ 15 ಅಂಜೂರವನ್ನು ಸಣ್ಣದಾಗಿ ಕತ್ತರಿಸಿಕೊಂಡು, ಗ್ರೈಂಡರ್ಗೆ ಹಾಕಿ ಪೇಸ್ಟ್ ಮಾಡಿ.

ಈಗ ಹಾಲಿನೊಂದಿಗೆ ಅಕ್ಕಿ ಚೆನ್ನಾಗಿ ಬೆಂದಿರುತ್ತದೆ. ಇದರೊಂದಿಗೆ ಈಗಾಗಲೇ ಪೇಸ್ಟ್ ಮಾಡಿದ ಅಂಜೂರವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಮಂದ ಉರಿಯಲ್ಲಿ 3 ನಿಮಿಷವಾದರೂ ಕುದಿಸಿ. ಅಂಜೂರ ಸಿಹಿಯಾಗಿರುವ ಕಾರಣ, 6ರಿಂದ 7 ಟೇಬಲ್ ಸ್ಪೂನ್ ಸಕ್ಕರೆ ಸೇರಿಸಿ. ಚಿಟಿಕೆ ಏಲಕ್‌ಕಿ ಪುಡಿ ಹಾಕಿ, ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕುದಿಸಿ. ಈಗ ಪಾಯಸ ರೆಡಿ.

Chawli Leaves : ಕೆಂಪು ದಂಡಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ…?!

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..

- Advertisement -

Latest Posts

Don't Miss