Financial Knowledge: ಶ್ರೀಮಂತರಾಗಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತನ್ನು ಜೀವನದಲ್ಲಿ ಅಳವಡಿಸಿ

Financial Knowledge: ಜೀವನದ ಎಲ್ಲಾ ಅನುಭವಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿರುವ ಚಾಣಕ್ಯರು, ಹಣ ಉಳಿತಾಯದ ಬಗ್ಗೆಯೂ ಹಲವು ವಿಷಯಗಳನ್ನು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಸರಿಯಾದ ಯೋಜನೆ ರೂಪಿಸಿ: ಯಾವುದೇ ಕೆಲಸ ಶುರು ಮಾಡುವಾಗಲೂ ನಾವು ಯೋಜನೆ ರೂಪಿಸಬೇಕಾಗುತ್ತದೆ. ಅದೇ ರೀತಿ ಹಣ ಉಳಿತಾಯ, ಹೂಡಿಕೆ ಮಾಡುವಾಗ ನಾವು ಪ್ರಥಮವಾಗಿ ಯೋಜನೆ ರೂಪಿಸಬೇಕು.

ಬಂದ ಸಂಬಳದಲ್ಲಿ ಪ್ರಥಮ ಭಾಗ ಹೂಡಿಕೆಗೆ ಸೀಮಿತವಾಗಿರಬೇಕು. ಬಳಿಕ ಉಳಿದ ಹಣದಲ್ಲಿ ಅವಶ್ಯಕತೆಗೆ ಹಣ ತೆಗೆದಿರಿಸಬೇಕು. ನಂತರ ಉಳಿದ ಹಣದಲ್ಲಿ ಸ್ವಲ್ಪ ಹಣ ಎಮರ್ಜೆನ್ಸಿಗೆ ಉಪಯೋಗಿಸಬೇಕು. ಅದರಲ್ಲಿ ಉಳಿದ ಹಣವನ್ನು ಖರ್ಚಿಗಾಗಿ ಉಪಯೋಗಿಸಬೇಕು.

ಉತ್ತಮ ಜನರ ಜತೆ ಸಂಪರ್ಕವಿರಲಿ: ಇನ್ನು ನೀವು ಶ್ರೀಮಂತರಾಗಬೇಕು ಅಂದ್ರೆ, ಬರೀ ದುಡಿದರೆ, ಉದ್ಯಮ ಮಾಡಿದರೆ ಸಾಲದು. ಅದೇ ರೀತಿ ನಿಮ್ಮ ಸಂಪರ್ಕವಿರಬೇಕು. ಅಂದ್ರೆ, ಬುದ್ಧಿವಂತರ ಕಾಂಟ್ಯಾಕ್ಟ್ ಇರಬೇಕು. ಗಣ್ಯರ ಸಂಪರ್ಕವಿರಬೇಕು. ಉದ್ಯಮಿಗಳ ಸಂಪರ್ಕವಿರಬೇಕು. ಮತ್ತು ಇವರೆಲ್ಲರೂ ಶ್ರಮ ಜೀವಿಗಳಾಗಿರಬೇಕು. ಇಂಥವರ ಸಂಪರ್ಕ ಮಾಡಿದರೆ, ನಿಮ್ಮ ಬುದ್ಧಿವಂತಿಕೆ, ಉದ್ಯಮ ಎಲ್ಲವೂ ಅಭಿವೃದ್ಧಿಯಾಗುತ್ತದೆ.

ಸಮಯದ ಬೆಲೆ ತಿಳಿದಿರಲಿ: ನೀವು ಶ್ರೀಮಂತರಾಗಬೇಕು ಅಂದ್ರೆ ಸಮಯದ ಬೆಲೆ ತಿಳಿದಿರಬೇಕು. ಸಮಯ ವ್ಯರ್ಥ ಮಾಡದೇ, ಕೆಲಸ ಮಾಡುವುದನ್ನು, ಹೂಡಿಕೆ ಮಾಡುವುದನ್ನು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಅವಕಾಶ ಬಳಸಿಕ“ಳ್ಳುವುದು ತಿಳಿದಿರಬೇಕು.

ವಿಶಾಲ ಯೋಚನೆ ಇರಲಿ: ಸೀಮಿತ ಚಿಂತನೆ ಇರುವ ವ್ಯಕ್ತಿ ಸೀಮಿತ ಫಲಿತಾಂಶ ಪಡೆಯುತ್ತಾರೆ. ಹಾಾಗಾಗಿ ಅವನ ಯೋಚನೆ ವಿಶಾಲವಾಗಿದ್ದರೆ ಮಾತ್ರ, ಆತ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ ಅಂತಾರೆ ಚಾಣಕ್ಯರು.

About The Author