ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ಕ್ರಮ ಅನುಸರಿಸಿ..

Health Tips: ನಮ್ಮ ಸ್ಕಿನ್ ಸಾಫ್ಟ್ ಆಗಬೇಕು ಎಂದು ನಾವು ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುತ್ತೇವೆ. ಆದರೆ ಇದಷ್ಟೇ ಸಾಲುವುದಿಲ್ಲ. ನಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲದೇ, ಅದನ್ನು ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚುವ ಮುನ್ನ, ಕೆಲ ಟಿಪ್ಸ್ ಅನುಸರಿಸಬೇಕಾಗುತ್ತದೆ. ಅದು ಯಾವ ಟಿಪ್ಸ್ ಅಂತಾ ತಿಳಿಯೋಣ ಬನ್ನಿ..

ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿದರಷ್ಟೇ ನಿಮ್ಮ ತ್ವಚೆ ಸಾಫ್ಟ್ ಆಗುವುದಿಲ್ಲ. ಹೊಳಪಿನಿಂದ ಕೂಡಿರುವುದಿಲ್ಲ. ಬದಲಾಗಿ ನೀವು ವಾರಕ್ಕೊಮ್ಮೆಯಾದರೂ ಮುಖಕ್ಕೆ ಸ್ಕ್ರಬಿಂಗ್ ಮಾಡಿಕೊಳ್ಳಬೇಕು. ಮನೆಯಲ್ಲೇ ಟೊಮೆಟೋ ಸಕ್ಕರೆ, ಕಾಫಿ ಪುಡಿ ಸಕ್ಕರೆ, ಇವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಸ್ಕ್ರಬಿಂಗ್ ಮಾಡಿಕೊಳ್ಳಿ. ಬಳಿಕ ಫೇಸ್‌ವಾಶ್ ಮಾಡಿ, ಮಾಯಿಶ್ಚರೈಸಿಂಗ್ ಕ್ರೀಮ್ ಹಚ್ಚಿ.

ಮಾಯಿಶ್ಚರೈಸಿಂಗ್ ಕ್ರೀಮ್ ಬಳಸುವ ಬದಲು ನೀವು ಪ್ರತಿದಿನ ಆ್ಯಲೋವೆರಾ ಜೆಲ್ ಮುಖಕ್ಕೆ ಹಚ್ಚಬಹುದು. ಆದರೆ ಅದು ಗಿಡದಿಂದ ತೆಗೆದ ಫ್ರೆಶ್ ಆ್ಯಲೋವೆರಾ ಆಗಿರಬೇಕು. ಆಗಲೇ ನಿಮ್ಮ ಮುಖದ ಸೌಂದರ್ಯ ಇಮ್ಮಡಿಯಾಗುತ್ತದೆ. ದಿನಕ್ಕೆ 5ರಿಂದ 6 ಬಾರಿಯಾದರೂ, ಸೋಪ್ ಬಳಸದೇ, ಬರೀ ನೀರನ್ನು ಬಳಸಿ, ಮುಖ ತೊಳೆಯಿರಿ.

ಇನ್ನು ಮುಖ್ಯವಾದ ವಿಷಯ ಅಂದ್ರೆ, ನಿಮ್ಮ ಮುಖ ಒಳಗಿನಿಂದ ಹೈಡ್ರೇಟ್ ಆಗುವುದು ತುಂಬಾ ಮುಖ್ಯ. ಆಗಲೇ ನಿಮ್ಮ ಮುಖದಲ್ಲಿ ಹೊಳಪು ಬರುವುದು. ಹಾಗಾಗಿ ಎಷ್ಟಾಗತ್ತೋ ಅಷ್ಟು ನೀರು ಕುಡಿಯಿರಿ. ಹಣ್ಣು, ತರಕಾರಿ, ಜ್ಯೂಸ್, ಎಳನೀರು, ಡ್ರೈ ಫ್ರೂಟ್ಸ್, ಸೊಪ್ಪು, ಮೊಳಕೆ ಕಾಳು ಇವುಗಳ ಸೇವನೆ ಮಾಡಿ. ಹಾಲು, ಮೊಸರು, ಮಜ್ಜಿಗೆ, ತುಪ್ಪಗಳ ಸೇವನೆ ಕೂಡ ಅತ್ಯಗತ್ಯ.

ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ..?

‘ಜೀನಿ ಕುಡಿದಿದ್ದರಿಂದ ದೇಹದಲ್ಲಿದ್ದ ಗಾಯಗಳು ಕೂಡ ಮಾಯವಾಗಿದೆ’

ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?

About The Author