Health Tips: ಮಳೆಗಾಲ ಮತ್ತು ಚಳಿಗಾಲದಲ್ಲಿ ಅಷ್ಟು ಬೆವರಿನ ವಾಸನೆ ಬರದಿದ್ದರೂ, ಬೇಸಿಗೆಯಲ್ಲಿ ಮಾತ್ರ ಬೇವರಿನ ದುರ್ಗಂಧ ಎಲ್ಲರಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ಹಲವರು ಪರ್ಫ್ಯೂಮ್‌ನಿಂದಲೇ ಸ್ನಾನ ಮಾಡಿಬಿಡುತ್ತಾರೆ. ಅಂದ್ರೆ ಅಷ್ಟು ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ ಎಂದರ್ಥ. ಪರ್ಫ್ಯೂಮ್ ಹಾಕುವುದು ತಪ್ಪಲ್ಲ. ಆದರೆ ಅದರ ಬದಲು ನೀವು ಹಲವು ಮನೆ ಮದ್ದು ಮಾಡಬಹುದು. ಹಾಗಾದ್ರೆ ಯಾವ ಮನೆಮದ್ದು ಒಳ್ಳೆಯದು ಅಂತಾ ತಿಳಿಯೋಣ ಬನ್ನಿ..
ಬೇಸಿಗೆಯಲ್ಲಿ ಬಾಯಾರಿಕೆಯಾಗುವುದು ಸಹಜ. ಈ ವೇಳೆ ಕೂಲ್‌ಡ್ರಿಂಕ್ಸ್ ಸೇರಿ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳನ್ನು ಬಳಸುವ ಬದಲು, ನೀರು ಕುಡಿಯಿರಿ. ನೀವು ಎಷ್ಟು ನೀರು ಕುಡಿಯುತ್ತಿರೋ, ಅಷ್ಟು ನಿಮ್ಮ ಬೆವರಿನ ವಾಸನೆ ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಸಾಲೆ ಪದಾರ್ಥಗಳನ್ನು ಹೆಚ್ಚು ತಿಂದಷ್ಟು ನಿಮ್ಮ ಬೆವರಿನ ವಾಸನೆ ಹೆಚ್ಚಾಗುತ್ತದೆ. ಹಾಗಾಗಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಸಾಲೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಹೆಚ್ಚು ನೀರು ಕುಡಿಯಿರಿ, ಎಳನೀರು, ಮನೆಯಲ್ಲೇ ಸಕ್ಕರೆ ಬಳಸದೇ ತಯಾರಿಸಿ ಜ್ಯೂಸ್ ಕುಡಿಯಿರಿ. ಹಣ್ಣು, ಮೊಸರು, ಮಜ್ಜಿಗೆ ಸೇವನೆ ಮಾಡಿ.
ಬೇಸಿಗೆಯಲ್ಲಿ ಬೆವರಿನ ವಾಸನೆ ಬರಬಾರದು ಅಂದ್ರೆ, ತಣ್ಣೀರಿನ ಸ್ನಾನ ಮಾಡಬೇಕು. ಬಿಸಿ ನೀರು ನಮ್ಮ ದೇಹದಲ್ಲಿ ಇನ್ನಷ್ಟು ಬೆವರು ಹೆಚ್ಚಲು ಸಹಕಾರಿಯಾಗಿದೆ. ಅಥವಾ ಉಗುರು ಬೆಚ್ಚಗಿನ ನೀರಿಗೆ ಸುವಾಸನೆ ಎಣ್ಣೆ ಸ್ಪ್ರೇ ಮಾಡಿ, ಸ್ನಾನ ಮಾಡಿದರೂ ಉತ್ತಮ. ಅಥವಾ ಬೇವಿನ ಎಲೆ, ಮತ್ತು ದಪ್ಪ ಉಪ್ಪನ್ನು ಕೊಂಚವೇ ನೀವು ಸ್ನಾನ ಮಾಡುವ ನೀರಿಗೆ ಬಳಸಿದರೂ ಸಾಕು.
ಉತ್ತಮ ಕ್ವಾಲಿಟಿಯ ಬೇವಿನ ಸೊಪ್ಪಿನ, ಶ್ರೀಗಂಧ- ಅರಿಶಿನದ ಸೋಪ್ ಬಳಸಿ. ಇದರಿಂದ ದೇಹದ ದುರ್ಗಂಧ ತೊಲಗುತ್ತದೆ. ಮತ್ತು ನಿಮ್ಮ ದೇಹ ಇಡೀ ದಿನ ಸುವಾಸನೆ ಭರಿತವಾಗಿರುತ್ತದೆ. ಅಥವಾ ಸುವಾಸನೆಯುಕ್ತ ಎಣ್ಣೆಯನ್ನ ಕೂಡ ನಿಮ್ಮ ದೇಹಕ್ಕೆ ಸಿಂಪಡಿಸಿಕೊಳ್ಳಬಹುದು. ಪಪ್ಫ್ಯೂಮ್ ಬದಲು ಇದು ಉತ್ತಮವಾಗಿದೆ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..