Sunday, September 8, 2024

Latest Posts

ಚಾಣಕ್ಯರ ಈ ಮೂರು ನೀತಿ ಅನುಸರಿಸಿ, ಜೀವನದಲ್ಲಿ ಉದ್ಧಾರವಾಗಿ

- Advertisement -

Spiritual Story:ಚಾಣಕ್ಯ ನೀತಿಗೆ ಸಂಬಂಧಿಸಿದಂತೆ ನಾವು ನಿಮಗೆ ಅನೇಕ ಸಂಗತಿಗಳನ್ನು ಹೇಳಿದ್ದೇವೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು,ಮದುವೆಗೆ ಹೆಣ್ಣು- ಗಂಡು ಹುಡುಕುವಾಗ, ಗೆಳೆಯರ ಸಹವಾಸ ಮಾಡುವಾಗ ಇತ್ಯಾದಿ ಕೆಲಸಗಳಲ್ಲಿ ಯಾವ ನೀತಿ ಅಳವಡಿಸಿಕೊಳ್ಳಬೇಕು ಅಂತಾ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಇನ್ನು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಚಾಣಕ್ಯರ ಮೂರು ನೀತಿಯನ್ನು ಅನುಸರಿಸಬೇಕು. ಅದು ಯಾವುದು ಅಂತಾ ತಿಳಿಯೋಣ ಬನ್ನಿ..

ಜ್ಞಾನ: ಚಾಣಕ್ಯರ ಪ್ರಕಾರ ಯಾರಿಗೆ ಜ್ಞಾನವಿರುತ್ತದೆಯೋ, ಅಂಥವನಿಗೆ ಯಾರ ಅವಶ್ಯಕತೆಯೂ ಇರುವುದಿಲ್ಲ. ಜ್ಞಾನದಿಂದಲೇ ಆತ ಜೀವನ ನಡೆಸಬಹುದು. ಹಣ ಸಂಪಾದಿಸಬಹುದು. ಹಾಗಾಗಿ ಮನುಷ್ಯನಿಗೆ ಯಾವುದಾದರೂ ಉಪಯೋಗವಾಗುವಂಥ ವಿಷಯದ ಬಗ್ಗೆ ಉತ್ತಮ ಜ್ಞಾನವಿರಬೇಕು. ಹಾಾಗಾಗಿ ನಾವು ಯಾವುದಾದರೂ ವಿಷಯದ ಬಗ್ಗೆ ಕಲಿಯುವ ಅವಕಾಶ ಸಿಕ್ಕಾಗ, ಅದನ್ನು ಮಿಸ್ ಮಾಡಿಕೊಳ್ಳದೇ, ಕಲಿಯಬೇಕು ಅಂತಾರೆ ಚಾಣಕ್ಯರು.

ಯಶಸ್ಸು: ಸಿಕ್ಕ ಜ್ಞಾನದಿಂದ ಯಶಸ್ಸು ಗಳಿಸಬೇಕು. ಆ ಯಶಸ್ಸೇ ನಿಮ್ಮನ್ನು ಸಮಾಜದಲ್ಲಿ ಗೌರವಯುತವಾಗಿ ಬದುಕುವಂತೆ ಮಾಡುತ್ತದೆ. ಆ ಯಶಸ್ಸಿನಿಂದಲೇ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅದರಿಂದ ಗೌರವ ಇನ್ನೂ ಹೆಚ್ಚುತ್ತದೆ.

ನಿಯತ್ತು: ಜೀವನದಲ್ಲಿ ಜ್ಞಾನ, ಯಶಸ್ಸಿನ ಜೊತೆಗೆ ನಿಯತ್ತಿರಬೇಕು. ನಿಯತ್ತು ಮರೆತರೆ, ಇರುವ ಜ್ಞಾನ ಪ್ರಯೋಜನಕ್ಕೆ ಬರುವುದಿಲ್ಲ. ಯಶಸ್ಸು ಕಸಕ್ಕೆ ಸಮವಾಗುತ್ತದೆ. ಹಾಗಾಗಿ ಸಂಬಂಧದಲ್ಲಿ, ಕೆಲಸದ ವಿಷಯದಲ್ಲಿ ನಿಯತ್ತಿನಿಂದ ಇದ್ದಷ್ಟು, ಮನುಷ್ಯ ಸಮಾಜದಲ್ಲಿ ಗೌರವದಿಂದ ಬದುಕುತ್ತಾನೆ. ಇನ್ನು ನಿಯತ್ತು ಯಾಾರಿಗೆ ಇರುತ್ತದೆಯೋ, ಅಂಥವರು ಧರ್ಮಪಾಲಕರಾಗಿರುತ್ತಾರೆ.

ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?

ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

- Advertisement -

Latest Posts

Don't Miss