ಸದಾ ಆರೋಗ್ಯವಾಗಿರಲು ಈ ನಿಯಮವನ್ನು ಫಾಲೋ ಮಾಡಿ..

ನಾವು ಯಾವಾಗಲೂ ಆರೋಗ್ಯವಾಗಿರಬೇಕು, ನೆಮ್ಮದಿಯಿಂದಿರಬೇಕು. ಮುಪ್ಪು ಬಂದಾಗಲೂ ಅದು ಕಾಣದಷ್ಟು ಆ್ಯಕ್ಟೀವ್ ಇರಬೇಕು ಎಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಹಾಗೆ ನಾವು ಆರೋಗ್ಯವಾಗಿರಬೇಕು ಅಂದ್ರೆ, ಕೆಲ ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮೆಂತ್ಯೆ ಸೊಪ್ಪಿನ ಪದಾರ್ಥ ತಿಂದರೆ ನಿಮಗಾಗುವ ಆರೋಗ್ಯಕರ ಪ್ರಯೋಜನಗಳಿವು..

ಮೊದಲನೇಯ ನಿಯಮ ಅಂದ್ರೆ ಆಯಾ ಸೀಸನ್ ಹಣ್ಣು, ತರಕಾರಿಯನ್ನ ಆಯಾ ಸೀಸನ್‌ನಲ್ಲೇ ತಿನ್ನಬೇಕು. ಬೇಸಿಗೆಯಲ್ಲಿ ಮಾವಿನ ಹಣ್ಣು, ಮಳೆಗಾಲದಲ್ಲಿ ನೇರಳೆ, ಚಳಿಗಾಲದಲ್ಲಿ ಕಿತ್ತಳೆ ಹೀಗೆ ಆಯಾ ಸೀಸನಲ್ ಫ್ರೂಟ್ಸ್ ಅದೇ ಕಾಲದಲ್ಲಿ ತಿನ್ನಬೇಕು. ಕೆಲವರು ಆರೇಂಜ್ ಮತ್ತು ಮಾವಿನ ಹಣ್ಣನ್ನು ಎಲ್ಲಾ ಸೀಸನ್‌ನಲ್ಲೂ ತಿಂತಾರೆ. ಆದ್ರೆ ಇದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಹಾಗಾಗಿ ಸೀಸನ್ ಇದ್ದಾಗಲೇ, ಸೀಸನಲ್ ಫ್ರೂಟ್ಸ್ ತಿನ್ನಿ.

ಎರಡನೇಯ ನಿಯಮ, ಪ್ರತಿದಿನ 30 ನಿಮಿಷವಾದ್ರೂ ವ್ಯಾಯಾಮ ಮಾಡಬೇಕು. 20 ನಿಮಿಷವಾದ್ರೂ ವಾಕಿಂಗ್ ಮಾಡಬೇಕು. ಅದೇ ರೀತಿ ಬೆಳಿಗ್ಗೆ ಬರುವ ಸೂರ್ಯನ ಬಿಸಿಲಿಗೆ 15 ನಿಮಿಷವಾದ್ರೂ ಮೈಯೊಡ್ಡಬೇಕು. ಇದರಿಂದ ದೇಹಕ್ಕೆ ವಿಟಾಮಿನ್ ಡಿ ಅಂಶ ಸಿಗುತ್ತದೆ. ವ್ಯಾಯಾಮ ಮಾಡುವುದರಿಂದ, ದೇಹ ಕಟ್ಟು ಮಸ್ತಾಗಿರುತ್ತದೆ. ಇನ್ನು ನಡಿಗೆಯಿಂದ ನೀವು ನಿಮ್ಮ ವಯಸ್ಸನ್ನು ಮರೆಮಾಡಬಹುದು. ಅಂದ್ರೆ ಯಂಗ್ ಆಗಿ ಕಾಣಬಹುದು.

ಮೂರನೇಯದಾಗಿ ನಿಮ್ಮ ದೇಹಕ್ಕೆ ತಕ್ಕಷ್ಟು ನೀರು ಕುಡಿಯಬೇಕು. ಪ್ರತಿದಿನ 3 ಲೀಟರ್ ನೀರು ಕುಡಿಯಬೇಕು ಅಂತಾ ನಿಯಮವಿದೆ. ಆದ್ರೆ ನಿಮ್ಮ ದೇಹ 3 ಲೀಟರ್‌ ನೀರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದ್ದಲ್ಲಿ ಅಷ್ಟೇ ನೀರು ಕುಡಿಯಿರಿ. ಇಲ್ಲವಾದಲ್ಲಿ ಬೇಡ. ಯಾಕಂದ್ರೆ ಹೆಚ್ಚು ನೀರು ಕುಡಿದು, ಹೊಟ್ಟೆ ಉಬ್ಬಿ, ಉಸಿರಾಡುವ ಸಮಸ್ಯೆಯನ್ನು ಹಲವರು ಅನುಭವಿಸಿದ್ದಾರೆ. ಹಾಗಾಗಿ ನೀವು ನೀರು ಕುಡಿದಂತೆ 10, 15 ನಿಮಿಷದ ಬಳಿಕ, ನಿಮಗೆ ಯೂರಿನ್ ಪಾಸ್ ಆಗಲೇಬೇಕು. ಸರಿಯಾಗಿ ಯೂರಿನ್ ಪಾಸ್ ಆದರೆ, ನಿಮ್ಮ ಆರೋಗ್ಯ ಸರಿಯಾಗಿದೆ. ನೀವು ನೀರನ್ನು ಜೀರ್ಣಿಸಿಕೊಳ್ಳಬಲ್ಲಿರಿ ಎಂದರ್ಥ.  ನೀವು ಕುಡಿಯುವ ನೀರು ಸ್ವಚ್ಛವಾಗಿರಲಿ. ಬೆಳಿಗ್ಗೆ ಎದ್ದ ಬಳಿಕ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನಂತೂ ತಪ್ಪದೇ ಕುಡಿಯಿರಿ.

ಕಬ್ಬಿನ ಹಾಲಿನ ಸೇವನೆಯ ಪ್ರಯೋಜನವೇನು..?

ನಾಲ್ಕನೇಯದಾಗಿ 8 ಗಂಟೆಗಳ ಕಾಲ ನಿದ್ರಿಸಬೇಕು. ರಾತ್ರಿ 6 ಗಂಟೆ, ಮಧ್ಯಾಹ್ನ 2 ಗಂಟೆ ಅಂದ್ರೆ, ಅದು ಲೆಕ್ಕಕ್ಕಿಲ್ಲ. ಬದಲಾಗಿ ರಾತ್ರಿಯೇ 8 ಗಂಟೆಗಳ ಕಾಲ ನಿದ್ರಿಸಿ. ಮಧ್ಯಾಹ್ನ 15 ನಿಮಿಷದ ಚುಟುಕು ನಿದ್ರೆ ಮಾಡಿ. ಇದರಿಂದ ನಿಮ್ಮ ಬುದ್ಧಿಶಕ್ತಿ ಹೆಚ್ಚುತ್ತದೆ. 8 ಗಂಟೆಗಳ ಕಾಲ ನಿದ್ರಿಸುವುದರಿಂದ ನೀವು ಚೈತನ್ಯದಾಯಕವಾಗಿರುತ್ತೀರಿ.

ಐದನೇಯದಾಗಿ ನೀವು ಈಗಾಗಲೇ ದಪ್ಪವಾಗಿದ್ದರೆ, ನಿಮ್ಮ ತೂಕವನ್ನು ಹೆಚ್ಚುವ ಯಾವ ಕೆಲಸವನ್ನೂ ಮಾಡಬೇಡಿ. ಯಾಕಂದ್ರೆ ತೂಕ ಹೆಚ್ಚಿದಷ್ಟು ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಜಂಕ್‌ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಿ. ಟೀ ಕಾಫಿ ಸೇವನೆ ಕಡಿಮೆ ಮಾಡಿ. ಬೆಳಿಗ್ಗೆ ಲೇಟಾಗಿ ಎಳುತ್ತಿದ್ದರೆ, ಮಧ್ಯಾಹ್ನ ಗಂಟೆ ಗಟ್ಟಲೇ ನಿದ್ರಿಸುತ್ತಿದ್ದರೆ, ಅದನ್ನೂ ಕಡಿಮೆ ಮಾಡಿ.

About The Author