Monday, April 21, 2025

Latest Posts

ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

- Advertisement -

Health Tips: ಕೆಲವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಲಿ, ಎಷ್ಟೇ ಉತ್ತಮ ಆಹಾರ ಸೇವಿಸಲಿ, ಅವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಯಾವುದಾದರೂ ಟೆನ್ಶನ್ ಇದ್ದಲ್ಲಿ, ಅಥವಾ ಕೆಲವರಿಗೆ ರಾತ್ರಿ ಟೀ, ಕಾಫಿ ಸೇವನೆ ಮಾಡಿದ್ದಲ್ಲಿ, ಹೀಗೆ ನಿದ್ದೆ ಬರುವುದಿಲ್ಲ. ಹಾಗಾಗಿ ನಾವಿಂದು ರಾತ್ರಿ ಉತ್ತಮ ನಿದ್ರೆ ಬರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಮೊದಲನೇಯ ಟಿಪ್ಸ್ ಅಂದ್ರೆ, ರಾತ್ರಿ ಉಂಡ ಬಳಿಕ ಒಂದು ಲೈಟ್‌ ವಾಕ್ ಮಾಡಬೇಕು. 10 ನಿಮಿಷವಾದ್ರೂ ವಾಕ್ ಮಾಡಬೇಕು. ಈ ವಾಕ್ ಮಾಡುವ ಮುನ್ನವೇ, ನಿಮ್ಮ ಆಫೀಸು ಕೆಲಸ, ಚಾಟಿಂಗ್, ಕಾಲಿಂಗ್‌ ಎಲ್ಲವನ್ನೂ ಮುಗಿಸಿರಬೇಕು. ಏಕೆಂದರೆ, ನೀವು ವಾಕ್ ಮಾಡುವ ಮುನ್ನ ನಿಮ್ಮ ಮೊಬೈಲನ್ನು ಪಕ್ಕಕ್ಕಿರಿಸಬೇಕು. ಮತ್ತು ಬೆಳಿಗ್ಗೆ ಏಳುವವರೆಗೂ ಮೊಬೈಲ್ ಮುಟ್ಟಬಾರದು. ಹಾಗಾಗಿ ವಾಕ್ ಹೋಗುವ ಮುನ್ನ ಮೊಬೈಲ್ ಕೆಲಸವನ್ನು ಮುಗಿಸಿಬಿಡಿ.

ಎರಡನೇಯ ಟಿಪ್ಸ್. ವಾಕಿಂಗ್ ಹೋಗಿ ಬಂದ ಬಳಿಕ, ಕೈ ಕಾಲು ಮುಖ, ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ. ಬ್ರಶ್ ಮಾಡಿ. ಪಾದಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡಿ. ಕೊನೆಗೆ ಧ್ಯಾನ ಮಾಡಿ, ಮಲಗಿ. ಈ ಅಭ್ಯಾಸ ಬರೀ, ಉತ್ತಮ ನಿದ್ರೆ ಬರಲು ಅಲ್ಲ. ಬದಲಾಗಿ ನಮ್ಮ ಆರೋಗ್ಯ ಸದಾ ಉತ್ತಮವಾಗಿರಿಸಲು, ಇದು ಸಹಾಯ ಮಾಡುತ್ತದೆ.

ಉತ್ತಮ ನಿದ್ರೆಗೆ ಕೊನೆಯದಾಗಿ ಇರುವ ಟಿಪ್ಸ್ ಅಂದ್ರೆ ಗೋಲ್ಡನ್ ಮಿಲ್ಕ್. ಏಲಕ್ಕಿ, ಲವಂಗ, ಚಕ್ಕೆ, ಜೀರಿಗೆ, ಸೋಂಪು, ಕಾಳುಮೆಣಸು, ಶುಂಠಿ, ಅರಿಶಿನ ಪುಡಿ, ಅಗತ್ಯವಿದ್ದರೆ ಕೇಸರಿ, ಕೆಂಪು ಕಲ್ಲುಸಕ್ಕರೆ, ಇವಿಷ್ಟನ್ನು ಹಾಲಿಗೆ ಹಾಕಿ, ಚೆನ್ನಾಗಿ ಕುದಿಸಿ. ಇದೇ ಗೋಲ್ಡನ್ ಮಿಲ್ಕ್. ರಾತ್ರಿ ಮಲಗುವಾಗ, ಈ ಹಾಲನ್ನು ಕುಡಿದು ಮಲಗಿದ್ರೆ, ಚೆನ್ನಾಗಿ ನಿದ್ರೆ ಬರುತ್ತದೆ. ಆದರೆ ಇದಕ್ಕೆ ಬಳಸುವ ಮಸಾಲೆ ಪದಾರ್ಥಗಳ ಪ್ರಮಾಣ ಮಿತವಾಗಿ ಇರಲಿ.

ಎಲ್ಲಕ್ಕಿಂತ ಮುಖ್ಯವಾದ ವಿಷಯ ಅಂದ್ರೆ, ನಾವು ಬಳಸುವ ಗ್ಯಾಜೆಟ್ಸ್, ಅಂದ್ರೆ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಇತ್ಯಾದಿಯನ್ನ ಮಲಗುವ ಅರ್ಧ ಗಂಟೆ ಮುಂಚೆಯಾದ್‌ರೂ, ದೂರವಿರಿಸಬೇಕು. ಅದರಿಂದ ಬರುವ ವಿಕಿರಣಗಳೇ ನಮ್ಮ ನಿದ್ದೆಯನ್ನು ಮತ್ತು ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ನಿದ್ರೆ ಮಾಡುವ ಅರ್ಧ ಗಂಟೆ ಮುನ್ನವೇ, ಗ್ಯಾಜೆಟ್ಸ್ ಬಳಸುವುದನ್ನ ನಿಲ್ಲಿಸಿ. ಮತ್ತು ಅದನ್ನು ದೂರವಿರಿಸಿ.

ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

ಸಕ್ಕರೆಗಿಂತ, ಕಲ್ಲುಸಕ್ಕರೆಯ ಬಳಕೆ ಅತ್ಯುತ್ತಮ.. ಹೇಗೆ..?

ಪೆಪ್ಪರ್ ಪನೀರ್ ರೆಸಿಪಿ..

- Advertisement -

Latest Posts

Don't Miss