Health Tips: ಇಂದಿನ ಕಾಲದಲ್ಲಿ ಮುಕ್ಕಾಲು ಭಾಗ ಜನ, ತಮ್ಮ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಆದರೆ ಕಾಲು ಭಾಗದಷ್ಟು ಜನ ಕೂಡ, ತೂಕ ಹೆಚ್ಚಿಸಲು ಕಷ್ಟಪಡುತ್ತಾರೆ. ಹಾಗಾದರೆ ಆರೋಗ್ಯಕರವಾಗಿ, ತೂಕ ಹೆಚ್ಚಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನೀವು ಆರೋಗ್ಯಕರವಾಗಿ ನಿಮ್ಮ ತೂಕವನ್ನು ಹೆಚ್ಚಿಸಬೇಕು ಎಂದಲ್ಲಿ, ಮೊದಲು ವ್ಯಾಯಾಮ ಮಾಡಬೇಕು. ವ್ಯಾಯಾಮ ಹೇಗೆ ಮಾಡಬೇಕು ಎಂದು ಸರಿಯಾಗಿ ತಿಳಿದ ಬಳಿಕ, ವ್ಯಾಯಾಮ ಮಾಡಬೇಕು. ವ್ಯಾಯಾಮ ಸರಿಯಾಗಿ ಮಾಡಿದಾಗ, ಹೊಟ್ಟೆ ಹಸಿಯಲು ಶುರುವಾಗುತ್ತದೆ. ಹೊಟ್ಟೆ ಹಸಿಯಲು ಶುರುವಾದಾಗ, ಆರೋಗ್ಯಕರ ಆಹಾರ ಸೇವಿಸಬೇಕು. ಆಗ ನಿಮ್ಮ ದೇಹದ ತೂಕ ಆರೋಗ್ಯಕರವಾಗಿ ಹೆಚ್ಚಾಗುತ್ತದೆ.
ನೀವು ದಪ್ಪ ಆಗುವುದಿದ್ದರೂ, ಜಂಕ್ ಫುಡ್, ಕರಿದ ತಿಂಡಿಗಳ ಸೇವನೆ ನಿಲ್ಲಿಸಬೇಕಾಗುತ್ತದೆ. ಈ ರೀತಿಯ ಆಹಾರ ಸೇವನೆಯಿಂದ, ಅನಾರೋಗ್ಯಕರವಾಗಿ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಆದರೆ, ಆರೋಗ್ಯಕರವಾಗಿ ನಿಮ್ಮ ದೇಹದ ತೂಕ ಹೆಚ್ಚಬೇಕು ಎಂದಲ್ಲಿ, ನೀವು ರೊಟ್ಟಿ, ಕೆಂಪಕ್ಕಿ ಅನ್ನ, ತೊವ್ವೆ, ಹೆಸರುಕಾಳಿನ ಪಲ್ಯ, ಸಾರು ಇಂಥ ಆಹಾರವನ್ನು ಸೇವಿಸಬೇಕು. ಜೊತೆಗೆ, ಹಾಲು, ಮೊಸರು, ಮಜ್ಜಿಗೆ, ತುಪ್ಪದ ಸೇವನೆಯೂ ಮಾಡಬೇಕು. ಇವೆಲ್ಲವೂ ಮಿತವಾಗಿ ಸೇವಿಸಿದರೆ, ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಇದು ಅನುಕೂಲವಾಗುತ್ತದೆ.
ಇದರೊಂದಿಗೆ ಎಣ್ಣೆಯಿಂದ ನಿಮ್ಮ ದೇಹದ ಮಸಾಜ್ ಮಾಡಬೇಕು. ಎಣ್ಣೆ ಮಸಾಜ್‌ನಿಂದ ನಿಮ್ಮ ಹೊಟ್ಟೆಯ ಸಮಸ್ಯೆ, ವಾಯು ಸಮಸ್ಯೆ ಸರಿಯಾಗುತ್ತದೆ. ದೇಹದಲ್ಲಿ ತಂಪು ಮತ್ತು ಉಷ್ಣತೆ ಸಮತೋಲನದಲ್ಲಿ ಇರುತ್ತದೆ. ಇಷ್ಟೇ ಅಲ್ಲದೇ, ನೀವು ಆರೋಗ್ಯಕರವಾಗಿ ದಪ್ಪವಾಗಲು, ನಿಮಗೆ ಸಹಾಯ ಮಾಡುವ ಅಂಶವೆಂದರೆ, ನಿಮ್ಮ ಖುಷಿ ಮತ್ತು ನೆಮ್ಮದಿ. ಮನೆಯಲ್ಲಿ ಖುಷಿಯ ವಾತಾವರಣವಿದ್ದು, ನಿಮಗೆ ಯಾವುದೇ ಟೆನ್ಶನ್ ಇಲ್ಲದೇ ಇದ್ದಲ್ಲಿ, ನೀವು ಆರೋಗ್ಯಕರವಾಗಿ ದಪ್ಪವಾಗುತ್ತೀರಿ. ಹೆಚ್ಚು ಚಿಂತೆ ಮಾಡುವವರು ಎಂದಿಗೂ ದಪ್ಪವಾಗಿರಲು ಸಾಧ್ಯವಿಲ್ಲ.
ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?