International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಮುಂದುವರಿದಿದ್ದು, ಗಾಜಾದಲ್ಲಿರುವ ನಿರಾಶ್ರಿತರು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಜೀವ ರಕ್ಷಣೆ ಮಾಡಬೇಕಿದ್ದ ಆಹಾರವೇ, ಅವರ ಪ್ರಾಣ ತೆಗೆದಿದೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ, ಜನರನ್ನು ತಲುಪಬೇಕಿದ್ದ ಆಹಾರ, ನೇರವಾಗಿ ಜನರ ಮೈಮೇಲೆ ಬಿದ್ದು, ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಗಾಜಾದಲ್ಲಿ ಹಲವು ಪ್ಯಾಲೇಸ್ತೇನಿಯನ್ ನಿರಾಶ್ರಿತರು ವಾಸವಿದ್ದು, ಅವರಿಗೆಲ್ಲ ಆಹಾರ ನೀಡುವುದಕ್ಕಾಗಿ, ವಿಮಾನವೊಂದರಲ್ಲಿ ರಾಶಿ ರಾಶಿ ಆಹಾರ ತರಿಸಲಾಗಿತ್ತು. ಈ ವೇಳೆ ಆಹಾರ ತಲುಪಿಸಲು ಪ್ಯಾರಾಚೂಟ್ ಸಹಾಯ ತೆಗೆದುಕೊಂಡಿದ್ದು, ಆ ಪ್ಯಾರಾಚೂಟ್‌ಗಳು ಜನರ ಮೈಮೇಲೆ ಹೋಗಿ ಬಿದ್ದಿದೆ. ಪ್ಯಾರಾಚೂಟ್ ಬಿಟ್ಟಾಗ, ಅದು ಓಪೆನ್ ಆಗಿ, ಹೋದರೆ, ಸೇಫ್ ಆಗಿ ಭೂಮಿ ತಲುಪುತ್ತದೆ.
ಆದರೆ ಕೆಲ ಪ್ಯಾರಾಚೂಟ್‌ಗಳು, ತೆರೆದುಕೊಳ್ಳದೇ, ರಾಕೇಟ್‌ಗಳಂತೆ ಹಾರಿಹೋಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಐವರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಅಷ್ಟೇ ಅಲ್ಲದೇ, ಹಲವರು ಗಾಯಗೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಗುಂಡಿನ ದಾಳಿ ನಡೆದು, ಕಾಲ್ತುಳಿತಕ್ಕೆ ಒಳಗಾಗಿ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ಕೊಡಬೇಕಂತೆ 1 ಸಾವಿರ ರೂಪಾಯಿ..
ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ


