National Political News: ಗೋವಾದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಲೋಕಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ. ಉದ್ಯಮಿ ಪಲ್ಲವಿ ಡೆಂಪೋಗೆ ಬಿಜೆಪಿ ಟಿಕೇಟ್ ನೀಡಿದ್ದು, ಈ ಮೂಲಕ ಈಕೆ ಗೋವಾ ರಾಜ್ಯದಿಂದ ಬಿಜೆಪಿ ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಪಲ್ಲವಿ ಬರೀ ಉದ್ಯಮಿ ಮಾತ್ರವಲ್ಲ, ಈಕೆ ಶಿಕ್ಷಣ ತಜ್ಞೆಯೂ ಆಗಿದ್ದಾರೆ. ಡೆಂಪೋ ಕುಟುಂಬದವರು ಶಾಲೆಗಳನ್ನು ದತ್ತು ಪಡೆದು, ಬಡ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದೆ. 49 ವರ್ಷ ವಯಸ್ಸಿನ ಪಲ್ಲವಿ, ಹಲವು ಬ್ಯುಸಿನೆಸ್ ನಡೆಸುತ್ತಿದ್ದು, ಪುಣೆಯ ಎಂಐಟಿಯಿಂದ ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ದಕ್ಷಿಣ ಗೋವಾದಿಂದ ಪಲ್ಲವಿ ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಆದರೆ ಈ ಕ್ಷೇತ್ರದ್ಲಲಿ ಬಿಜೆಪಿ ಎರಡು ಬಾರಿ ಗೆಲುವು ಸಾಧಿಸಿದೆ. ಇದೀಗ ಪಲ್ಲವಿ ಇದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದು, ಗೆದ್ದರೆ, ಗೋವಾ ರಾಜ್ಯದಿಂದ ಬಿಜೆಪಿ ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಅಭ್ಯರ್ಥಿ ಅನ್ನುವ ಪಟ್ಟದ ಜೊತೆಗೆ ಮೊದಲ ಸ್ಪರ್ಧೆಯಲ್ಲೇ ಗೆಲುವು ಸಾಧಿಸಿದ ಮಹಿಳಾ ಅಭ್ಯರ್ಥಿ ಅನ್ನುವ ಹೆಮ್ಮೆಯೂ ಇವರದ್ದಾಗಲಿದೆ.
ಬಾಲಿವುಡ್ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..
ಗಾಲಿ ಜನಾರ್ಧನ ರೆಡ್ಡಿ ಮರಳಿ ಬಿಜೆಪಿಗೆ ಬಂದಿದ್ದು, ಬಾಹುಬಲಿ ರೀತಿಯಲ್ಲಿ ದೊಡ್ಡ ಶಕ್ತಿ ಬಂದಿದೆ: ಶ್ರೀರಾಮುಲು