ಹಾಸನ: ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ನಿಯಂತ್ರಣ ಅಧ್ಯಯನಕ್ಕೆ ಉನ್ನತಮಟ್ಟದ ತಂಡ ಭೇಟಿ ನೀಡಿತ್ತು. ಸಿಎಂ ಬಸವರಾಜ್ ಬೊಮ್ಮಯಿ ಸೂಚನೆಯಂತೆ ಇಂದಿನಿಂದ ಹಾಸನ, ಕೊಡಗು ಭಾಗದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು, ಬಾದಿತ ಪ್ರದೇಶದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಲಾಯಿತು.
ಹಾಸನದಲ್ಲಿ ಒಕ್ಕಲಿಗರ ಸಂಘದ ನೂತನ ವಿದ್ಯಾರ್ಥಿಗಳ ವಸತಿ ನಿಲಯ ಉದ್ಘಾಟನೆ..
ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅದಿಕಾರಿ ರಾಜ್ ಕಿಶೋರ್ ಸಿಂಗ್ ನೇತೃತ್ವದಲ್ಲಿ ಅಧ್ಯಯನ ತಂಡ ಪ್ರವಾಸ ಮಾಡಲಿದ್ದು, ಹಿರಿಯ ಅಧಿಕಾರಿಗಳು ವನ್ಯಜೀವಿ ತಜ್ಞ ರು ಸೇರಿ ಎಂಟು ಜನರ ತಂಡದಿಂದ ವನ್ಯಜೀವಿ ಬಾದಿತ ಪ್ರದೇಶಗಳಿಗೆ ಭೇಟಿ ನೀಡಿ, ಅಧಿಕಾರಿಗಳು, ಬಾದಿತ ಪ್ರದೇಶದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಲಾಗುತ್ತದೆ. ಇದಾದ ಬಳಿಕ ಈ ತಂಡ ಸಿಎಂಗೆ ವರದಿ ನೀಡಲಿದೆ.
ಮನೆಯಲ್ಲೇ ತಯಾರಿಸಿ ರುಚಿಕರ ಕ್ಯಾಬೇಜ್ ವಡೆ..
ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದು, ಪರಿಸರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಆನೆ ಹಿಡಿದು ರೇಡಿಯೋ ಕಾಲರ್ ಹಾಕೋದು ಬೇಡ. ಆ ತರ ಆನೆ ಹಿಡಿಯಬೇಡಿ, ಆನೆ ಹಿಡಿದು ತೋಟಕ್ಕೆ ಬಿಡಲು ಸುಮ್ಮನೆ ಸರ್ಕಾರಕ್ಕೆ ನಷ್ಟ, ದಂಡ. ಅವನ್ಯಾವನೋ ಪರಿಸರವಾದಿ ಆನೆ ಹಿಡಿಬೇಡಿ ಅಂತ ಹೇಳೋನೋ. ಅವನ್ನ ಹಿಡಿದುಕೊಂಡು ಮೆಟ್ನಲಿ ಹೊಡಿತಿವಿ ಹಂಗೇನಾದ್ರು ಮಾಡಿದ್ರೆ ಎಂದು ಹಿಗ್ಗಾಮುಗ್ಗಾ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ, ಮತ್ತೆ ನಮ್ಮ ತೋಟಕ್ಕೆ ಆನೆ ಬಂದರೆ ಹೊಡೆದು ಸಾಯಿಸುತ್ತೇವೆ ಎಂದು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೆದುರು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದ್ದಾರೆ. ನಿಮಗೆ ಆನೆ ಹಿಡಿಯಲು ಆಗದಿದ್ರೆ ಹೇಳಿ ಬಿಡಿ. ನಮ್ಮ ಪ್ರಾಣ ನಾವು ಉಳಿಸಿಕೊಳ್ಳಬೇಕು. ದೂರದೃಷ್ಠಿ, ವೈಜ್ಣಾನಿಕವಾದ ವರದಿ ಕೊಡಿ. ಸಿಎಂ ಇಲ್ಲಿಗೆ ಬರಲೇಬೇಕು. ಮಲೆನಾಡು ಜನರ ತಾಳ್ಮೆ ಪರೀಕ್ಷಿಸಬೇಡಿ ಎಂದು ಸಾರ್ವಜನಿಕ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.