Thursday, October 30, 2025

Latest Posts

NH 75 ರ ಕೋಲಾರ ರಸ್ತೆ ಅಟ್ಟೂರು ಗೇಟ್ ಬಳಿ ಭೀಕರ ಅಪಘಾತ ನಾಲ್ವರು ದುರ್ಮರಣ..!

- Advertisement -

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣ (Four have died on the spot) ಹೊಂದಿದ್ದಾರೆ. ಹೊಸಕೋಟೆ (Hoskote) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಕೋಲಾರ ರಸ್ತೆ ಅಟ್ಟೂರು ಗೇಟ್ ಬಳಿ ಘಟನೆ ನಡೆದಿದ್ದು, ಮೃತರು ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳು (Students of Garden City College) ಎಂದು ಗುರುತಿಸಲಾಗಿದೆ. ವೈಷ್ಣವಿ, ಭರತ್, ಸಿರಿಲ್, ವೆಂಕಟ್ ಮೃತ ದುರ್ದೈವಿಗಳು. ವೇಗಬಾಗಿ ಬಂದ ಕಾರು ಡಿಕ್ಕಿಯ ರಭಸಕ್ಕೆ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಮೃತಪಟ್ಟವರಲ್ಲಿ ಮೂರು ಜನ ಯುವಕರು ಹಾಗೂ ಒಬ್ಬ ಯುವತಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಹೊಸಕೋಟೆ ಸಿಪಿಐ ಮಂಜುನಾಥ್ (CPI Manjunath) ಬೇಟಿ ಪರಿಶೀಲನೆ ನೆಡೆಸಿದ್ದಾರೆ. ಮೃತದೇಹಗಳು ಎಂವಿಜೆ ಆಸ್ಪತ್ರೆಗೆ ಶೀಪ್ಟ್ ಮಾಡಲಾಗಿದ್ದು ಗಾಯಾಗೊಂಡಿದ್ದ ಇಬ್ಬರಿಗೆ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದ್ದು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (case has been registered at Hoskote police station) ದಾಖಲಾಗಿದೆ.

                                                                                                 ಅಭಿಜಿತ್,ಕರ್ನಾಟಕ ಟಿವಿ,ದೊಡ್ಡಬಳ್ಳಾಪುರ.

- Advertisement -

Latest Posts

Don't Miss