Sunday, September 8, 2024

Latest Posts

ಈಗ ರೆಸ್ಟೋರೆಂಟ್ ಸ್ಟೈಲ್ ಫ್ರೈಡ್ ರೈಸ್ ಮನೆಯಲ್ಲೇ ತಯಾರಿಸಬಹುದು…

- Advertisement -

ರೆಸ್ಟೋರೆಂಟ್‌ಗಳಲ್ಲಿ ಸಿಗುವ ಚೈನೀಸ್ ತಿಂಡಿ ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಮಂಚೂರಿ, ನೂಡಲ್ಸ್ ಸೇರಿ ಹೀಗೆ ಹಲವು ಚೈನೀಸ್ ತಿಂಡಿ ಇಷ್ಟಪಡುವವರು, ಫ್ರೈಡ್ ರೈಸನ್ನ ಕೂಡ ಇಷ್ಟ ಪಡ್ತಾರೆ. ಇದನ್ನ ನೀವು ಮನೆಯಲ್ಲೇ ಡಿನ್ನರ್ ಅಥವಾ ಲಂಚ್‌ಗೆ ತಯಾರಿಸಿ ತಿನ್ನಬಹುದು.

ಪನೀರ್ ಪೆಪ್ಪರ್ ಫ್ರೈ ಹೀಗೆ ತಯಾರಿಸಿ ನೋಡಿ..

ಬೇಕಾಗುವ ಸಾಮಗ್ರಿ: ಒಂದು ಬೌಲ್ ಬಾಸುಮತಿ ಅಕ್ಕಿ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, ಎರಡು ಸಣ್ಣಗೆ ಹೆಚ್ಚಿದ ಕ್ಯಾರೆಟ್, ಕೊಂಚ ಬೀನ್ಸ್, ಒಂದು ಕ್ಯಾಪ್ಸಿಕಂ, ಕೊಂಚ ಸ್ಪ್ರಿಂಗ್ ಆನಿಯನ್, 2 ಹಸಿಮೆಣಸಿನಕಾಯಿ, ಸಣ್ಣ ತುಂಡು ಹಸಿ ಶುಂಠಿ, 10 ಎಸಳು ಬೆಳ್ಳುಳ್ಳಿ, 4 ಸ್ಪೂನ್ ಎಣ್ಣೆ, 2 ಸ್ಪೂನ್ ಸೋಯಾ ಸಾಸ್, 2 ಸ್ಪೂನ್ ಚಿಲ್ಲಿ ಸಾಸ್, 2 ಸ್ಪೂನ್ ಟೊಮೆಟೋ ಸಾಸ್, 1 ಸ್ಪೂನ್ ವಿನೇಗರ್, ಕಾಲು ಸ್ಪೂನ್ ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಸಂಜೆ ತಿನ್ನಲು ಬೆಸ್ಟ್ ತಿಂಡಿ ಈ ರಗ್ಡಾ ಪ್ಯಾಟ್ಟೀಸ್..

ಮಾಡುವ ವಿಧಾನ: ಮೊದಲು ಬಾಸುಮತಿ ಅಕ್ಕಿಯಿಂದ ಅನ್ನ ತಯಾರಿಸಿ, ತಣಿಯಲು ಬಿಡಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಜಿಂಜರ್ ಹಾಕಿ ಹುರಿಯಿರಿ. ಈಗ ಈರುಳ್ಳಿ ಹಾಕಿ ಹುರಿಯಿರಿ. ಇದಾದ ಬಳಿಕ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಬಾಡಿಸಿ.

ರೆಸ್ಟೋರೆಂಟ್ ಸ್ಟೈಲ್ ಪಾಲಕ್ ಸೂಪ್ ಈಗ ಮನೆಯಲ್ಲೇ ತಯಾರಿಸಿ..

ಇದಕ್ಕೆ ಉಪ್ಪು, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಸಾಸ್, ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿ, ಈಗ ಇದ್ಕಕೆ ಅನ್ನ, ಸ್ಪ್ರಿಂಗ್ ಆನಿಯನ್ ವಿನೇಗರ್ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಫ್ರೈಡ್ ರೈಸ್ ರೆಡಿ.

- Advertisement -

Latest Posts

Don't Miss