Wednesday, February 5, 2025

Latest Posts

ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..

- Advertisement -

ಶುಗರ್ ಬಂದ್ರೆ ಎಷ್ಟು ಕಷ್ಟ ಅನ್ನೋದು ಅದನ್ನ ಅನುಭವಿಸಿದವರಿಗೇ ಗೊತ್ತು. ಯಾಕಂದ್ರೆ ಎದುರಿಗೇ ಸ್ವೀಟ್‌ ಇದ್ದರೂ ಸ್ವೀಟನೆಸ್ ಮಾತ್ರಾ ದೂರವಿರತ್ತೆ. ತಿನ್ನಬೇಕು ಅನ್ನಿಸಿದರೂ ಕೈ ಕಟ್ಟಿಹಾಕಿದ ಪರಿಸ್ಥಿತಿ. ಅದರಲ್ಲೂ ಸಿಹಿ ಪ್ರಿಯರಿಗೆ ಶುಗರ್ ಬಂದ್ರೆ, ಅದು ಇನ್ನೂ ಹಿಂಸೆ. ಆದ್ರೆ ನೀವು ಕೆಲವು ಹಣ್ಣುಗಳನ್ನು ಆರಾಮವಾಗಿ ತಿನ್ನಬಹುದು. ಇಂದು ನಾವು ಶುಗರ್ ಬಂದವರೂ ಕೂಡ ಯಾವ 5 ಹಣ್ಣನ್ನು ತಿನ್ನಬಹುದು ಅಂತಾ ತಿಳಿಯೋಣ ಬನ್ನಿ..

ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..

ಪಪ್ಪಾಯಿ ಹಣ್ಣು: ಪಪ್ಪಾಯಿ ಹಣ್ಣು ಎಷ್ಟು ಆರೋಗ್ಯಕರ ಹಣ್ಣು ಅಂದ್ರೆ ಇದರ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಇದನ್ನು ಲಿಮಿಟಿನಲ್ಲಿ ತಿನ್ನಬೇಕಷ್ಟೇ. ಹೆಚ್ಚು ತಿಂದ್ರೆ ಉಷ್ಣ ಹೆಚ್ಚಾಗುತ್ತದೆ. ಹಾಗಾಗಿ ಗರ್ಭಿಣಿಯರು ಪಪ್ಪಾಯಿ ಹಣ್ಣನ್ನು ತಿನ್ನಬಾರದು ಅಂತಾ ಹೇಳುವುದು. ಶುಗರ್ ಇದ್ದವರು ಪಪ್ಪಾಯಿ ಹಣ್ಣನ್ನ ಲಿಮಿಟಿನಲ್ಲಿ ತಿನ್ನಬಹುದು. ವಾರಕ್ಕೊಮ್ಮೆ ತಿಂದರೂ ನಡೆಯುತ್ತೆ.

ಪೇರಲೆ ಹಣ್ಣು:  ಪೇರಲೆ ಹಣ್ಣಿನ ಸೇವನೆಯಿಂದಲೂ ನೀವು ಶುಗರ್ನ್ನು ಕಂಟ್ರೋಲಿನಲ್ಲಿಡಬಹುದು. ಇದರ ಸೇವನೆಯಿಂದ ದೇಹದಲ್ಲಿ ಶಕ್ತಿ ಬರುತ್ತದೆ. ನೀವು ಒಂದು ಆ್ಯಪಲ್ ತಿನ್ನುವ ಬದಲು, ಒಂದು ಪೇರಲೆ ಹಣ್ಣು ತಿಂದ್ರೆ ಸಾಕು. ಶುಗರ್ ಇದ್ದವರು ಆರಾಮವಾಗಿ ಈ ಹಣ್ಣಿನ ಸೇವನೆ ಮಾಡಬಹುದು.

ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?

ಮೆಂಗೋಸ್ಟಿನ್:  ಇದು ವಿದೇಶಿ ಹಣ್ಣು, ಇದೀಗ ಭಾರತದ ಮಾರುಕಟ್ಟೆಯಲ್ಲೂ ಕೂಡ ಇದು ಲಭ್ಯವಾಗುತ್ತಿದೆ. ಈ ಹಣ್ಣನ್ನ ಕೂಡ ಶುಗರ್ ಇದ್ದವರು ಸೇವಿಸಬಹುದು.

ಕಲ್ಲಂಗಡಿ ಹಣ್ಣು:  ಮಾವಿನ ಹಣ್ಣನ್ನ ಹೇಗೆ ಎಲ್ಲರೂ ಪ್ರೀತಿಸುತ್ತಾರೋ, ಅದೇ ರೀತಿ ಹಲವರಿಗೆ ಕಲ್ಲಂಗಡಿ ಹಣ್ಣು ಬಲು ಇಷ್ಟವಾದ ಹಣ್ಣಾಗಿದೆ. ಇದು ಆರೋಗ್ಯಕ್ಕೂ ಉತ್ತಮ ತಿನ್ನಲು ಸಖತ್ ರುಚಿಯಾಗಿರತ್ತೆ. ಶುಗರ್ ಇದ್ದವರು ಕಲ್ಲಂಗಡಿ ಹಣ್ಣನ್ನ ತಿನ್ನಬಹುದು. ಸೈಂಧವ ಲವಣದ ಜೊತೆ ತಿಂದ್ರೆ ಇನ್ನೂ ಒಳ್ಳೆಯದು.

ಕೋಕಂ: ಇದು ಸಿಹಿಯಾದ ಹಣ್ಣಲ್ಲ. ಆದ್ರೆ ನೀವು ಕೋಕಂ ಜ್ಯೂಸ್ ಮಾಡಿ ಕುಡಿಯಬಹುದು. ಕೋಕಂ ಬಳಸಿ, ಬೆಳ್ಳುಳ್ಳಿ ಒಗ್ಗರಣೆ ಹಾಕಿ, ಸಾರು ಮಾಡುತ್ತಾರೆ. ಇದು ರುಚಿಕರವಲ್ಲದೇ, ಆರೋಗ್ಯಕರವೂ ಹೌದು.

- Advertisement -

Latest Posts

Don't Miss