Thursday, April 25, 2024

Latest Posts

ಇಂಧನ ಉಳಿತಾಯಕ್ಕೆ ದಾರಿಯಾವುದಯ್ಯಾ

- Advertisement -

special story

ಇಲ್ಲಿದೆ ನೋಡಿ ದಾರಿ ನಿಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಸಹುದ್​ಯೋಗಿಗಳು ಇಬ್ಬರು ಮೂರು ಜನರ ಮನೆಗಳು ಒಂದೆ ದಾರಿಯಲ್ಲಿ ಇದೇಯೇನು .ನಿಮ್ಮ ಅಥವಾ ನಿಮ್ಮ ಸಹದ್ಯೋಗಿಯ ಹತ್ರ ಕಾರು ಇದೆಯಾ ಹೋಗ್ಲಿ ಬಿಡಿ ಯಾರ ಹತ್ತಿರನಾದ್ರೂ ಇರ್ಲಿ. ನೀವು ಒಂದು
ಕೆಲಸ ಮಾಡಿ. ನಾಳೆಯಿಂದ ಬರುವಾಗ ಇಬ್ಬರು ಒಂದೆ ಕಾರಿನಲ್ಲಿ ಬನ್ನಿ ನೀವು ಒಂದು ಬಾರಿ ಇಂಧನ ಹಾಕಿಸಿ ಅವರು ಒಂದು ಭಾರಿ ಇಂಧನ ಹಾಕಿಸಲಿ. ಅಥವಾ ನಿಮ್ಮ ಕಾರನ್ನು ಒಂದು ದಿನ ಹೊರಗಡೆ ತೆಗೆಯಿರಿ ಅವರ ಒಂದು ದಿನ ಹೊರಗೆ ತೆಗೆಯಲಿ.
ನೀವು ವಾರಕ್ಕೆ ಒಂದು ಬಾರಿ ಇಂದನ ಹಾಕಿಸುತ್ತಿದ್ದರೆ. ಈ ರೀತಿ ಮಾಡುವುದರಿಂದ ಹಣ ಮತ್ತು ಇಂಧನ ಉಳಿತಾಯವನ್ನು ಮಾಡಿ ಎರಡು ವಾರಕ್ಕೊಮ್ಮೆ ಇಂಧನ ಹಾಕಿಸಬಹುದು.ತಿಂಗಳ ಸಂಬಳವನ್ನು ಇನ್ನೂ ಹಚ್ಚಿನ ಉಳಿತಾಯವನ್ನು ಮಾಡಬಹುದು. ಹಾಗೆಯೆ
ಆರೋಗ್ಯವನ್ನು ಕಾಪಾಡಿಕೊಳ್ಳಬಹುದು .ಅರೆ ಇದೇನಿದು ಇಬ್ಬರು ಒಂದೇ ಕಾರಿನಲ್ಲಿ ಹೋಗುವುದರಿಂದ ಹಣ ಉಳಿಸಬಹುದು ಅದು ಗೊತ್ತಾಯ್ತು ಆದರೆ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು. ಎಂಬ ಅನುಮಾನ ಶುರುವಾಗಿರುವುದು ಖಂಡಿತ
ಅದಕ್ಕೆ ಉತ್ತರ ನಾನು ಕೊಡ್ತಿನಿ.
ನೀವು ಪ್ರತಿದಿನ ವಾಹನ ಚಲಾಯಿಸುತ್ತಿದ್ದರೆ ಬೆನ್ನು ನೋವು ,ಕಾಲು ನೋವು,ಮತ್ತು ಗಾಡಿ ಓಡಿಸುವಾಗ ನಿದ್ರೆ ಬಂದಹಾಗೆ ಆಗುವುದು ಉಂಟು.ಹಾಗಾಗಿ ಇಬ್ಬರು ಒಂದೇ ವಾಹನದಲ್ಲಿ ಹೋಗುವುದರಿಂದ ಅವರಿಗೆ ಓಡಿಸಲು ಬೇಸರವಾದಾಗ ನೀವು ಮತ್ತು ನಿಮಗೆ ಬೇಸರವಾದಾಗ ಅವರು
ಓಡಿಸುವುದರಿಂದ ಇಬ್ಬರು ಆರಾಮವಾಗಿ ಇರಬಹುದು. ಇಬ್ಬರಲ್ಲಿ ಯಾರಿಗೂ ಆಯಾಸ ವಾಗುವುದಿಲ್ಲ .ಹೌದಲ್ಲವೆ ?
ಇನ್ನೊಂದು ವಾಹನ ಚಾಲಕರು ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಟ್ರಾಫಿಕ್ ಸಮಸ್ಯೆ ಒಬ್ಬೊಬ್ಬರು ಒಂದೊಂದು ವಾಹನದಲ್ಲಿ ಓಡಾಡುವುದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಜಾಸ್ತಿಯಾಗುತ್ತದೆ. ಇದರಿಂದಾಗಿ ಹೊರಗಡೆ ಹೋಗುವ ನಿಮಗೆ ರಸ್ತೆಯಲ್ಲಿಯೆ ಸಮಯ ಹಾಳಾಗುತ್ತದೆ, ಮುಂದಿನ
ನಿಮ್ಮ ಕೆಲಸಕ್ಕೆ ವಿಳಂಬವಾಗುತ್ತದೆ. ನಿಮಗೆ ಮಾತ್ರವಲ್ಲದೆ ಇನ್ನೂ ಹಲವಾರು ವಾಹನ ಸವಾರರಿಗೂ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರತಿ ದಿನಾನು ಒಂದೇ ಕಡೆ ಹೋಗುವಂತವರು ಒಂದೇ ವಾಹನದಲ್ಲಿ ಇಬ್ಬರು ಅಥವಾ ಮೂರು ಜನ ಓಡಾಡುವುದರಿಂದ ವಾಹನ ದಟಟ್ಟಣೆ ಕೊಂಚ ಮಟ್ಟಿಗೆ
ಕಡಿಮೆ ಮಾಡಬಹುದು. ನೋಡಿ ನೀವು ಮಾಡುವ ಒಂದು ಸಣ್ಣ ಬದಲಾವಣೆಯಿಂದ ಇಷ್ಟು ಉಳಿತಾಯ ಮಾಡಬಹುದು.ಇದು ನುಮಗೆ ಸರಿ ಅನಿಸಿದರೆ ನೀವು ಒಂದು ಸಾರಿ ಟ್ರೈ ಮಾಡಿ ನೋಡಿ

ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ..? ನಿಮ್ಮ ಶರೀರದಲ್ಲಿ ನೀರಿನಾಂಶ ಹೀಗೆ ಹೆಚ್ಚಿಸಿ..!

ಮಕ್ಕಳಿಗೆ ಹಣಕಾಸಿನ ಬಗ್ಗೆ ಅರಿವು ಮೂಡಿಸಿ

ಅಳುವುದರಿಂದ ಆಗುವ ಪ್ರಯೋಜನಗಳು ತಿಳಿದಿದೆಯೇ..?

- Advertisement -

Latest Posts

Don't Miss