Sunday, September 8, 2024

Latest Posts

ಯುದ್ಧ ವಿಮಾನದಿಂದ ಕಳಚಿ ಬಿದ್ದ ತೈಲ ಟ್ಯಾಂಕ್- ತಪ್ಪಿದ ಭಾರೀ ಅನಾಹುತ..!

- Advertisement -

ತಮಿಳುನಾಡು: ಭಾರತೀಯ ವಾಯುಪಡೆಯ ಯುದ್ಧ ವಿಮಾನ ‘ತೇಜಸ್’ ದಿಂದ ಏಕಾಏಕಿ ಬೃಹತ್ ತೈಲ ಟ್ಯಾಂಕ್ ರೈತನ ಜಮೀನಿನಲ್ಲಿ ಕಳಚಿಬಿದ್ದಿದೆ.

ಇಂದು ಬೆಳಗ್ಗೆ 8.30ರ ಸುಮಾರನಲ್ಲಿ ಈ ಘಟನೆ ಸಂಭವಿಸಿದ್ದು, ಎಂದಿನಂತೆ ವಾಯುಪಡೆ ಅಧಿಕಾರಿಗಳು ಕರ್ತವ್ಯ ನಿಭಾಯಿಸುತ್ತಿದ್ರು. ಆದ್ರೆ ಸೇನಾ ಅಧಿಕಾರಿಗಳ ಗಮನಕ್ಕೆ ಬಾರದ ರೀತಿಯಲ್ಲಿ ಯುದ್ಧ ವಿಮಾನ ‘ತೇಜಸ್’ ನಿಂದ ಬೃಹತ್ ಗಾತ್ರದ ಫುಯೆಲ್ ಟ್ಯಾಂಕ್ ಕಳಚಿಕೊಂಡಿದೆ. ಇನ್ನು ಕೊಯಮತ್ತೂರಿನ ಬಳಿ ರೈತನ ಜಮೀನಿನಲ್ಲಿ ಬಿದ್ದ ತೈಲ ಟ್ಯಾಂಕ್ ನಿಂದಾಗಿ ಜಮೀನಿನಲ್ಲಿ ಸುಮಾರು 3 ಅಡಿ ಗುಂಡಿ ಬಿದ್ದಿದೆ. ಇನ್ನು ಎತ್ತರದಿಂದ ಈ ಟ್ಯಾಂಕ್ ಬಿದ್ದ ರಭಸಕ್ಕೆ ಜಮೀನಿನಲ್ಲಿ ಸ್ಫೋಟ ಸಂಭವಿಸಿದೆ. ಸುಮಾರು 1200 ಲೀಟರ್ ತೈಲ ಹೊಂದಿದ್ದ ಟ್ಯಾಂಕ್ ಸ್ಫೋಟಗೊಂಡರೂ ಅದೃಷ್ಟವಶಾತ್ ಜಮೀನಿನ ಸುತ್ತ ಯಾರೂ ಸುಳಿಯದೆ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಒಂದು ವೇಳೆ ಜನಸಂದಣಿ ಇರೋ ಪ್ರದೇಶದಲ್ಲಿ ಈ ಟ್ಯಾಂಕ್ ಬಿದ್ದಿದ್ದರೆ ದೊಡ್ಡದೊಂದು ಅನಾಹುತ ನಡೆದೇ ಹೋಗುತ್ತಿತ್ತು. ಇನ್ನು ಘಟನೆ ಬಳಿಕ ಸುಲೂರ್ ವಾಯು ನೆಲೆಯಲ್ಲಿ ಯುದ್ಧ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಇನ್ನು ತೈಲ ಟ್ಯಾಂಕ್ ಹೇಗೆ ಕಳಚಿ ಬಿತ್ತು ಅನ್ನೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಘಟನೆ ಕುರಿತು ವಾಯುಪಡೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಚಿನ್ನದ ಗ್ರಹದತ್ತ ಹೆಜ್ಜೆ ಹಾಕುತ್ತಿದೆ ನಾಸಾ..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=kBp3mkphfmg
- Advertisement -

Latest Posts

Don't Miss