Festival Recipe: ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರಲಿದೆ. ಈ ದಿನ ಹಿಂದೂಗಳು ತರಹೇವಾರಿ ತಿಂಡಿಗಳನ್ನನು ಮಾಡಿ, ಗಣೇಶನಿಗೆ ನೈವೇದ್ಯ ಮಾಡುತ್ತಾರೆ. ಅದರಲ್ಲಿ ಮುಖ್ಯವಾದ ನೈವೇದ್ಯ ಅಂದರೆ, ಕಡ್ಲೆ ಪಂಚಕಜ್ಜಾಯ. ಹಾಗಾಗಿ ಇಂದು ನಾವು ಕಡ್ಲೆ ಪಂಚಕಜ್ಜಾಯ ರೆಸಿಪಿಯನ್ನು ಹೇಳಲಿದ್ದೇವೆ.
ಒಂದು ಕಪ್ ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು, ಘಮ ಬರುವವರೆಗೂ ಹುರಿಯಿರಿ. ಕಡ್ಲೆ ತಣ್ಣಗಾದ ಬಳಿಕ, ಎರಡು ಏಲಕ್ಕಿಯೊಂದಿಗೆ ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಕಾಲು ಕಪ್ ಬೆಲ್ಲ ಮತ್ತು ಕಾಲು ಕಪ್ ಕೊಬ್ಬರಿ ತುರಿ ಮತ್ತು ಪುಡಿ ಮಾಡಿದ ಕಡಲೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಕಡ್ಲೆ ಪಂಚಕಜ್ಜಾಯ ರೆಡಿ. ಇದಕ್ಕೆ ನೀವು ಹುರಿದ ಎಳ್ಳನ್ನು ಸೇರಿಸಿಕೊಳ್ಳಬಹುದು.
Ganesh Festival Special: ಗಣೇಶನಿಗೆ ಪ್ರಿಯವಾದ ಕಡಲೆ ಉಸುಳಿ ರೆಸಿಪಿ
ಇಲ್ಲಿ ಪೂಜೆ ಮತ್ತು ಗೃಹಾಲಂಕಾರ ವಸ್ತುಗಳ ಬೆಲೆ ಕೇವಲ 50 ರೂಪಾಯಿಯಂದ ಶುರುವಾಗುತ್ತದೆ..