Friday, December 13, 2024

Latest Posts

Ganesh Festival Special: ಗಣೇಶ ಚತುರ್ಥಿಗೆ ಮಾಡಬಹುದಾದ ಕೊಬ್ಬರಿ ಮೋದಕ

- Advertisement -

Festival Recipe: ಇನ್ನೆರಡು ದಿನಗಳಲ್ಲಿ ಗೌರಿ ಗಣೇಶ ಹಬ್ಬ ಬರುತ್ತಿದೆ. ಈ ದಿನ ಹಿಂದೂಗಳು ಗಣೇಶನಿಗಾಗಿ ರುಚಿ ರುಚಿ ನೈವೇದ್ಯ ತಯಾರಿಸುತ್ತಾರೆ. ಹಾಗಾಗಿ ನಾವಿಂದು ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಪ್ರಸಿದ್ಧ ಸಿಹಿ ತಿಂಡಿಯಾದ ಕೊಬ್ಬರಿ ಮೋದಕ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ.

ಮೊದಲಿಗೆ ಮೋದಕಕ್ಕೆ ಹಿಟ್ಟು ತಯಾರಿಸಿಕೊಳ್ಳಿ. ಒಂದು ಬೌಲ್ ಚಿರೋಟಿ ರವೆ, ಮೈದಾ ಹಿಟ್ಟು, ಕೊಂಚ ಉಪ್ಪು ಸೇರಿಸಿ, ಹಿಟ್ಟು ರೆಡಿ ಮಾಡಿ. ಈ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಬೇಕು.

ಈಗ ಹೂರಣ ರೆಡಿ ಮಾಡಿ. ಒಂದು ಪ್ಯಾನ್ ಬಿಸಿ ಮಾಡಿ, ಗಸಗಸೆ, ಎಳ್ಳನ್ನು ಸಪರೇಟ್ ಆಗಿ ಹುರಿದುಕೊಳ್ಳಿ. ಅವಶ್ಯಕತೆ ಇದ್ದಲ್ಲಿ, ಗೋಡಂಬಿ ಮತ್ತು ಬಾದಾಮಿಯನ್ನು ಹುರಿದು, ತುಂಡರಿಸಿ. ಒಣದ್ರಾಕ್ಷಿಯನ್ನೂ ಸೇರಿಸಬಹದು. ಹುರಿದ ಮಿಶ್ರಣವನ್ನ ಪಕ್ಕ್ಕಕಿರಿಸಿ. ಈಗ ಅದೇ ಪ್ಯಾನ್‌ಗೆ ತುಪ್ಪ ಮತ್ತು ಬೆಲ್ಲ ಹಾಕಿ ತೆಳ್ಳಗಿನ ಪಾಕ ತಯಾರಿಸಿ. ಬಳಿಕ ಒಂದು ಕಪ್ ಕೊಬ್ಬರಿ ತುರಿ ಸೇರಿಸಿ. ಹೂರಣ ಗಟ್ಟಿಯಾಗುತ್ತಿದ್ದಂತೆ, ಹುರಿದಿಟ್ಟ ಎಳ್ಳು, ಗಸಗಸೆ, ಡ್ರೈಫ್ರೂಟ್ಸ್, ಏಲಕ್ಕಿ ಪುಡಿ ಸೇರಿಸಿ. ಈ ಮಿಶ್ರಣ ತಣ್ಣಗಾಗಲು ಬಿಡಿ. ಈಗ ಹೂರಣ ರೆಡಿ.

ಆಗಲೇ ಕಲಿಸಿಟ್ಟುಕೊಂಡ ಹಿಟ್ಟನ್ನು ಸಣ್ಣ ಉಂಡೆಗಳಾಗಿ ತಯಾರಿಸಿ, ಲಟ್ಟಿಸಿ, ಅದರಲ್ಲಿ ಹೂರಣವನ್ನು ತುಂಬಿಸಿ, ಮೋದಕದ ಶೇಪ್ ಕೊಡಿ. ಎಣ್ಣೆ ಕಾದ ಬಳಿಕ ಮೋದಕ ತಿಳಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಕೆಲವರು ತುಪ್ಪದಲ್ಲಿ ಮೋದಕವನ್ನು ಕರಿಯುತ್ತಾರೆ. ಇದು ಕೂಡ ಆಗಬಹುದು.

ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ

- Advertisement -

Latest Posts

Don't Miss