Recipe: ನೀವು ಮಾವಿನಕಾಯಿ, ನಿಂಬೆಹಣ್ಣಿನ ಉಪ್ಪಿನಕಾಯಿ, ತರಕಾರಿ ಉಪ್ಪಿನಕಾಯಿನೂ ಮಾಡಿ ತಿಂದಿರಬಹುದು. ಆದರೆ ಇವೆಲ್ಲಕ್ಕಿಂತಲೂ ರುಚಿಯಾದ, ಅನ್ನ, ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಮ್ಯಾಚ್ ಆಗುವ ಉಪ್ಪಿನಕಾಯಿ ಅಂದ್ರೆ ಬೆಳ್ಳುಳ್ಳಿ ಉಪ್ಪಿನಕಾಯಿ. ಹಾಗಾಗಿ ನಾವಿಂದು ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
10 ರಿಂದ 20 ಎಸಳು ಬೆಳ್ಳುಳ್ಳಿ ತೆಗೆದುಕೊಂಡು, ಅದರ ಸಿಪ್ಪೆ ಬೇರೆ ಮಾಡಿ. ಬಳಿಕ ಅದನ್ನು ಚೆನ್ನಾಗಿ ತೊಳೆದು, ಒಂದು ಕಾಟನ್ ಬಟ್ಟೆಗೆ ಹಾಕಿ, ನೆರಳಲ್ಲೇ ಕೊಂಚ ಹೊತ್ತು ಒಣಗಿಸಿ. ಆಗ ಬೆಳ್ಳುಳ್ಳಿಗೆ ಅಂಟಿರುವ ನೀರು ಬೇರೆಯಾಗುತ್ತದೆ. ಈ ಈ ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡೋಕ್ಕೆ ರೆಡಿ.
ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ 5 ಸ್ಪೂನ್ ಎಣ್ಣೆ ಮತ್ತು ಬೆಳ್ಳುಳ್ಳಿ ಹಾಕಿ ಹುರಿಯಿರಿ. ಹಾಗೆ ಹುರಿಯಿರಿ. ಬೆಳ್ಳುಳ್ಳಿ ಹುರಿದ ಬಳಿಕ, ಅದನ್ನು ಒಂದು ಬೌಲ್‌ಗೆ ಹಾಕಿ. ಈಗ ಅದೇ ಪ್ಯಾನ್‌ಗೆ 3 ಟೇಬಲ್ ಸ್ಪೂನ್ ಎಳ್ಳೆಣ್ಣೆ ಹಾಕಿ. ಇಲ್ಲಿ ನೀವು ಎಳ್ಳೆಣ್ಣೆ ಬದಲು ಶೇಂಗಾ ಎಣ್ಣೆ, ತೆಂಗಿನ ಎಣ್ಣೆ ಯಾವುದೇ ಎಣ್ಣೆ ಬಳಸಬಹುದು. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ , ಒಂದು ಸ್ಪೂನ್ ಸಾಸಿವೆ, ಜೀರಿಗೆ, ಮೆಂತ್ಯೆ, ಚಿಟಿಕೆ ಹಿಂಗು, 3 ಹಸಿಮೆಣಸು, ಕೊಂಚ ಕರಿಬೇವು, ಒಂದು ಸ್ಪೂನ್ ಬೆಳ್ಳುಳ್ಳಿ- ಶುಂಠಿ- ಹಸಿಮೆಣಸಿನ ಪೇಸ್ಟ್ ಹಾಕಿ, ಚೆನ್ನಾಗಿ ಹುರಿಯಿರಿ.
ಇದಕ್ಕೆ 4 ಸ್ಪೂನ್ ಖಾರದ ಪುಡಿ ಸೇರಿಸಿ, ಹುರಿಯಿರಿ. ಇದಕ್ಕೆ ಅರ್ಧ ಕಪ್ ವಿನೇಗರ್, ಕಾಲು ಕಪ್ ಬೆಲ್ಲದ ಪುಡಿ, ಸೇರಿಸಿ. ನಿಮಗೆ ಸಿಹಿ ಹೆಚ್ಚು ಬೇಕಾದಲ್ಲಿ, ಇನ್ನಷ್ಟು ಸಕ್ಕರೆ ಬಳಸಬಹುದು. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿ, ಮಿಕ್ಸ್ ಮಾಡಿ. ಈ ಮಿಶ್ರಣ ಕುದಿಯುವಾಗ ಇದಕ್ಕೆ ಈಗಾಗಲೇ ಹುರಿದಿಟ್ಟುಕೊಂಡ ಬೆಳ್ಳುಳ್ಳಿ ಸೇರಿಸಿ, ಇನ್ನಷ್ಟು ಚೆನ್ನಾಗಿ ಹುರಿಯಿರಿ. ಈಗ ಬೆಳ್ಳುಳ್ಳಿ ಉಪ್ಪಿನಕಾಯಿ ರೆಡಿ. ಇದನ್ನು ಆರಿಸಿ, ಗಾಜಿನ ಡಬ್ಬದಲ್ಲಿರಿಸಿ. ಇದು ಹೆಚ್ಚು ದಿನ ಉಳಿಯಬೇಕಾದಲ್ಲಿ, ಫ್ರಿಜ್‌ನಲ್ಲಿರಿಸಿ.
ಇಂದಿನ ಊಟವನ್ನು ನಾಳೆ ಬಿಸಿ ಮಾಡಿಕೊಂಡು ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..?