Friday, November 22, 2024

Latest Posts

ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು?..

- Advertisement -

Spiritual: ಮಹಿಳೆಯರು ಮನೆಗೆ ಮಹಾಲಕ್ಷ್ಮೀ ಇದ್ದ ಹಾಗೆ. ಹಾಗಾಗಿ ಹಲವರಿಗೆ ಹೆಣ್ಣು ಮಕ್ಕಳ ಜನನದ ಬಳಿಕವೇ ಅದೃಷ್ಟ ಒಲಿಯುತ್ತದೆ. ಇಂದು ನಾವು ಯಾವ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರಾಗಿರುತ್ತಾರೆ ಅನ್ನೋ ಬಗ್ಗೆ ತಿಳಿಯೋಣ.

ಚೈತ್ರ ಮಾಸ. ಹಿಂದೂಗಳಿಗೆ ಪ್ರಥಮ ಮಾಸವಾದ ಚೈತ್ರ ಮಾಸದಲ್ಲಿ ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರಾಗಿರುತ್ತಾರೆ. ಈ ಹೆಣ್ಣು ಮಕ್ಕಳು ಜಾಣೆಯರಾಗಿರುತ್ತಾರೆ. ಎಲ್ಲ ಕೆಲಸವನ್ನು ಬೇಗ ಬೇಗ ಮಾಡಿ ಮುಗಿವಸುವಷ್ಟು ಬುದ್ಧಿವಂತರಾಗಿರುತ್ತಾರೆ. ಆದರೆ ಇವರಿಗೆ ಕೋಪ ಹೆಚ್ಚಾಗಿರುತ್ತದೆ. ಕೋಪ ಕಂಟ್ರೋಲಿನಲ್ಲಿದ್ದರೆ ಮಾತ್ರ ಇವರಿಗೆ ಅದೃಷ್ಟ ಒಲಿಯುತ್ತದೆ.

ವೈಶಾಖ ಮಾಸ. ಇದು ಎರಡನೇಯ ಮಾಸವಾಗಿದ್ದು, ಈ ಮಾಸದಲ್ಲಿ ಜನಿಸಿದವರು ಕೂಡ ಅದೃಷ್ಟವಂತ ಹೆಣ್ಣುಮಕ್ಕಳಾಗಿರುತ್ತಾರೆ. ವೈಷಾಖ ಮಾಸವನ್ನು ವಿಷ್ಣುವಿನ ಪ್ರಿಯ ಮಾಸವೆಂದು ಹೇಳಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ಜನಿಸಿದವರ ಮೇಲೆ ವಿಷ್ಣುವಿನ ಕೃಪೆ ಇರುತ್ತದೆ. ಕೋಮಲ ಸ್ವಭಾವದ ಇವರು, ಕುಟುಂಬಸ್ಥರನ್ನು, ಪತಿ-ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಹಾಗಾಗಿ ಇವರು ಯಾರ ಜೀವನದಲ್ಲಿ ಇರುತ್ತಾರೆ ಅವರು ಅದೃಷ್ಟವಂತರಾಗಿರುತ್ತಾರೆ.

ಜೇಷ್ಠ ಮಾಸದಲ್ಲಿ ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರಾಗಿರುತ್ತಾರೆ. ಇವರು ತಮ್ಮ ಬುದ್ಧಿವಂತಿಕೆಯಿಂದ ಧನಪ್ರಾಪ್ತಿ ಮಾಡಿಕೊಳ್ಳುತ್ತಾರೆ. ನಾಯಕತ್ವ ಸ್ವಭಾವದವರಾಗಿರುತ್ತಾರೆ. ಯೋಚನೆ ಮಾಡಿ ಮಾತನಾಡುವ ಇವರು, ದೇವರಲ್ಲಿ ಭಕ್ತಿ ಹೊಂದಿರುತ್ತಾರೆ. ಧರ್ಮಕಾರ್ಯದಲ್ಲಿ ತೊಡಿಸಿಕೊಂಡಿರುತ್ತಾರೆ.

ಆಷಾಢ ಮಾಸದಲ್ಲಿ ಜನಿಸಿದ ಹೆಣ್ಣು ಮಕ್ಕಳು ಅದೃಷ್ಟವಂತರಾಗಿರುತ್ತಾರೆ. ವರ್ಷಧಾರೆ ಶುರುವಾಗುವುದೇ ಈ ಮಾಸದಲ್ಲಿ. ಈ ಮಾಸದಲ್ಲಿ ದೇವಿಯ ಪೂಜೆಯನ್ನು ಮಾಡುವುದು ವಾಡಿಕೆಯಾಗಿದೆ. ಹಾಗಾಗಿ ಈ ಮಾಸದಲ್ಲಿ ಜನಿಸಿದ ಹೆಣ್ಣು ಮಕ್ಕಳ ಮೇಲೆ ದೇವಿಯ ಕೃಪೆ ಇರುತ್ತದೆ. ಈ ಹೆಣ್ಣು ಮಕ್ಕಳಿಗೆ ಜನಿಸುವ ಮಕ್ಕಳು ಕೂಡ ಅದೃಷ್ಟವಂತರೇ ಆಗಿರುತ್ತಾರೆ. ಏಕೆಂದರೆ ಅವರು ಹೆಚ್ಚು ಪರಿಶ್ರಮಿಯಾಗಿರುತ್ತಾರೆ.

ಶ್ರಾವಣ ಮಾಸ. ಶ್ರಾವಣ ಮಾಸದಲ್ಲಿ ಜನಿಸಿದ ಹೆಣ್ಣು ಮಕ್ಕಳ ಮೇಲೆ ಶಿವ-ಪಾರ್ವತಿಯ ಕೃಪೆ ಇರುತ್ತದೆ. ಇವರಿಗೆ ಹುಟ್ಟಿನಿಂದಲೂ, ಸಾವಿನವರೆಗೂ ಬಯಸದ ಭಾಗ್ಯಗಳು ಒಲಿದು ಬರುತ್ತದೆ. ಎಲ್ಲರನ್ನೂ ಕ್ಷಮಿಸುವ ಗುಣವಿರುವ ಇವರು, ತಾವು ತಪ್ಪು ಮಾಡಿದ್ದಲ್ಲಿ, ತಕ್ಷಣ ಕ್ಷಮೆ ಕೇಳುತ್ತಾರೆ. ಮತ್ತು ಮಾಡದ ತಪ್ಪಿಗೆ ಎಂದಿಗೂ ಬಗ್ಗುವವರಲ್ಲ.

ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?

ನೀವು ಶ್ರೀಮಂತರಾಗಬೇಕು ಎಂದಲ್ಲಿ, ವಿದುರನ ಈ ಮಾತು ಕೇಳಿ..

ಮುಟ್ಟಾದ ಮೂರು ದಿನಗಳವರೆಗೂ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು.. ಯಾಕೆ ಗೊತ್ತಾ..?

- Advertisement -

Latest Posts

Don't Miss